ತಲೆಹೊಟ್ಟು ಪ್ರತಿಯೊಬ್ಬರನ್ನು ಕಾಡುತ್ತಿರುವ ಸಮಸ್ಯೆಯಾಗಿ ಬಿಟ್ಟಿದೆ. ಆಧುನಿಕ ಜೀವನ ಶೈಲಿ ಮತ್ತು ಕಲುಷಿತ ವಾತಾವರಣವೇ ಇದಕ್ಕೆ ಮೂಲ ಕಾರಣವೆನ್ನಬಹುದು. ಮಕ್ಕಳಿಂದ ಹಿಡಿದು ದೊಡ್ಡವರ ತನಕ ತಲೆಹೊಟ್ಟು ಸಮಸ್ಯೆ ಇದೆ.
*ಲಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಆಮ್ಲೀಯ ಗುಣವು ತಲೆಹೊಟ್ಟನ್ನು ದೂರವಿಡುತ್ತದೆ. ಲಿಂಬೆಯ ರಸವನ್ನು ತೆಗೆದು ತಲೆಗೆ ಹಚ್ಚಬಹುದು ಅಥವಾ ನೇರವಾಗಿ ನಿಂಬೆಯನ್ನು ತಲೆಗೆ ಉಜ್ಜಬಹುದು.
*ಕೂದಲನ್ನು ಸರಿಯಾಗಿ ಒಣಗಿಸಿ ಮತ್ತು ಸ್ವಲ್ಪ ಅಡುಗೆ ಸೋಡಾವನ್ನು ಕೂದಲಿಗೆ ಸಿಂಪಡಿಸಿಕೊಂಡು ಮಸಾಜ್ ಮಾಡಿಕೊಳ್ಳಿ. ಶಾಂಪೂವಿನಿಂದ ತೊಳೆಯಿರಿ. ಅಡುಗೆ ಸೋಡಾವು ಫಂಗಿಗಳು ಅತಿಯಾಗಿ ಪ್ರತಿಕ್ರಿಯಿಸುವುದನ್ನು ತಡೆಯುತ್ತದೆ. ಇದರಿಂದ ತಲೆಬುರುಡೆಯು ಸ್ವಚ್ಛವಾಗಿರುತ್ತದೆ.
*ಮಾಗಿದ ಅರ್ಧ ಬಾಳೆಹಣ್ಣನ್ನು ತೆಗೆದುಕೊಂಡು ಸರಿಯಾಗಿ ಹಿಚುಕಿಕೊಂಡು ಅದಕ್ಕೆ ಒಂದು ಚಮಚ ಮೊಸರು ಮತ್ತು ನಾಲ್ಕು ಚಮಚ ಬಾದಾಮಿ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ತಲೆಗೆ ಹಚ್ಚಿಕೊಂಡು ಸರಿಯಾಗಿ ಮಸಾಜ್ ಮಾಡಿಕೊಳ್ಳಿ. 20 ನಿಮಿಷ ಬಿಟ್ಟು ಶಾಂಪೂವಿನಿಂದ ತೊಳೆಯಿರಿ.
*ಸಾಲಿಸ್ಯಲಿಕ್ ಆಮ್ಲವು ಹೊಂದಿರುವಂತಹ ಶಾಂಪೂವನ್ನು ಮಕ್ಕಳ ಕೂದಲಿಗೆ ವಾರದಲ್ಲಿ ಎರಡು ಸಲ ಬಳಸಿ. ಇದು ತಲೆಹೊಟ್ಟನ್ನು ನಿವಾರಿಸುತ್ತದೆ. ಆದರೆ ವೈದ್ಯರನ್ನು ಭೇಟಿಯಾಗಿ ಮಗುವಿಗೆ ಯಾವ ರೀತಿಯ ಶಾಂಪೂ ಬಳಕೆ ಮಾಡಬಹುದು ಎಂದು ತಿಳಿದುಕೊಂಡರೆ ಒಳ್ಳೆಯದು.
Comments are closed.