ರಾಷ್ಟ್ರೀಯ

1 ತಿಂಗಳು ಹೋರಾಟ ನಡೆಸಿದ್ದ ಕಿರಿಯ ವೈದ್ಯ ಕೊರೋನಾಗೆ ಚಿಕಿತ್ಸೆ ಫಲಿಸದೆ ಸಾವು

Pinterest LinkedIn Tumblr


ನವದೆಹಲಿ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ರೋಗಿಗಳ ಚಿಕಿತ್ಸೆಯಲ್ಲಿ ತೊಡಿಗಿಸಿಕೊಂಡಿದ್ದ ಡಾ. ಜೋಗಿಂದರ್ ಚೌಧರಿ ಅವರು ಕೊರೋನಾದಿಂದ ಸಾವನ್ನಪ್ಪಿದ್ದಾರೆ.

ಜೂನ್ 27 ರಂದು ಚೌಧರಿ ಅವರಿಗೆ ಕೊರೋನಾ ದೃಢ ಪಟ್ಟಿತ್ತು, ಆರಂಭದಲ್ಲಿ ಅವರು ಸರ್ಕಾರಿ ಸ್ವಾಮ್ಯದ ಲೋಕ ನಾಯಕ್ ಆಸ್ಪತ್ರೆಗೆ ದಾಖಲಿಸಿದ್ದರು, ಆದರೆ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಕುಟುಂಬಸ್ಧರು ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಿದ್ದರು, ಆದರೆ ಅಲ್ಲಿ ದುಬಾರಿ ಬಿಲ್ ಆಗಿತ್ತು. ಜೋಗಿಂದರ್ ಅವರ ಆಸ್ಪತ್ರೆ ಬಿಲ್ ಗಾಗಿ ಬಿಎಸ್ ಎ ಆಸ್ಪತ್ರೆ ವೈದ್ಯರು 3 ಲಕ್ಷ ರು. ಸಂಗ್ರಹಿಸಿ ನೀಡಿದ್ದರು, ಆದರೆ ಚೌಧರಿ ಅವರ ತಂದೆ ರೈತನಾಗಿದ್ದು, ಅವರಿಂದ ಅಷ್ಟು ಹಣ ಅವರಿಂದ ಭರಿಸಲು ಸಾಧ್ಯವಾಗಲಿಲ್ಲ.

ಹೀಗಾಗಿ ತಮ್ ಬಳಿ ಅಷ್ಟು ಹಣವಿಲ್ಲ ತಮ್ಮ ಮಗನ ಬಿಲ್ ಮನ್ನ ಮಾಡಬೇಕೆಂದು ಚೌಧರಿ ತಂದೆ ಗಂಗಾರಾಮ್ ಆಸ್ಪತ್ರೆ ಆಡಳಿತ ಮಂಡಳಿಗೆ ಪತ್ರ ಬರೆದಿದ್ದರು, ಇದನ್ನು ಗಮನಿಸಿದ ಆಸ್ಪತ್ರೆ ಅವರ ಎಲ್ಲಾ ಬಿಲ್ ಮನ್ನಾ ಮಾಡಿತ್ತು. ಆದರೆ ತಿಂಗಳ ನಂತರ ವೈದ್ಯ ಬದುಕುಳಿಯಲಿಲ್ಲ, ಕೊರೋನಾ ವಿರುದ್ಧ ಹೋರಾಟದಲ್ಲಿ ಕೊನೆಯುಸಿರೆಳೆದಿದ್ದಾರೆ.

Comments are closed.