ಆರೋಗ್ಯ

ಉಡುಪಿಯಲ್ಲಿ ಗುರುವಾರ ಮತ್ತೆ ಕೊರೋನಾಘಾತ: 109 ಮಂದಿಗೆ ಕೊರೋನಾ ಪಾಸಿಟಿವ್

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಗುರುವಾರದಂದು ಸೋಂಕಿತರ ಸಂಖ್ಯೆ ಶತಕ ದಾಟಿದೆ. ಗುರುವಾರ ಜಿಲ್ಲೆಯಲ್ಲಿ 109 ಹೊಸ ಕೊರೋನಾ ಪ್ರಕರಣಗಳು ದೃಢವಾಗಿದೆ.ಗುವ ಮೂಲಕ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿದೆ. ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 1895ಕ್ಕೆ ಏರಿಕೆಯಾಗಿದೆ.

ಈ ಪೈಕಿ 1462 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 428 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ದಿನದಲ್ಲಿ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು ಒಬ್ಬರು ಉಡುಪಿ ಮೂಲದವರಾದೆ ಇನ್ನೊಬ್ಬರು ಬೈಂದೂರು ತಾಲೂಕಿನ ಮರವಂತೆಯವರು.

ಜಿಲ್ಲೆಯಲ್ಲಿಂದು 537 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 489 ಮಾದರಿಯ ಫಲಿತಾಂಶ ನೆಗೆಟಿವ್ ಇದೆ. 109 ಮಾದರಿಯ ಫಲಿತಾಂಶ ಪಾಸಿಟಿವ್ ಆಗಿದೆ.

ಜಿಲ್ಲೆಯಲ್ಲಿ ಇದುವರೆಗೆ 23,645 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. ಅದರಲ್ಲಿ 21,156 ಜನರ ಮಾದರಿ ನೆಗೆಟಿವ್ ಆಗಿದ್ದರೆ, 1895 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ಫಲಿತಾಂಶ ಪಾಸಿಟಿವ್ ಆಗಿದೆ. ಇನ್ನೂ 594 ಮಾದರಿ ಫಲಿತಾಂಶ ಬಾಕಿಯಿದೆ.

Comments are closed.