ಕರಾವಳಿ

ಕೊನೆಗೂ ಪೊಲೀಸ್ ಬಲೆಗೆ ಬಿದ್ದ ಕುಖ್ಯಾತ ದರೋಡೆಕೋರ “ಶಮ್ಮಿ ಕಾಟಿಪಳ್ಳ”

Pinterest LinkedIn Tumblr

ಮಂಗಳೂರು / ಸುರತ್ಕಲ್ : ಎಎಸ್‌ಐಗೆ ರಾಡ್’ನಿಂದ ಮಾರಣಾಂತಿಕ ಹಲ್ಲೆಗೈದಿದ್ದ, ಕುಖ್ಯಾತ ದರೋಡೆ ಕೋರ, ಹಲ್ಲೆ, ಅಪಘಾತ ಸಹಿತ ಹತ್ತಕ್ಕೂ ಅಧಿಕ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಹಲವಾರು ಸಮಯಗಳಿಂದ ತಲೆ ತಪ್ಪಿಸಿಕೊಂಡು ತಿರುಗುತ್ತಿದ್ದ ಆರೋಪಿಯನ್ನು ಎಸಿಪಿ ಬೆಳ್ಳಿಯಪ್ಪ ನೇತೃತ್ವದ ಪಣಂಬೂರು ರೌಡಿ ನಿಗ್ರಹದಳ ಹಾಗೂ ಪಣಂಬೂರು ಠಾಣೆಯ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಕುಖ್ಯಾತ ದರೋಡೆಕೋರ ಶಮ್ಮಿ ಯಾನೇ ಶಮೀರ್ ಕಾಟಿಪಳ್ಳ (30)ನನ್ನು ಬೆಳ್ಳಿಯಪ್ಪ ನೇತೃತ್ವದ ಪಣಂಬೂರು ರೌಡಿ ನಿಗ್ರಹದಳ ಹಾಗೂ ಪಣಂಬೂರು ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ,, ಈತನ ಅಡಗುತಾಣದ ಬಗ್ಗೆ ಸುಳಿವು ಪಡೆದು ದಾಳಿ ನಡೆಸಿ ಬಂಧಿಸಿದ್ದಾರೆ.

ಈತ ಪಣಂಬೂರು ಬಂದರು ವ್ಯಾಪ್ತಿಯಲ್ಲಿ ಬರುವ ಲಾರಿ ಚಾಲಕರಿಗೆ ಹಲ್ಲೆಗೈದು ದರೋಡೆ ಮಾಡಿ ಪರಾರಿಯಾಗುತ್ತಿದ್ದ. ಮಾತ್ರವಲ್ಲದೇ ಬೆಂಜನ ಪದವಿನಲ್ಲಿ ದ್ವಿಚಕ್ರ ವಾಹನಕ್ಕೆ ತನ್ನ ವಾಹನ ಢಿಕ್ಕಿ ಹೊಡೆಸಿ ಪರಾರಿಯಾಗಿದ್ದ. ಈ ಹಿಂದೆ ಎಎಸ್ಐ ಒಬ್ಬರಿಗೆ ರಾಡ್ ನಿಂದ ಮಾರಣಾಂತಿಕ ಹಲ್ಲೆಗೈದಿದ್ದ. ಈತನ ವಿರುದ್ದ ಹಲವಾರು ವಾರೆಂಟ್ ಜಾರಿಯಾಗಿದ್ದು ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡು ತಿರುಗಾಡುತ್ತಿದ್ದ

ಬುಧವಾರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ನಡೆದ ಕಾರ್ಯಾಚರಣೆಯಲ್ಲಿ ಈತನ ಅಡಗುತಾಣದ ಬಗ್ಗೆ ಸುಳಿವು ಪಡೆದು ದಾಳಿ ನಡೆಸಿ ಬಂಧಿಸಲಾಯಿತು.

Comments are closed.