ಆರೋಗ್ಯ

ಯಾವ ಸ್ಥಿತಿಯ ನಿದ್ರಾ ಭಂಗಿಯನ್ನು ಮಹಿಳೆಯರು ಗರ್ಭಾವಸ್ಥೆಯಲ್ಲಿ ಮಾಡಬೇಕು..?

Pinterest LinkedIn Tumblr

ಗರ್ಭಾವಸ್ಥೆಯಲ್ಲಿ, ನೀವು ಹಾಸಿಗೆಯ ಮೇಲೆ ಮಲಗಿ ಆರಾಮದಾಯಕ ನಿದ್ರೆಯನ್ನು ಮಾಡಲು ಹರಸಾಹಸ ಮಾಡುವುದು ಸಾಮಾನ್ಯ. ಮತ್ತು ಈ ಸಮಯದಲ್ಲಿ ನಿಮಗೆ ಬೇಗನೆ ನಿದ್ರೆಯು ಬರುವುದಿಲ್ಲ. ದುರದೃಷ್ಟಕರ ವಿಷಯ ಎಂದರೆ, ನಿಮ್ಮ ಮೊದಲಿನ ಆರಾಮದಾಯಕ ನಿದ್ರೆಯ ಭಂಗಿ ಈಗ ನಿಮಗೆ ಅಷ್ಟು ಹಿತಕರವಾಗದೆ ಇರುವುದು.

ಗರ್ಭಾವಸ್ಥೆಯಲ್ಲಿ ಅಹಿತಕರ ನಿದ್ರೆಯನ್ನು ಅನುಭವಿಸಲು ನಿಮಗೆ ಸಾಕಷ್ಟು ಕಾರಣಗಳಿವೆ, ಆದರೆ ನಿಮಗೆ ಬೇಕಿರುವ ವಿಶ್ರಾಂತಿಯನ್ನು ಪಡೆಯಲು ಇಲ್ಲಿ ನೀಡಿರುವ ನಿದ್ರೆ ಭಂಗಿಯನ್ನು ಅನುಸರಿಸುವುದು ಸಹಾಯವಾಗುತ್ತದೆ.

ಗರ್ಭಿಣಿ ಆದ ನಂತರ  ಸಾಮಾನ್ಯ ನಿದ್ರೆ ಸ್ಥಿತಿ ಈಗ ಏಕೆ ಕಷ್ಟವಾಗುತ್ತಿದೆ?
ಗರ್ಭಿಣಿ ಆದ ನಂತರ  ದೇಹದಲ್ಲಿ ಹಲವು ಬದಲಾವಣೆಗಳು ಆಗುತ್ತವೆ. ಈ ಬದಲಾವಣೆಗಳು ನಿಮ್ಮ ಆರಾಮದಾಯಕ ನಿದ್ರೆಗೆ ಅಡೆತಡೆಗಳನ್ನು ಉಂಟು ಮಾಡುತ್ತದೆ.ನಿಮ್ಮ ಆರಾಮದಾಯಕ ನಿದ್ರೆಗೆ ತೊಂದರೆ ಆಗಲು ಕೆಲವು ಕಾರಣವೆಂದರೆ,

೧.ನಿಮ್ಮ ಉದರದ ಗಾತ್ರ ಹೆಚ್ಚಿರುವುದು

೨.ಬೆನ್ನು ನೋವು

೩.ಎದೆಯುರಿ

೪.ಕಡಿಮೆ ಉಸಿರಾಟ

೫.ನಿದ್ರಾಹೀನತೆ

      
ಗರ್ಭಾವಸ್ಥೆಯಲ್ಲಿ ಒಂದು ಉತ್ತಮ ನಿದ್ರಾ ಭಂಗಿ ಎಂದರೆ ಅದು ಮಗ್ಗುಲಾಗಿ ಮಲಗುವುದು. ಅದರಲ್ಲೂ ನೀವು ಎಡ ಮಗ್ಗುಲಾಗಿ ಮಲಗುವುದು ಇನ್ನು ಉತ್ತಮ. ಎಡ ಮಗ್ಗಲಗಿ ಮಲುಗುವುದರಿಂದ ನಿಮ್ಮ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗಿ ರಕ್ತದ ಜೊತೆಗೆ ಪೌಷ್ಟಿಕಾಂಶಗಳು ಕೂಡ ಸುಲಭವಾಗಿ ಜರಾಯುವಿನ ಮೂಲಕ ಮಗುವನ್ನು ತಲುಪಲು ಸಹಾಯವಾಗುತ್ತದೆ. ಇದರಿಂದ ಮಗುವಿಗೆ ಅವಶ್ಯವಿರುವ ಪೌಷ್ಟಿಕಾಂಶಗಳು ಸಿಗುತ್ತವೆ.

ನಿಮಗೆ ಬೆನ್ನು ನೋವು ಕಾಡುತ್ತಿದ್ದರೆ, ಮಗ್ಗಲಗಿ ಮಲಗುವುದು ಒಳ್ಳೆಯದು ಮತ್ತು ಈ ಸಮಯದಲ್ಲಿ ನಿಮ್ಮ ಹೊಟ್ಟೆಯ ಬಳಿ ದಿಂಬನ್ನು ಇರಿಸಿಕೊಳ್ಳುವುದು ನಿಮಗೆ ಸ್ವಲ್ಪ ಆರಾಮದಾಯಕ ನಿದ್ರೆಯನ್ನು ಮಾಡಲು ಅನುಕೂಲವಾಗುವುದು.

ನಿಮಗೆ ರಾತ್ರಿ ಸಮಯ ಎದೆಯುರಿ ಕಾಣಿಸಿಕೊಂಡರೆ ನೀವು ದಿಂಬನ್ನು ನಿಮ್ಮ ದೇಹಕ್ಕೆ ಆಧಾರವಾಗಿರಿಸಿಕೊಳ್ಳುವುದು ಉತ್ತಮ.

ಗರ್ಭಾವಸ್ಥೆಯ ಕೊನೆಯ ಭಾಗದಲ್ಲಿ, ಉಸಿರಾಟದಲ್ಲಿ ಏರುಪೇರನ್ನು ನೀವು ಅನುಭವಿಸಬಹುದು. ಈ ಸಂದರ್ಭ ನೀವು ಮಗ್ಗಲಗಿ ಮಲಗುವುದು ಆರಾಮವಾಗಿ ಉಸಿರಾಡಲು ಸ್ವಲ್ಪ ಸಹಾಯವಾಗುತ್ತದೆ. ತಲೆದಿಂಬನ್ನು ಆಧಾರವಾಗಿ ಇರಿಸಿಕೊಳ್ಳುವುದು ನಿಮಗೆ ಸಹಾಯಕ್ಕೆ ಬರುತ್ತದೆ.

ನೆನಪಿರಲಿ, ನೀವು ಸಾಮಾನ್ಯವಾಗಿ ಬೆನ್ನಿನ ಮೇಲೆ ಅಥವಾ ಉದರದ ಮೇಲೆ ಮಲಗುವ ವ್ಯಕ್ತಿಯಾಗಿದ್ದರೆ, ಇದು ನಿಮಗೆ ಪ್ರಾರಂಭದಲ್ಲಿ ಕಷ್ಟ ಅಥವಾ ಅಷ್ಟು ಆರಾಮವಲ್ಲ ಎಂದು ಅನಿಸಬಹುದು. ಆದರೆ ನಿಮ್ಮ ಮಗುವಿನ ಆರೋಗ್ಯ ದೃಷ್ಟಿಯಿಂದ ಇದನ್ನು ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು.

ನೀವು ರಾತ್ರಿ ಪುರ ಒಂದೇ ಮಗ್ಗುಲಾಗಿ ಮಲಗಬೇಡಿ, ನಿಮ್ಮ ಸ್ಥಿತಿಯನ್ನು ಬದಲಿಸುವುದು ಒಂದು ಉತ್ತಮ ಉಪಾಯ.
ಗರ್ಭಾವಸ್ಥೆಯಲ್ಲಿ ಆರಾಮದಾಯಕ ನಿದ್ರೆ ಮಾಡುವುದು ನಿಮ್ಮ ಮತ್ತು ಮಗುವಿನ ಆರೋಗ್ಯ ದೃಷ್ಟಿ ಇಂದ ಒಳ್ಳೆಯದು.

ಗರ್ಭಾವಸ್ಥೆಯಲ್ಲಿ ಯಾವ ಸ್ಥಿತಿಯ ನಿದ್ರಾ ಭಂಗಿಯನ್ನು ತಪ್ಪಿಸಬೇಕು?
ಬೆನ್ನಿನ ಮೇಲೆ ಮಲಗುವುದು : ಇದರಿಂದ ನಿಮಗೆ ಬೆನ್ನು ನೋವು, ಉಸಿರಾಡಲು ಕಷ್ಟವಾಗುವುದು, ಜೀರ್ಣ ಕ್ರಿಯೆಯಲ್ಲಿ ತೊಂದರೆ, ಕಡಿಮೆ ರಕ್ತದೊತ್ತಡ ಮತ್ತು ಹೃದಯದಿಂದ ಮಗುವಿಗೆ ರಕ್ತ ಸರಿಯಾಗಿ ಹರಿಯದೆ ಇರಬಹುದು. ಇಂತಹ ತೊಂದರೆಗಳನ್ನು ತಪ್ಪಿಸಲು ನೀವು ಬೆನ್ನಿನ ಮೇಲೆ ಮಲಗುವ ಅಭ್ಯಾಸವನ್ನು ಗರ್ಭಾವಸ್ಥೆಯಲ್ಲಿ ನಿಲ್ಲಿಸಬೇಕು.

ಉದರದ ಮೇಲೆ ಮಲಗುವುದು : ಗರ್ಭಾವಸ್ಥೆಯಲ್ಲಿ ನಿಮ್ಮ ಉದರ ಕಣ್ಣಿಗೆ ಕಾಣಿಸುವ ರೀತಿಯಲ್ಲಿ ಬದಲಾವಣೆಯನ್ನು ಹೊಂದುತ್ತದೆ. ನಿಮ್ಮ ಹೊಟ್ಟೆ ಉಬ್ಬಿರುವುದರಿಂದ ನಿಮಗೆ ಉದರದ ಮೇಲೆ ಮಲಗಲು ಅಷ್ಟು ಆರಾಮದಾಯಕ ಅಲ್ಲ ಎಂದು ಅನಿಸಬಹುದು, ನಿಮಗೆ ಆರಾಮದಾಯಕ ಎನಿಸಿದರೂ ಉದರದ ಮೇಲೆ ಮಲಗುವುದು ಗರ್ಭಪಾತದಂತಹ ತೊಂದರೆಯನ್ನು ಎದುರಿಸಬೇಕಾದ ಪರಿಸ್ಥಿತಿ ಬರುವ ಸಾಧ್ಯತೆಗಳು ಹೆಚ್ಚು.

Comments are closed.