ನಾವು ದಿನನಿತ್ಯ ಅಡುಗೆ ಮನೆಯಲ್ಲಿ ಉಪಯೋಗಿಸುವ ಒಂದು ಎಲೆಯನ್ನು ಸುಡುವುದರಿಂದ ಬರುವ ಹೊಗೆಯನ್ನು ಸೇವಿಸುವುದರಿಂದ ಮನಸ್ಸಿಗೆ ವಿಶ್ರಾಂತಿ ಸಿಗುತ್ತದಂತೆ. ಆ ಎಲೆ ಯಾವುದೆಂದರೆ.
ಬಿರ್ಯಾನೀ ಎಲೆ…ಬಿರ್ಯಾನೀ,ಮಸಾಲೆಯುಕ್ತ ರೈಸ್ ಗಳನ್ನು ತಿನ್ನುವವರಿಗೆ ಈ ಎಲೆ ಚಿರಪರಿಚಿತ. ಇಂಗ್ಲಿಷ್ ನಲ್ಲಿ ಬೇಲೀಫ್ ಹಿಂದಿಯಲ್ಲಿ ತೇಜ್ ಪತ್ತಾ ಎಂದು ಈ ಎಲೆಯನ್ನು ಕರೆಯುತ್ತಾರೆ. ಇದನ್ನು ಹಾಕುವುದರಿಂದ ಬಿರ್ಯಾನಿ ಗೆ ಸುವಾಸನೆ ಬರುತ್ತದೆ.
ಯಾವುದಾದರೂ ಸುವಾಸನೆಯನ್ನು ಸೇವಿಸಿದಲ್ಲಿ ಮನಸ್ಸಿಗೆ ಸಂತೋಷವುಂಟಾಗುತ್ತದೆ, ಪ್ರಶಾಂತವಾಗಿರುತ್ತದೆ. ಇದರಿಂದಾಗಿ ನಮ್ಮ ಮೆದುಳು ಸಹ ಚುರುಕಾಗಿರುತ್ತದೆ. ಹೀಗೆ ಕೆಲವು ಸುವಾಸನೆಗಳನ್ನು ಸೇವಿಸುವುದರಿಂದ ನಮಲ್ಲಿರುವ ಕೆಲವು ಕಾಯಿಲೆ ಗಳನ್ನು ಕಡಿಮೆಮಾಡಬಹುದು. ಈ ವಿಧಾನವನ್ನು ‘ಅರೋಮಾ ಥೆರಪಿ’ ಎನ್ನುತ್ತಾರೆ.
ಅನೇಕ ಮಂದಿ ವೈದ್ಯರುಗಳು ತಮ್ಮ ಬಳಿಗೆ ಬರುವ ರೋಗಿಗಳಿಗೆ ಈ ಚಿಕಿತ್ಸೆಯನ್ನು ನೀಡುತ್ತಾರೆ. ಅರೋಮಾ ಥೆರಪಿಯಿಂದ ನಮಗೆ ನೆಮ್ಮದಿ ದೊರೆಯುತ್ತದೆ.
ಊಟಕ್ಕೆ ಒಳ್ಳೆಯ ರುಚಿ ಹಾಗು ಸುವಾಸನೆಯನ್ನು ನೀಡುವ ಈ ಎಲೆ ಅರೋಮಾ ಥೆರಪಿ ಯಲ್ಲೂ ಉಪಯೋಗಕ್ಕೆ ಬರುತ್ತದೆ. ಹೇಗೆಂದರೆ…..
ಒಂದೆರಡು ಬಿರ್ಯಾನೀ ಎಲೆಗಳನ್ನು ಕೋಣೆಯಲ್ಲಿ ಸುಟ್ಟು,ಬಾಗಿಲಿಗಳನ್ನು 10 ನಿಮಿಷಗಳ ಕಾಲ ಮುಚ್ಚುವುದರಿಂದ ಕೋಣೆಯ ತುಂಬಾ ಹೊಗೆ ತುಂಬಿಕೊಂಡಿರುತ್ತದೆ. ಬಾಗಿಲು ತೆರೆದು ಒಳಗೆ ಹೋಗಿ ಈ ಹೊಗೆಯನ್ನು ಸೇವಿಸುವುದರಿಂದ ಮನಸ್ಸಿನ ತಳಮಳ,ಒತ್ತಡಗಳೆಲ್ಲಾ ಮಾಯವಾಗಿ ಮನಸ್ಸು ಉಲ್ಲಾಸಮಯವಾಗುತ್ತದೆ. ಕೋಣೆಯು ಸುವಾಸನೆಯಿಂದ ಕೂಡಿದ್ದು,ಸಣ್ಣ ಪುಟ್ಟ ಕೀಟಗಳು,ಸೊಳ್ಳೆಗಳು ಓಡಿಹೋಗುತ್ತವೆ.
Comments are closed.