ವೀಳ್ಯದೆಲೆಯಲ್ಲಿ ಆರೋಗ್ಯವನ್ನು ಹೆಚ್ಚಿಸುವ ಹಲವಾರು ಗುಣಗಳಿವೆ. ಮುಖ್ಯವಾಗಿ ಮಕ್ಕಳ ಆರೋಗ್ಯಕ್ಕೆ ವೀಳ್ಯದೆಲೆ ಬಹಳ ಉಪಯುಕ್ತ. ವಯಸ್ಸು ಹೆಚ್ಚಾಗುತ್ತಾ ಹೋದಂತೆ ಬೆಳವಣಿಗೆ ಕುಂಟಿತವಾಗುತ್ತಿದೆ ಎಂದು ಆತಂಕಪಡಬೇಕಿಲ್ಲ. ಎರಡು ವೀಳ್ಯದೆಲೆ ಜಗಿಯಿರಿ…ಅವುಗಳ ಕೆಲಸ ಅವು ಮಾಡಿಕೊಳ್ಳುತ್ತಾ ಹೋಗುತ್ತವೆ.
ಇನ್ನು ವೀಳ್ಯದೆಲೆಯಿಂದ ಆಗುವ ಉಪಯೋಗಗಳು ಏನು ಅಂತ ಈಗ ತಿಳಿದುಕೊಳ್ಳೋಣ.
ವೀಳ್ಯದೆಲೆಯನ್ನು ಎಳ್ಳೆಣ್ಣೆಯಲ್ಲಿ ನೆನೆಸಿ ಸ್ವಲ್ಪ ಬಿಸಿ ಮಾಡಿ ಮಕ್ಕಳ ಎದೆ ಮೇಲೆ ಉಜ್ಜಿದರೆ ಆಯಾಸ, ಕೆಮ್ಮಿನಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ವೀಳ್ಯದೆಲೆಯನ್ನು ಅರೆದು ತೆಗೆದ ರಸವನ್ನು ಗಾಯಗಳಿಗೆ ಹಚ್ಚಿದರೆ ಗಾಯಗಳು ಶೀಘ್ರ ಗುಣವಾಗುತ್ತವೆ. ಶುದ್ಧವಾದ ಕೊಬ್ಬರಿ ಎಣ್ಣೆಯಲ್ಲಿ ವೀಳ್ಯದೆಲೆಯಿಂದ ತೆಗೆದ ರಸವನ್ನು ಬೆರೆಸಿ ಬೆನ್ನಿನ ಹಿಂಭಾಗಕ್ಕೆ ಹಚ್ಚಿಕೊಂಡರೆ ಬೆನ್ನುನೋವು ಕಡಿಮೆಯಾಗುತ್ತದೆ.
ವೀಳ್ಯದೆಲೆ ರಸವನ್ನು ಕತ್ತಿನ ಭಾಗದಲ್ಲಿ ಹಚ್ಚಿಕೊಂಡರೆ ಗಂಡಲಲ್ಲಿ ಕಿರಿಕಿರಿ, ಗಂಟಲ ನೋವು, ಗಂಟಲ ಸೋಂಕಿನಂತಹ ಸಮಸ್ಯೆಗಳಿಂದ ಉಪಶಮವಾಗುತ್ತದೆ.
ಕೆಲವು ಹನಿ ವೀಳ್ಯದೆಲೆ ರಸವನ್ನು ಕಿವಿಯಲ್ಲಿ ಹಿಂಡಿದರೆ ಕಿವಿನೋವು ದೂರವಾಗುತ್ತದೆ. ಅಜೀರ್ಣ ಸಮಸ್ಯೆ ಇದ್ದಾಗ ವೀಳ್ಯದೆಲೆ ಜಗಿದರೆ ಉಪಶಮನ ಸಿಗುತ್ತದೆ. ಮೆತ್ತಗಾಗುವ ತನಕ ವೀಳ್ಯದೆಲೆಯನ್ನು ಬಿಸಿ ಮಾಡಿ ಅದರ ಮೇಲೆ ಹರಳೆಣ್ಣೆಯನ್ನು ಹಚ್ಚಿ ಸುಟ್ಟ ಗಾಯಗಳ ಮೇಲಿಟ್ಟರೆ, ಗಾಯ ಶೀಘ್ರವಾಗಿ ಗುಣವಾಗುತ್ತದೆ. ಈ ರೀತಿ ಗಂಟೆಗಂಟೆಗೂ ಮಾಡುತ್ತಿದ್ದರೆ ಉಳ್ಳೆಯ ಫಲಿತಾಂಶ ಪಡೆಯಬಹುದು. ಸಂಧಿನೋವಿನಿಂದ ಕೀಲುಭಾಗದಲ್ಲಿ ಬರುವ ನೋವಿನ ಮೇಲೆ ವೀಳ್ಯದೆಲೆಯನ್ನು ಸ್ವಲ್ಪ ಹೊತ್ತು ಇಟ್ಟರೆ ಆ ಭಾಗದಲ್ಲಿನ ಉರಿ, ಉಪಶಮನವಾಗುತ್ತದೆ.
ಗರ್ಭಿಣ ಸ್ತ್ರೀಯರಲ್ಲಿ ವಾಕರಿಕೆ, ಬಿಕ್ಕಳಿಕೆ ಉಂಟಾದಾಗ 2 ವೀಳ್ಯದೆಲೆಯಲ್ಲಿ ಅಡಿಕೆಯ ಚೂರನ್ನು ಇಟ್ಟು ಜೊತೆಗೆ 4 ಯಾಲಕ್ಕಿ ಕಾಳುಗಳನ್ನಿಟ್ಟು ಜಗಿದು ರಸ ಹೀರಿದರೆ ಶಮನಕಾರಿ. ಗಾಯ ಉಂಟಾದಾಗ, ತುರಿಕೆ ಕಜ್ಜಿಗಳಿಗೆ ವೀಳ್ಯದೆಲೆಯ ರಸದಲ್ಲಿ 4-6 ಹನಿ ನಿಂಬೆರಸ ಬೆರೆಸಿ ಹಚ್ಚಿದರೆ ಗುಣಕಾರಿ.ವೀಳ್ಯದೆಲೆಯನ್ನು ಕಾವಲಿಯ ಮೇಲೆ ಬೆಚ್ಚಗೆ ಮಾಡಿ, ಅದಕ್ಕೆ ಕರ್ಪೂರ ಬೆರೆಸಿದ ಕೊಬ್ಬರಿ ಎಣ್ಣೆಯನ್ನು ಲೇಪಿಸಿ, ಹಣೆಗೆ ಶಾಖ ನೀಡಿದರೆ ತಲೆನೋವು ಪರಿಹಾರವಾಗುತ್ತದೆ.
ವೀಳ್ಯದೆಲೆ ‘ಕೊಲೆಸ್ಟ್ರಾಲ್’ಮತ್ತು ಗಂಟಲಿನಲ್ಲಿನ ಅಂಟು ಕಫವನ್ನು ತೆಗೆದುಹಾಕುತ್ತದೆ. ಅನ್ನಜೀರ್ಣವಾಗಲು ಬೇಕಾಗುವ ನಾರುಮಯ ಹಾಗೂ ಗೆರೆಗಳಿರುವ ಪದಾರ್ಥವು ಈ ಎಲೆಯಿಂದ ಸಿಗುತ್ತದೆ. ಎಲೆಯಲ್ಲಿನ ಕ್ಷಾರತನವು ಜಂತುಗಳನ್ನು ನಾಶಪಡಿಸುತ್ತದೆ.
Comments are closed.