ಕರಾವಳಿ

ಅಲ್ಪಸಂಖ್ಯಾತರ ವಸತಿ ಕಾಲೇಜು : ಶೇ 100 ಫಲಿತಾಂಶ

Pinterest LinkedIn Tumblr

ಮಂಗಳೂರು ಜುಲೈ 16 : ಈ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮಂಗಳೂರಿನ ದೇರಳಕಟ್ಟೆ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶೇ 100 ಫಲಿತಾಂಶ ಬಂದಿರುತ್ತದೆ.

ಪರೀಕ್ಷೆಗೆ ಹಾಜರಾದ 32 ವಿದ್ಯಾರ್ಥಿಗಳಲ್ಲಿ 8 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 21 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಮತ್ತು 3 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಗೊಂಡಿದ್ದಾರೆ. ರಾಧಿಕಾ ಸಿದ್ದಪ್ಪ ಮುಂಜೆ 541, ಭಾಗ್ಯ ನಾಗಯ್ಯ ಹಿರೇಮಠ 540, ಅಂಬಿಕಾ ಎಸ್ ವೈ 534, ಫಾತೀಮತ್ ಝಕೀಯ 531, ಪ್ರೇಮಲತಾ ಕೆ 521 ಅಂಕ ಗಳಿಸಿದ್ದಾರೆ.

ಶೇ 100 ಫಲಿತಾಂಶಕ್ಕೆ ಕಾರಣರಾದ ಕಾಲೇಜು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಿರ್ದೇಶಕರು ಹಾಗೂ ದ.ಕ. ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳು ಅಭಿನಂದಿಸಿದ್ದಾರೆ.

2020-21 ನೇ ಸಾಲಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗಕ್ಕೆ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದ್ದು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8970707858 ಸಂಪರ್ಕಿಸಲು ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜಿನ ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.

Comments are closed.