ಆರೋಗ್ಯ

ಕಾಲ ಮೇಲೆ ಕಾಲು ಹಾಕಿ ಕೆಲಸ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದೀರಾ?

Pinterest LinkedIn Tumblr

ನಿಮಗೆ ಗೊತ್ತೇ ? ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವವರು ಬಲಗಾಲನ್ನು ತಮ್ಮ ಎಡಗಾಲಿನ ಮೇಲೆ ಹಾಕಿ ಕೆಲಸ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದೀರಾ / ಆರೋಗ್ಯ ದೃಷ್ಠಿಯಿಂದ ಅ ಪರಿಪಾಠವನ್ನು ಕೈಬಿಡುವುದು ಒಳಿತು.

ವ್ಯಕ್ತಿಯೊಬ್ಬರು ಕುರ್ಚಿಯಲ್ಲಿ ಕುಳಿತುಕೊಳ್ಳುವ ಭಂಗಿ ಅವರ ಅರೋಗ್ಯವನ್ನು ಕೆಡಿಸಬಹುದು, ಅದೇ ರೀತಿ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಲು ಯತ್ನಿಸುವುದು ಕೂಡ ಕೆಲವು ಸಲ ಸಮಸ್ಯೆಯನ್ನು ಸೃಷ್ಠಿಸಬಹುದು. ನಿಮಗೆ ಗೋತ್ತಾ? ನಾವು ಕುಳಿತುಕೊಳ್ಳುವ ಭಂಗಿ ಕೂಡ ನಮ್ಮ ದೇಹದ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಬಹುದು ಹೌದು ಈ ಸಂಗತಿಯನ್ನು ತಜ್ಞರೇ ದೃಢಪಡಿಸಿದ್ದಾರೆ.

ವಿವಿಧ ಅಧ್ಯಯನಗಳ ಪ್ರಕಾರ , ಈ ರೀತಿಯ ಅಭ್ಯಾಸವನ್ನು ಮೈಗೂಡಿಸಿಕೊಳ್ಳುವುದು ವ್ಯಕ್ತಿಯೊಬ್ಬನ ಹೃದಯ ರಕ್ತನಾಳಲ್ಲೆ ಸಂಬಂಧಿಸಿದ ಆರೋಗ್ಯ ಮತ್ತು ಚಯಾ ಪಚಯ ಕ್ರಿಯೆಯ ಗುಣಲಕ್ಷಣ ಮೇಲೆ ಪರಿಣಾಮ ಬೀರುತ್ತದೆ.

ಮಹಿಳೆಯರು ಈ ರೀತಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವುದು ಸರ್ವೇಸಾಮಾನ್ಯ ಈ ರೀತಿಯಾಗಿ ಕುಳಿತುಕೊಳ್ಳುವುದರಿಂದ ಆಗುವ ದುಷ್ಪರಿಣಾಮಗಳು:

* ಈ ರೀತಿ ಕುಳಿತುಕೊಳ್ಳುವಾಗ ಸೊಂಟದ ಭಾಗದ ಎಲುಬುಗಳ ಸ್ನಾಯುಗಳು ಒಂದು ಬದಿಯಲ್ಲಿ ಸಂಕುಚಿತಗೊಂಡರೆ ಇನ್ನೊಂದು ಬದಿಯಲ್ಲಿ ವಿಕಸನಗೊಳ್ಳುತ್ತವೆ.
* ಈ ಭಂಗಿಯಲ್ಲಿ ಕುಳಿತು ಸುದೀರ್ಘವಾಗಿ ಕಾರ್ಯನಿರ್ವಹಿಸಿದ ನಂತರ ಕುರ್ಚಿಯಿಂದ ಏಳುವಾಗ ಸ್ಯಾಯುಗಳು ಸಾಮಾನ್ಯ ಸ್ಥಿತಿಗೆ ಬರಲು ಸ್ಪಲ್ಪ ಸಮಯ ಬೇಕಾಗುತ್ತದೆ. ಇದರಿಂದಾಗಿ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
* ಭುಜ ಮತ್ತು ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
* ಈ ರೀತಿ ಕುಳಿತುಕೊಳ್ಳುವುದರಿಂದ ನರ ಪಾರ್ಶ್ವವಾಯು ಅಥವಾ ಲಕ್ವ ಹೊಡೆಯುವ ಅವಕಾಶವಿರುತ್ತದೆ.
*ನಿಮ್ಮ ದೇಹದ ರಕ್ತದ ಒತ್ತಡವು ಏರುತ್ತದೆ. ಇದರಿಂದಾಗಿ ನಿಮ್ಮ ಹೃದಯ ಔಟ್ ಪಂಪ್ ಮಾಡುವುದರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮತ್ತಷ್ಠು ರಕ್ತ ಪರಿಚಲನೆಯ ತೊಂದರೆಗಳು ಉಂಟಾಗಬಹುದು.
* ಈ ರೀತಿಯಾದ ಭಂಗಿಯಿಂದಾಗಿ ಕಾಲುಗಳ ಸ್ನಾಯುಗಳ ಶ್ರೋಣಿಯ ಅಸಮತೋಲನಕ್ಕೆ ಕಾರಣವಾಗಬಹುದು. ದೀರ್ಘಕಾಲದ ಕಾಲು ಅಡ್ಡವಾಗಿ ಹಾಕುವುದರಿಂದ ಹೊರ ತೊಡೆಯ ಸ್ನಾಯು ಮುಂದೆ ಒಳ ತೊಡೆಯ ಸ್ನಾಯುವನ್ನು ಕಡಿಮೆಮಾಡುತ್ತದೆ ಮತ್ತು ಅ ಸ್ಥಳದ ರಕ್ತ ಪರಿಚಲನದಲ್ಲಿ ವ್ಯತ್ಯಾಸವಾಗುತ್ತದೆ. ಇದರಿಂದಾಗಿ ನಿಮ್ಮ ಕೀಳುಗಳ ಸಮಸ್ಯ್ಹೆ ಎದುರಿಸಬೇಕಾಗುತ್ತದೆ.
* ದಿನವೀಡಿ ಕುರ್ಚಿಯಲ್ಲಿ ಕುಳಿತುಕೊಂಡುಕೆಲಸಮಾಡುವುದು ತುಂಬಾ ಆರಾಮದಾಯಕ ಎಂದು ಆಲೋಚಿಸುವವರೆಲ್ಲಾ ಇನ್ನು ಮುಂದೆ ಕುಳಿತುಕೊಳ್ಳುವ ಮುನ್ನ ಯೋಚಿಸಬೇಕು ನಮ್ಮ ದೇಹದ ಆರೋಗ್ಯ ನಾವು ಕುಳಿತುಕೊಳ್ಳುವ ಭಂಗಿಯಲ್ಲಿದೆ.

Comments are closed.