ಆರೋಗ್ಯ

ಕೆಲವು ವಸ್ತುಗಳನ್ನು ಪ್ರಿಜ್’ನಲ್ಲಿ ಇಡದೇ ಇರುವುದೇ ಒಳ್ಳೆಯದು ಯಾಕೆ, ಗೋತ್ತೆ?

Pinterest LinkedIn Tumblr

ಪ್ರಿಜ್ ಇದೆಯೆಂದು ಸಿಕ್ಕಿದ್ದನ್ನೇಲ್ಲ ಅದರಲ್ಲಿ ಇಡಬೇಡಿ. ತರಕಾರಿ, ಹಣ್ಣುಗಳು, ಜ್ಯೂಸ್, ಕೊನೆಗೆ ಮಾಡಿದ ಆಡುಗೆ ಪದಾರ್ಥಗಳನ್ನು ಸಹ ಪ್ರಿಜ್’ನಲ್ಲಿಡುತ್ತಾರೆ. ಆಳಾದಂತೆ ಇಡಲು ಇದು ಒಳ್ಳೆಯದೇ ಆದರೂ, ಕೆಲವನ್ನು ಪ್ರಿಜ್’ನಲ್ಲಿ ಇಡದೇ ಇರುವುದೇ ಒಳ್ಳೆಯದು. ಅವು ಹೀಗಿವೆ.

1.ಈರುಳ್ಳಿ ಹಾಗೂ ಕತ್ತರಿಸಿದ ಈರುಳ್ಳಿಯನ್ನು ಪ್ರಿಜ್’ನಲ್ಲಿಡಬಾರದು. ಅದರ ವಾಸನೆ ಪ್ರಿಜ್ ಜೊತೆಗೆ ಅದರಲ್ಲಿ ಇಟ್ಟ ಆಹಾರವನ್ನು ಸೇರಿ, ಆಹಾರವೂ ವಾಸನೆ ಬರುವಂತೆ ಮಾಡುತ್ತದೆ.
2.ಟಮಾಟೋಗೆ ಗಾಳಿಯಾಡಬೇಕು. ತಂಪಾದ ಟಮಾಟೋ ರುಚಿಯನ್ನು ಕಳೆದುಕೊಳ್ಳುತ್ತವೆ. ಆದ್ದರಿಂದ ಟಮಾಟೋ ಅನ್ನು ಪ್ರಿಜ್’ನಲ್ಲಿ ಇಡಬಾರದು.
3.ತುಪ್ಪವನ್ನು ಪ್ರಿಜ್’ನಲ್ಲಿ ಇಡಬೇಕಾದ ಅವಶ್ಯಕತೆಯಿಲ್ಲ‌. ಯಾವುದೇ ಕಾಲಮಾನವಾದರೂ ಅದನ್ನು ಹೊರಯಿಟ್ಟರೆ ಕೆಡುವುದಿಲ್ಲ.
4.ಬ್ರೆಡ್ ಅನ್ನು ಸಹ ಪ್ರಿಜ್’ನಲ್ಲಿಡುವುದು ಸರಿಯಲ್ಲ. ತಂಪಾದ ಪ್ರದೇಶದಲ್ಲಿ ಇಟ್ಟರೆ ಸಾಕು. ಅದಕ್ಕೆ ಪ್ರಿಜ್’ನ ಅವಶ್ಯಕತೆ ಇಲ್ಲ.
5. ಬೆಳ್ಳುಳ್ಳಿ ಹೆಚ್ಚು ಕಾಲ ಬರಬೇಕೆಂದರೆ ಅದನ್ನು ಗಾಳಿಯಾಡುವ ಜಾಗದಲ್ಲಿ ಇಡಿ. ಅದನ್ನು ಪ್ರಿಜ್’ನಲ್ಲಿ ಇಡುವ ಅವಶ್ಯಕತೆಯಿಲ್ಲ.

Comments are closed.