ಆರೋಗ್ಯ

ಪಾರಂಪರಿಕ ಆಹಾರ ವಿಧಾನಕ್ಕೆ ಸಕ್ಕರೆ ಖಾಯಿಲೆ ಬರದಂತೆ ತಡೆಯುವ ಶಕ್ತಿಯಿದೆ.

Pinterest LinkedIn Tumblr

ಒಮ್ಮೆ ಮಧುಮೇಹ ಬಂತೆಂದರೆ ಸಾಕು ಅವರ ಜೀವನ ಒಂದು ರೀತಿಯ ನರಕದಂತಾಗಿ ಬಿಡುತ್ತೆ. ಏನನ್ನು ತಿನ್ನಬೇಕು ಅಂದರೂ ಕೂಡ ನೀರು ಬಾರಿ ಯೋಚನೆ ಮಾಡಬೇಕಾಗುತ್ತದೆ ಅದರಲ್ಲೂ ಅನ್ನವನ್ನು ತಿನ್ನುವ ಆಸೆಯನ್ನು ತಡೆಯಲು ಸಾಧ್ಯನೇ ಇಲ್ಲ. ಆದರೆ ಅನ್ನ ತಿಂದರೆ ಮಧುಮೇಹಿಗಳಿಗೆ ತೊಂದರೆ ಆಗುತ್ತೆ ಎನ್ನುವ ಭಯ ಸಾಮಾನ್ಯವಾಗಿ ಕಾಡುತ್ತಾ ಇರುತ್ತೆ ಆದರೆ ಸಾಮಾನ್ಯವಾಗಿ ಸರಿಯಾದ ಕ್ರಮದಲ್ಲಿ ಅನ್ನವನ್ನು ತಯಾರಿಸಿ ಊಟ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎನ್ನಲಾಗುತ್ತದೆ ಆದರೆ ಈ ಅನ್ನವನ್ನು ಹೇಗೆ ತಯಾರಿಸಬೇಕು ಎಷ್ಟು ಹೊತ್ತು ಬೇಯಿಸಬೇಕು ಕುಕರ್ ನಲ್ಲಿ ಬೇಯಿಸ ಬೇಕಾ ಅಥವಾ ಬೇಯಿಸಬಾರದಾ ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಹೇಳುತ್ತೇವೆ ನೋಡಿ.

ನಾಗರೀಕತೆ ಬೆಳೆದಂತೆ ನಮ್ಮ ಅಡುಗೆ ಪದ್ಧತಿಯಲ್ಲಿ ಕೂಡ ಬಹಳಷ್ಟು ಬದಲಾವಣೆಗಳು ಆಗಿವೆ. ಇನ್ನೂ ಅನ್ನವನ್ನು ತಯಾರಿಸಲು ಕುಕರ್ ಮತ್ತು ಮುಂತಾದ ಆಧುನಿಕ ಉಪಕರಣಗಳನ್ನು ಉಪಯೋಗಿಸುವುದು ಸರ್ವೇ ಸಾಮಾನ್ಯವಾಗಿದೆ ಆದರೆ ಈ ರೀತಿ ಸುಧಾರಿತ ಆಧುನಿಕ ಉಪಕರಣದಿಂದ ತಯಾರಿಸಿದ ಅನ್ನ ಮಧುಮೇಹಿ ರೋಗಿಗಳಿಗೆ ಅಷ್ಟೊಂದು ಹಿತವಾದದ್ದು ಅಲ್ಲ ಅದಕ್ಕೆ ಬದಲಾಗಿ ನಮ್ಮ ಪೂರ್ವಿಕರು ಅನುಸರಿಸುತ್ತಿದ್ದ ಪಾರಂಪರಿಕ ವಿಧಾನದಿಂದ ತಯಾರಿಸುತ್ತಿದ್ದ ಅನ್ನ ಬಹಳ ಉತ್ತಮ ಎಂದು ಹೇಳಬಹುದು ಆದರೆ ಇಂದಿನ ನಾಗರೀಕ ಸಮಾಜದ ಹೆಚ್ಚು ಜನ ಗೃಹಿಣಿಯರಿಗೆ ನಮ್ಮ ಪಾರಂಪರಿಕ ಪದ್ಧತಿಯಂತೆ ಅನ್ನ ಮಾಡುವ ವಿಧಾನ ಗೊತ್ತೇ ಇಲ್ಲ ಎಂಬುದು ಶೋಚನೀಯವಾಗಿದೆ. ಅನ್ನವನ್ನು ಮಾಡುವ ಉಪಯೋಗಿಸುವ ಅಕ್ಕಿಯಲ್ಲಿ ನೀರಿನಲ್ಲಿ 15 ರಿಂದ 20 ನಿಮಿಷ ನೆನೆಯಲು ಬಿಡಬೇಕು ಒಲೆಯ ಮೇಲೆ ಅನ್ನ ಮಾಡಲು ಬೇಕಾದ ನೀರನ್ನು ಕಾಯಲು ನೀಡಬೇಕು ಈ ನೀರಿನ ಪ್ರಮಾಣ ಅಕ್ಕಿಯ ಪ್ರಮಾಣದ 8 ರಷ್ಟು ಹೆಚ್ಚು ಇರಬೇಕು ನೀರು ಚೆನ್ನಾಗಿ ಕಾಯಲು ಮರುಳಲು ಪ್ರಾರಂಭಿಸಿದಾಗ ನೆನೆಸಿಟ್ಟ ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರೆಲ್ಲಾ ಬಸೆದು ಮರಳುತ್ತಿರುವ ನೀರಿನಲ್ಲಿ ಹಾಕಿ ಮೃದುವಾದ ಉರಿಯಿಂದ ಬೇಯಿಸಬೇಕು.

ಬೇಯುವಾಗ ಪಾತ್ರೆಯ ಬಾಯಿಯನ್ನು ಮುಚ್ಚುವುದು ಹಾಗೂ ಅಕ್ಕಿ ತಳ ಕಟ್ಟದ ಹಾಗೇ ಆಗಾಗ ಸೌಟ್ ನಿಂದಾ ತಿರುಗಿಸುತ್ತಾ ಇರಬೇಕು ಅಕ್ಕಿ ಹದವಾಗಿ ಬೆಂದ ಮೆತ್ತಗಾದ ಅದರಲ್ಲಿರುವ ಗಂಜಿ ನೀರನ್ನು ಬಸಿದು ಬಾಯಿಯನ್ನು ಮುಚ್ಚಿ ಸ್ವಲ್ಪ ಹೊತ್ತು ಸಣ್ಣ ಉರಿಯಿಂದ ಬೇಯಿಸಬೇಕು ಇದರಿಂದ ಅನ್ನ ಚೆನ್ನಾಗಿ ಹರಳಿ ಮುದ್ದೆಯದೇ ಸಿದ್ಧವಾಗುತ್ತದೆ. ಇದರಿಂದ ಅನ್ನವನ್ನ ಮಧುಮೇಹಿಗಳು ತಮ್ಮ ಆಹಾರವನ್ನಾಗಿ ಊಟ ಮಾಡಬಹುದು. ಸಾಮಾನ್ಯ ಜನಕ್ಕೆ ಮಧುಮೇಹ ಇಲ್ಲದೆ ಇದ್ದವರು ಮುಂದೆ ಸಕ್ಕರೆ ಖಾಯಿಲೆ ಬರಲೇ ಬಾರದು ಅಂದ್ರೆ ಈ ರೀತಿ ಪಾರಂಪರಿಕ ವಿಧಾನದಿಂದ ತಯಾರಾಗದ ಅನ್ನದಲ್ಲಿ ಶರ್ಕರ ಪಿಷ್ಟ ಅಂಶವು ಕಡಿಮೆ ಇದ್ದು ಮಧುಮೇಹಿ ರೋಗಿಗಳಿಗೆ ಪಥ್ಯವಾಗಿ ಇರುವುದು. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಎಲ್ಲಾ ಸ್ನೇಹಿತರಿಗೂ ತಿಳಿಸಿರಿ ಹಾಗೆಯೇ ಅವರಿಗೂ ಸಹಾ ಹೀಗೆ ಅನ್ನ ತಯಾರಿಸಿ ಸೇವಿಸಲು ತಿಳಿಸಿ. ಈ ಲೇಖನ ಉಪಯುಕ್ತ ಅನಿಸಿದರೆ ದಯವಿಟ್ಟು ಈ ಲೇಖನವನ್ನು ನಿಮ್ಮ ಆಪ್ತರಿಗೆ ಈ ಕೂಡಲೇ ಶೇರ್ ಮಾಡಲು ಮರೆಯದಿರಿ. ಹಾಗೂ ಇಂತಹ ಆರೋಗ್ಯ ಟಿಪ್ಸ್ ಗಳಿಗಾಗಿ ಈ ಪೇಜ್ ಲೈಕ್ ಮಾಡಿರಿ.

Comments are closed.