ಕರಾವಳಿ

ಮಂಗಳೂರು : ಸೈನಿಕರ ಹೆಸರಿನಲ್ಲಿ ವಾಹನ ಮಾರಾಟ ವಂಚನೆ-ಜಾಗರೂಕರಾಗಿರಲು ಸಲಹೆ

Pinterest LinkedIn Tumblr

ಮಂಗಳೂರು ಜುಲೈ 08 : ಇತ್ತೀಚಿನ ದಿನಗಳಲ್ಲಿ ಸೈನಿಕರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಗೆ ವಂಚಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟದ ಹೆಸರಿನಲ್ಲಿ ಓಎಲ್‍ಎಕ್ಸ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ತಾವು ಸೇನೆಯಲ್ಲಿ ಸೇವೆ ಸಲ್ಲಿಸಿದವರು ಎಂದು ಕೆಲವು ಕಿಡಿಗೇಡಿಗಳು, ಸಮವಸ್ತ್ರ ಧರಿಸಿದ್ದ ಸೈನಿಕರ ಭಾವಚಿತ್ರವನ್ನು ಆಪ್‍ಲೋಡ್ ಮಾಡಿ, ತಾವು ಸೈನಿಕರೆಂದು ಬಿಂಬಿಸಿ ವಾಹನಗಳು ಮಾರಾಟಕ್ಕೆ ಇದೆ ಎಂದು ಪೋಸ್ಟ್ ಮಾಡುತ್ತಿದ್ದಾರೆ. ಬಳಿಕ ತಮ್ಮನ್ನು ಸಂಪರ್ಕಿಸಿದವರಿಂದ ಮುಂಗಡ ಹಣ ವಸೂಲಿ ಮಾಡಿ, ನಂತರ ವಾಹನ ನೀಡದೆ ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಈ ರೀತಿ ವಂಚನೆಗೊಳಗಾದ ಹಲವರು, ನಗರದ ಸೇನಾ ನೇಮಕಾತಿ ಕಚೇರಿಗೆ ಬರುತ್ತಿದ್ದಾರೆ. ಆದರೆ ಸೈನಿಕರಾರು ಇಂತಹ ದಂಧೆಯಲ್ಲಿ ತೊಡಗಿಸಿಕೊಂಡಿಲ್ಲ. ಸಾರ್ವಜನಿಕರು ಇಂತಹವರೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರಬೇಕೆಂದು ಪ್ರಕಟಣೆ ತಿಳಿಸಿದೆ.

Comments are closed.