ಕರಾವಳಿ

ಉಡುಪಿ ಲಕ್ಷ್ಮೀನಗರದ ಯೋಗೀಶ್ ಹತ್ಯೆ: ಕ್ಷಿಪ್ರ ಕಾರ್ಯಾಚರಣೆ‌ ನಡೆಸಿ ನಾಲ್ವರನ್ನು ಬಂಧಿಸಿದ ಪೊಲೀಸರು

Pinterest LinkedIn Tumblr
ಉಡುಪಿ: ಉಡುಪಿ‌ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮೀ ನಗರದ ಯುವಕನ ಯೋಗೀಶ್ ಪೂಜಾರಿ (28) ಹತ್ಯೆಯ ಆರೋಪಿಗಳನ್ನು ಘಟನೆ ನಡೆದ ಒಂದೇ‌ ದಿನದಲ್ಲಿ ಪೊಲೀಸರು ಬಂಧಿಸಿದ್ದಾರೆ. ಯೋಗೀಶ್ ಹತ್ಯೆಯಲ್ಲಿ ಭಾಗಿಯಾದ ಈಗಾಗಲೇ ಎರಡು ಕೊಲೆ ಆರೋಪದಲ್ಲಿ ಬಂಧಿಯಾಗಿ ಜಾಮೀನಿನ ಮೇಲೆ ಹೊರಬಂದ ಕಲ್ಯಾಣಪುರದ ಸುಜಿತ್ ಪಿಂಟೋ ಮತ್ತು ಆತನ ಸಹೋದರ ರೋಹಿತ್ ಪಿಂಟೋ, ಕೊಡಂಕೂರಿನ ಪ್ರದೀಪ್ ಯಾನೆ ಅಣ್ಣು, ಅಂಬಾಗಿಲು ಪುತ್ತೂರಿನ ವಿನಯನನ್ನು ಬಂಧಿಸಲಾಗಿದ್ದು ಕೊಲೆಯಲ್ಲಿ ಭಾಗಿಯಾದ ಇಬ್ಬರು ಆರೋಪಿಗಳಾದ ಬೈಲಕೆರೆಯ ಅನುಪ್ ಮತ್ತು ಗೀರೀಶ್ ಶೆಟ್ಟಿ ತಲೆ ಮರೆಸಿಕೊಂಡಿದ್ದಾರೆ.
ಆರೋಪಿಗಳು ಸಂತೆಕಟ್ಟೆಯ ಬಾರಿನಲ್ಲಿ ಕೊಲೆಯಾದ ಯೋಗೀಶ್  ಯಾವುದೊ ವಿಚಾರದಲ್ಲಿ ಗಲಾಟೆ ನಡೆಸಿದ್ದರು, ಇದೇ ವಿಚಾರವಾಗಿ ಯೋಗೀಶ್ ತನ್ನ ಸ್ನೇಹಿತರಿಗೆ ಗಲಾಟೆಯ ಮಾಹಿತಿ ನೀಡಿದ್ದಲ್ಲದೆ ತನ್ನ ಸಹಚರರೊಂದಿಗೆ ಮಧ್ಯಾಹ್ನದಿಂದ ಸಂತೆಕಟ್ಟೆ, ಮಲ್ಪೆ, ಕೊಡವೂರು ಪರಿಸರದಲ್ಲಿ ತಿರುಗಾಡುತ್ತಿದ್ದ.ಈ ವಿಷಯ ತಿಳಿದ ಸುಜಿತ್ ಪಿಂಟೋ ಸಂಜೆ ತನ್ನ ತನ್ನ ಸಹಚರರೊಂದಿಗೆ ಸಂತೆಕಟ್ಟೆ ಬಾರ್ ನಲ್ಲಿ ಕುಡಿಯುತ್ತಿರುವ ಸಂದರ್ಭ ಅಲ್ಲಿ ಯೋಗೀಶ್ ಕೂಡ ಸಿಕ್ಕಿದ್ದು, ಅಲ್ಲೂ ಮಾತಿನ ಚಕಮಕಿ ನಡೆದಿತ್ತು. ಅಂದು ರಾತ್ರಿ ಮನೆಗೆ ಹೋದ ಯೋಗೀಶನನ್ನು ಮನೆಯೆದುರೇ ಕರೆದು ಹತ್ಯೆ ಮಾಡಿದ್ದಾರೆ.
ವರ್ವಾಡಿ ಪ್ರವೀಣ್ ಶೆಟ್ಟಿ ಹಾಗೂ ಅಂಬಾಗಿಲು ಗುರುಪ್ರಸಾದ್ ಭಟ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿ ಜೈಲು ವಾಸ ಅನುಭವಿಸಿ ಜಾಮೀನಿನ‌ ಮೇಲೆ ಸಹೋದರರಾದ ಕಲ್ಯಾಣಪುರದ ರೋಹಿತ್ ಪಿಂಟೋ, ಸುಜಿತ್ ಪಿಂಟೋ ನಾಲ್ಕು ತಿಂಗಳ ಹಿಂದೆ ಹೊರ ಬಂದಿದ್ದರು.
ಉಡುಪಿ‌ ಇನ್ಸ್‌ಪೆಕ್ಟರ್ ಮಂಜುನಾಥ್ ತನಿಖಾಧಿಕಾರಿಯಾಗಿದ್ದು ಅವರ ಮಾರ್ಗದರ್ಶನದಲ್ಲಿ‌ ಮಲ್ಪೆ ಪಿಎಸ್ಐ ತಿಮ್ಮೇಶ್ ಬಿ.ಎನ್ ಹಾಗೂ ಸಕ್ತಿವೇಲು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
Aa

Comments are closed.