ಆರೋಗ್ಯ

ಸಾವಿರಕ್ಕೂ ಅಧಿಕ ಮಂದಿ ಚಿಕಿತ್ಸೆಯಿಲ್ಲದೆ ಗುಣಮುಖ-ಕರೋನಾ ಸೋಂಕಿತರ ಬಿಡುಗಡೆಯಲ್ಲೂ ಉಡುಪಿ ಫಸ್ಟ್!

Pinterest LinkedIn Tumblr

ಉಡುಪಿ (ವಿಶೇಷ ವರದಿ): ಅತೀ ಹೆಚ್ಚು ಕರೋನಾ ವೈರಸ್ ಸೋಂಕಿತರ ಪತ್ತೆಯಾಗುವ ಮೂಲಕ ರಾಜ್ಯದಲ್ಲಿ ಮೊದಲು ಸಾವಿರ ಗಡಿ ದಾಟಿದ ಪ್ರಥಮ ಜಿಲ್ಲೆ ಉಡುಪಿ. ಆಸ್ಪತ್ರೆ ದಾಖಲಾಗಿ ಯಾವುದೇ ಚಿಕಿತ್ಸೆ ಇಲ್ಲದೆ ವೈದ್ಯರ ಕಣ್ಗಾವಲಲ್ಲಿ ಬಿಡುಗಡೆಯಾದವರ ಪಟ್ಟಿಯಲ್ಲೂ ಜಿಲ್ಲೆ ಪ್ರಥಮ. ಇದೂವರೆಗೆ ಪಾಸಿಟಿವ್ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿಲ್ಲ ಎನ್ನೋದು ಜಿಲ್ಲೆಗೆ ಹೆಮ್ಮೆ..!

2020, ಮಾ.24, ಮೊದಲ ಪ್ರಕರಣ ಜಿಲ್ಲೆಯಲ್ಲಿ ದಾಖಲಾಯಿತು. ನಂತರದ ದಿನದಲ್ಲಿ ಮತ್ತಿಬ್ಬರು ದಾಖಲಾಗಿ ಸಂಖ್ಯೆ ಮೂರಾಯಿತು. ಮೂವರು ಬಿಡುಗಡೆ ಆದನಂತರ ಕೆಲ ದಿನಗಳ ಕಾಲ ಉಡುಪಿಯಲ್ಲಿ ಪಾಸಿಟೀವ್ ಸಂಖ್ಯೆ ಸೊನ್ನೆಗೆ ಇಳಿದಿದ್ದು, ಬೇರೆ ಬೇರೆ ರಾಜ್ಯದಿಂದ ಜಿಲ್ಲೆಗೆ ಜನ ಬರಲು ಆರಂಭಿಸಿದ ನಂತರ ಪಾಸಿಟಿವ್ ಸಂಖ್ಯೆ ಏರಿಕೊಂಡು ರಾಜ್ಯದಲ್ಲಿ ಸಾವಿರ ಸಂಖ್ಯೆ ದಾಟಿದ ಜಿಲ್ಲೆ ಎನ್ನುವ ಕಪ್ಪುಪಟ್ಟಿ ಸೇರಬೇಕಾಯಿತು.ಇದೂವರೆಗೆ ಉಡುಪಿ ಜಿಲ್ಲೆಯಲ್ಲಿ 1362 ಜನ ಆಸ್ಪತ್ರೆಗೆ ದಾಖಲಾಗಿದ್ದು, ಅದರಲ್ಲಿ 1154 ಸೋಂಕಿತರ ಬಿಡುಗಡೆ ಆಗಿ ಮನೆಗೆ ಮರಳಿದ್ದಾರೆ. ಆಸ್ಪತ್ರೆಯಲ್ಲಿ 208 ಮಂದಿಯಿದ್ದು, ಅವರೆಲ್ಲರೂ ಆರೋಗ್ಯವಾಗಿದ್ದಾರೆ. ಒಬ್ಬರಿಗೆ ಮಾತ್ರ ಚಿಕಿತ್ಸೆ ಮುಂದುವರಿದೆ.

ಉಡುಪಿ ಜಿಲ್ಲೆಯಲ್ಲಿ ಕರೋನಾ ವೈರಸ್ ಸೋಂಕಿತ ಮೂವರು ಪುರುಷರು ಮೃತಪಟ್ಟಿದ್ದು, ಅವರೆಲ್ಲರೂ ಬೇರೆ ರಾಜ್ಯದಿಂದ ಬಂದವರಾಗಿದ್ದು, ಹೃದಯ, ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಒಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆ, ಮತ್ತಿಬ್ಬರು ಮನೆಯಲ್ಲೇ ಮೃತರಾಗಿದ್ದಾರೆ. ಇದೂವರೆಗೆ ಕರೋನಾ ಸೋಂಕಿತ ಯಾವುದೇ ವ್ಯಕ್ತಿ ಆಸ್ಪತ್ರೆಯಲ್ಲಿ ನಿಧನರಾಗಿಲ್ಲ. ಸಾವಿರಕ್ಕೂ ಅಧಿಕ ಸೋಂಕಿತರಲ್ಲಿ 8 ಮಂದಿ ತೀವ್ರ ನಿಗಾದಲ್ಲಿದ್ದು, ಅದರಲ್ಲಿ ಒಬ್ಬರು ಮಾತ್ರ ಪ್ರಸಕ್ತ ಕ್ರಿಟಿಕಲ್ ಸ್ಥಿತಿಯಲ್ಲಿ ಇದ್ದು, ಉಳಿದವರು ಚೇತರಿಸಿಕೊಂಡಿದ್ದಾರೆ. ತುರ್ತು ನಿಗಾದಲ್ಲಿರುವ ವ್ಯಕ್ತಿಗೆ ಕಿಡ್ನಿ ಸಮಸ್ಯೆ ಇದ್ದು, ವೈದ್ಯರ ಕಣ್ಗಾವಲಲ್ಲಿ ಚಿಕಿತ್ಸೆ ಮುಂದುವರಿದದೆ. 4875 ಜನ 28 ದಿನ ನಿಗಾವಣೆ ಪೂರೈಸಿದ್ದು, ಇಬ್ಬರು ನಿಗಾದಲ್ಲಿದ್ದು, 4875 ಜನ 14 ದಿನದ ನಿಗಾ ಅವಧಿ ಮುಗಿಸಿದ್ದು, ಹೋಮ್ ಕ್ವಾರಂಟೈನ್‌ನಲ್ಲಿ ಇದ್ದಾರೆ. ಒಬ್ಬರು ಪಾಸಿಟೀವ್ ವ್ಯಕ್ತಿ ದಕಕ್ಕೆ ಹಸ್ತಾಂತರಿಸಲಾಗಿದೆ.
– ಜಿ. ಜಗದೀಶ್ (ಉಡುಪಿ ಡಿಸಿ)

ದಿನಕ್ಕೆ ಪಾಸಿಟಿವ್ ನೂರು ಬರಲಿ ಇನ್ನೂರು ಬರಲಿ ರೋಗ ಲಕ್ಷಣ ಇರುವವರ, ಮಕ್ಕಳು ಹಾಗೂ ಹಿರಿಯರ ಬೇಗ್ ಶಿಪ್ಟ್, ಕರೋನಾ ಅಲ್ಲದೆ ಬೇರೆ ಬೇರೆ ಖಾಯಿಲೆಗಳಿದ್ದರೆ ಅಂತವರ ವಿಶೇಷವಾಗಿ ಟಿ‌ಎಂಎಪೈ ಆಸ್ಪತ್ರೆಯಲ್ಲಿ ಪರಿಣಿತ ವೈದ್ಯರ ಮೂಲಕ ಆರೈಕೆ ಮಾಡಲಾಗಿತ್ತು. ಕರೋನಾ ಪಾಸಿಟಿವ್ ಬಂದವರಲ್ಲಿ ಅಧಿಕ ಸಂಖ್ಯೆ ಬೇರೆ ಬೇರೆ ಕಡೆಯಿಂದ ಬಂದವರಿದ್ದಾಗಿದ್ದು, ೫೦ ವರ್ಷದ ಒಳಗೆ ಹಾಗೂ ರೋಗ ನಿರೋಧಕ ಶಕ್ತಿ ಹೊಂದಿದವರಾಗಿದ್ದು, ವೈರಸ್ ಎದರಿಸುವ ಶಕ್ತಿಯಿದ್ದು, ಸಹಜವಾಗಿ ಬೇಗ ಚೇತರಿಸಿಕೊಂಡಿದ್ದಾರೆ. ಉಡುಪಿ ಕರೋನಾ ವೈರಸ್ ಚೇತರಿಕೆ ರೇಟಲ್ಲಿ ನಂಬರ್ ಒನ್ ಆಗಿದ್ದು, ಆಸ್ಪತ್ರೆಯಲ್ಲಿ ಯಾರೂ ಸಾವನ್ನಪ್ಪಿಲ್ಲ. ಶೀತ, ಜ್ವರ ಇದ್ದರೆ ಪಸಿಟಿವ್ ಅಲ್ಲವಾ ಪರೀಕ್ಷೆ ಮಾಡಿಕೊಂಡು ವರದಿ ಬರುವ ತನಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಆರೋಗ್ಯ ನೋಡಿಕೊಳ್ಳುವುದು ರೋಗ ತಡೆಯುವಲ್ಲಿ ಮುಖ್ಯವಾಗುತ್ತದೆ. ಕರೋನಾ ಬಂದಿದೆ ಜೀವ ಹೋಗುತ್ತದೆ ಎನ್ನುವ ಭಯ ಬಿಟ್ಟುಬಿಡಬೇಕು
-ಡಾ.ಸುಧೀರಚಂದ್ರ ಸೂಡ, ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ.

ಕರೋನಾ ವೈರಸ್ ಬಂದಿದೆ ಎಂದ ಮಾತ್ರಕ್ಕೆ ಜೀವವೇ ಹೋಗುತ್ತದೆ ಎನ್ನುವ ಭಯ ಮೊದಲು ಬಿಟ್ಟರೆ ಅರ್ಧ ವೈರಸ್ ಸೋಂಕಿಂದ ದೂರವಾದಂತೆ. ಪಾಸಿಟೀವ್ ಬಂದಿದೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಹೇಗೋ ಏನೂ ಎನ್ನುವ ಭಯವಿರಬಾರದು. ಆಸ್ಪತ್ರೆಯಲ್ಲಿ ನಮಗೇನು ವಿಶೇಷ ಚಿಕಿತ್ಸೆ ನೀಡಿಲ್ಲ. ಪೌಷ್ಟಿಕ ಆಹಾರ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗಿದ್ದು, ಬಿಟ್ಟರೆ ಮತ್ತೇನೂ ಹೆಚ್ಚಿನ ಚಿಕಿತ್ಸೆ ನೀಡಿಲ್ಲ.
-ಕುಂದಾಪುರ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದ ವ್ಯಕ್ತಿ

Comments are closed.