ಕರಾವಳಿ

ಇಂದಿನಿಂದ ಮಂಗಳೂರು ಉಪವಿಭಾಗ ತಾಲೂಕು ಕಚೇರಿಗಳಿಗೆ ಪ್ರವೇಶ ನಿರ್ಬಂಧ

Pinterest LinkedIn Tumblr

ಮಂಗಳೂರು ಜುಲೈ 08 :ಕೋವಿಡ್-19 ಕೊರೊನಾ ವೈರಾಣು ಕಾಯಿಲೆ-2019 ರ ಸೋಂಕು ಹರಡುವಿಕೆಯಿಂದ ಸೋಂಕಿತರ ಸಂಖ್ಯೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.

ಆದ್ದರಿಂದ ಸರಕಾರಿ ಕಚೇರಿಗಳಾದ ತಾಲೂಕು ಕಚೇರಿ, ಸಹಾಯಕ ಆಯುಕ್ತರ ಕಚೇರಿಗಳಿಗೆ ದಿನಂಪತ್ರಿ ಸಾರ್ವಜನಿಕರು ಬಂದು ಹೋಗುವುದರಿಂದ ಸೋಂಕು ಹರಡುವ ಸಾಧ್ಯತೆಯಿರುತ್ತದೆ.

ಈ ಹಿನ್ನೆಲೆಯಲ್ಲಿ ಜುಲೈ 8 ರಿಂದ 10 ರವರೆಗೆ ಮಂಗಳೂರು ಉಪವಿಭಾಗಕ್ಕೆ ಸಂಬಂಧಪಟ್ಟಂತೆ ಮಂಗಳೂರು ಸಹಾಯಕ ಆಯುಕ್ತರ ಕಚೇರಿ, ತಾಲೂಕು ಕಚೇರಿ, ಮಂಗಳೂರು, ಬಂಟ್ವಾಳ, ಮೂಡಬಿದ್ರೆ, ಮುಲ್ಕಿ ವಿಶೇಷ ತಾಲೂಕು ಕಚೇರಿಗಳನ್ನು ಸ್ಯಾನಿಟೈಸೇಷನ್ ಮಾಡಲಾಗುತ್ತದೆ.

ಅಂದು ಸಾರ್ವಜನಿಕರ ಪ್ರವೇಶವನ್ನು ಈ ಕಚೇರಿಗಳಿಗೆ ನಿರ್ಬಂಧಿಸಲಾಗಿದೆ ಎಂದು ಮಂಗಳೂರು ಉಪವಿಭಾಗ ಆಯುಕ್ತರ ಪ್ರಕಟಣೆ ತಿಳಿಸಿದೆ.

Comments are closed.