ಕರಾವಳಿ

ದ.ಕ.ಜಿಲ್ಲೆ : ಮಸೀದಿಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಇಮಾಮ್‍ರವರಿಗೆ ನಿವೃತ್ತಿ ವೇತನಕ್ಕೆ ಅರ್ಜಿ ಆಹ್ವಾನ

Pinterest LinkedIn Tumblr

ಮಂಗಳೂರು ; ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಾವಣೆಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಮಸೀದಿಗಳಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟು ಸೇವೆಗೈದು ಕೆಲಸದಿಂದ ನಿವೃತ್ತಿ ಹೊಂದಿ 65 ವರ್ಷ ಪೂರ್ತಿಗೊಳಿಸಿದ ಇಮಾಮ್‍ರವರಿಗೆ ಮಾಸಿಕ ರೂ. 2,000 ಮತ್ತು ಮೌಝನ್ (ಮುಕ್ರಿ) ರವರಿಗೆ ಮಾಸಿಕ ರೂ. 1,500 ನಿವೃತ್ತಿ ವೇತನ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ವತಿಯಿಂದ ನೀಡಲಾಗುತ್ತದೆ.

ಅರ್ಜಿ ನಮೂನೆಯನ್ನು ಜಿಲ್ಲಾ ವಕ್ಫ್ ಕಚೇರಿಯಿಂದ ಪಡೆದುಕೊಂಡು ಭರ್ತಿ ಮಾಡಿ ಆಧಾರ್ ಕಾರ್ಡ್ ನಕಲು ಪ್ರತಿ, ಅರ್ಜಿದಾರರ ಸೇವಾ ದೃಢೀಕರಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಆದಾಯ ದೃಢೀಕರಣ ಪತ್ರ ಅಥವಾ ಬಿ.ಪಿ.ಎಲ್. ಕಾರ್ಡ್ ಪ್ರತಿ, ವಿದ್ಯಾಭ್ಯಾಸದ ಬಗ್ಗೆ ದೃಢೀಕರಣ ಪತ್ರ್ರ (ಧಾರ್ಮಿಕ & ಲೌಕಿಕ) ದಾಖಲೆಗಳೊಂದಿಗೆ ದ್ವಿಪ್ರತಿಯಲ್ಲಿ ಜಿಲ್ಲಾ ವಕ್ಫ್ ಕಚೇರಿ, ಅಲ್ಫಸಂಖ್ಯಾತರ ಕಲ್ಯಾಣ ಭವನದ 2ನೇ ಮಹಡಿ, ಓಲ್ಡ್‍ಕೆಂಟ್‍ರಸ್ತೆ, ಪಾಂಡೇಶ್ವರ, ಮಂಗಳೂರು ಇಲ್ಲಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಕ್ಫ್ ಕಚೇರಿಯ ದೂರವಾಣಿ ಸಂಖ್ಯೆ 0824 2420078 ನ್ನು ಸಂಪರ್ಕಿಸಲು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಯು.ಕೆ. ಮೋನು ಕನಚೂರು ಇವರ ಪ್ರಕಟಣೆ ತಿಳಿಸಿದೆ.

Comments are closed.