ಆರೋಗ್ಯ

ಕರಾವಳಿ ಜಿಲ್ಲೆ ಉಡುಪಿಯನ್ನು ಬಿಡದೇ ಕಾಡುತ್ತಿದೆ ಕೊರೋನಾ: ಇಂದು 40 ಮಂದಿಗೆ ಸೋಂಕು ದೃಢ

Pinterest LinkedIn Tumblr

ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿಂದು ಮತ್ತೆ 40 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯ ಸೋಂಕಿತರ ಸಂಖ್ಯೆ 1362ಕ್ಕೆ ಏರಿಕೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ 18542 ಜನರ ಗಂಟಲು ದ್ರವ ಸಂಗ್ರಹಿಸಿದ್ದು, ಅದರಲ್ಲಿ 15540 ನೆಗೆಟಿವ್ ವರದಿಗಳು ಬಂದಿದೆ. 1362 ವರದಿಗಳು ಪಾಸಿಟಿವ್ ಬಂದಿದ್ದು, ಇನ್ನೂ 1640 ವರದಿಗಳು ಇನ್ನು ಬರಬೇಕಿದೆ.

ಕೊಲ್ಲೂರು ಸಮೀಪದ ಜಡ್ಕಲ್ ಗ್ರಾಮದ ಕಾನ್ಕಿ ಎಂಬಲ್ಲಿನ ಮೂರು ಮನೆಗಳ ಒಟ್ಟು ನಾಲ್ಕು ಮಂದಿಗೆ ಕೋವಿಡ್-19 ಪಾಸಿಟಿವ್ ಕಂಡು ಬಂದಿದೆ. ಅವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಕೋವಿಡ್-19 ಹಿನ್ನಲೆಯಲ್ಲಿ ನಾಲ್ಕು ದಿನದ ಹಿಂದೆ ಊರಿಗೆ ಬಂದಿದ್ದರು. ಅವರನ್ನು ಗಂಟಲ ದ್ರವ ಪರೀಕ್ಷೆಗೆ ಒಳ ಪಡಿಸಿದಾಗ ರೋಗ ಲಕ್ಷಣ ಕಂಡು ಬಂದಿದೆ.

ಕುಂದಾಪುರದಲ್ಲಿ ಅನ್ಯ ಜಿಲ್ಲೆಗಳಿಗೆ ಪ್ರಯಾಣ ಬೆಳೆಸುವ ಮೂವರು ಬಸ್ ಚಾಲಕರಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಈ ಹಿಂದೆ ಕುಂದಾಪುರ- ಬೆಂಗಳೂರು ಬಸ್ ನ ಇಬ್ಬರು ಡ್ರೈವರ್ ಗಳಿಗೆ ಸೋಂಕು ತಾಗಿರುವುದು ಪತ್ತೆಯಾಗಿತ್ತು.

Comments are closed.