ಆರೋಗ್ಯ

ಪಾದಗಳ ತುರಿಕೆ ಸೋಂಕಿನ ನಿವಾರಣೆಗೆ ಸರಳ ಮನೆ ಮದ್ದು

Pinterest LinkedIn Tumblr

ಪಾದಗಳಲ್ಲಿ ತುರಿಕೆ ಕಾಣಿಸಿಕೊಳ್ಳಲು ಪ್ರಮುಖ ಕಾರಣ ಚರ್ಮದಲ್ಲಿ ಉಂಟಾಗುವ ಕೆಲವು ರೀತಿಯ ಫಂಗಲ್ ಗಳ ಸೋಂಕು. ಒಂದು ರೀತಿಯ ಶಿಲೀಂದ್ರವಾಗಿರುವ ಟಿನಿಯಾ ಪೆಡಿಸ್ ನ ಹರಡುವಿಕೆಯಿಂದಾಗಿ ಈ ರೀತಿ ತುರಿಕೆಯುಕ್ತ ಪಾದಗಳು ಉಂಟಾಗುತ್ತದೆ. ತುರಿಕೆಯ ಪಾದಗಳು ನಿಜಕ್ಕೂ ಒಂದು ರೀತಿಯ ಕೆಟ್ಟ ಹಿಂಸೆ.

ಈ ರೀತಿಯ ಶಿಲೀಂಧ್ರಗಳು ಪ್ರಮುಖವಾಗಿ ಚರ್ಮ ಮತ್ತು ಉಗುರನ್ನು ಟಾರ್ಗೆಟ್ ಮಾಡುತ್ತವೆ. ತುರಿಕೆಯನ್ನು ಹೊರತು ಪಡಿಸಿ ಇದು ಚರ್ಮ ಕೆಂಪಗಾಗುವಿಕೆ, ಕ್ರ್ಯಾಕ್ ಗಳು, ಸಿಪ್ಪೆ ಸುಲಿಯುತ್ತಿರುವ ಚರ್ಮ, ಸುಟ್ಟಂತಾಗುವುದು ಇತ್ಯಾದಿಗಳಂತೆ ಕೂಡ ಕಾಣಿಸುತ್ತದೆ. ಸಾಮಾನ್ಯವಾಗಿ ಇದು ಪಾದಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಕೆಲವೊಮ್ಮೆ ಉಗುರು ಮತ್ತು ಬೆರಳಿನ ಅಡಿಭಾಗದಲ್ಲೂ ಹರಡುವ ನಿರೀಕ್ಷೆ ಇದೆ.

ಟಿನಿಯಾ ಪೆಡಿಸ್ ಸಾಮಾನ್ಯವಾಗಿ ಎಲ್ಲಿ ತೇವಾಂಶವಿರುತ್ತೋ ಅಂತಹ ಜಾಗದಲ್ಲಿ ಬೇಗನೆ ಹರಡುತ್ತದೆ. ಇದು ಮುಖ್ಯವಾಗಿ ಸಾಕ್ಸ್ ಗಳ ಬೆವರುವಿಕೆ, ಸರಿಯಾಗಿ ನಿಮ್ಮ ಪಾದಗಳನ್ನು ಒಣಗಿಸಿಕೊಳ್ಳದೇ ಇರುವುದರಿಂದ ಇತ್ಯಾದಿ ಕಾರಣಗಳಿಂದ ಉದ್ಭವವಾಗುತ್ತದೆ. ಈ ಸಮಸ್ಯೆಯನ್ನು “ಅಥ್ಲೀಟ್ ಫೂಟ್” ಎಂದು ಕೂಡ ಕರೆಯಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಅಥ್ಲೀಟ್ ಫೂಟ್ ಸಮಸ್ಯೆ ಇದ್ದರೆ ಅದು ಚರ್ಮದಲ್ಲಿ ಸೋಂಕನ್ನು ಹರಡುತ್ತದೆ ಮತ್ತು ತೀವ್ರವಾದ ಸೋಂಕಿತ ಗುಳ್ಳೆಗಳಿಗೆ ಕಾರಣವಾಗುತ್ತದೆ. ಹಾಗಂತ ಚಿಂತಿಸುವ ಅಗತ್ಯವಿಲ್ಲ.ಅದಕ್ಕಾಗಿ ಕೆಲವು ಮನೆಮದ್ದುಗಳಿವೆ ಮತ್ತು ಅದು ನಿಮ್ಮ ತುರಿಕೆ ಹಾಗೂ ಪಾದಗಳಲ್ಲಿ ಕಾಣಿಸಿಕೊಳ್ಳುವ ಸೋಂಕಿನ ನಿವಾರಣೆಗೆ ನೆರವು ನೀಡುತ್ತದೆ.

ಈ ಲೇಖನದಲ್ಲಿ ನಾವು ಕೆಲವು ಸರಳ ಸಲಹೆಗಳ ಬಗ್ಗೆ ಚರ್ಚಿಸಲಿದ್ದೇವೆ ಮತ್ತು ಮನಯಲ್ಲೇ ನಿಮ್ಮ ತುರಿಕೆ ಪಾದಗಳಿಗೆ ಪರಿಹಾರ ನೀಡುವ ಮನೆಮದ್ದುಗಳ ಬಗ್ಗೆ ತಿಳಿಸಲಿದ್ದೇವೆ. ಇವುಗಳು ಬಹಳ ಬೇಗನೆ ನಿಮಗೆ ಫಲಿತಾಂಶವನ್ನು ನೀಡುತ್ತವೆ. ಹಾಗಾದ್ರೆ ಅವುಗಳು ಯಾವುವು ಎಂಬ ಬಗ್ಗೆ ತಿಳಿಯಲು ಮುಂದೆ ಓದಿ.

*ಉಪ್ಪು ಈ ಪದಾರ್ಥವು ಪ್ರತಿಯೊಬ್ಬರ ಮನೆಯಲ್ಲೂ ಇದ್ದೇ ಇರುತ್ತದೆ. ಇದು ನಿಮ್ಮ ತುರಿಕೆ ಕಾಲುಗಳ ವಿರುದ್ಧ ತುಂಬಾ ಪರಿಣಾಮಕಾರಿಯಾಗಿ ವರ್ತಿಸುತ್ತದೆ. ಇದು ತುರಿಕೆ ಉಂಟು ಮಾಡುವ ಶಿಲೀಂದ್ರಗಳ ನಿವಾರಣೆಗೆ ಸಹಕಾರಿಯಾಗಿದೆ.

ಮಾಡುವ ವಿಧಾನ ಹೇಗೆ?
*ಮೊದಲು, ಸ್ವಲ್ಪ ನೀರನ್ನು ಬಿಸಿ ಮಾಡಿ. ಅದನ್ನು ಒಂದು ಸಣ್ಣ ಬಕೆಟ್ ಗೆ ಹಾಕಿಕೊಳ್ಳಿ ನಿಮ್ಮ ಕಾಲುಗಳನ್ನು ಅದರಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವಂತಿರಬೇಕು. ಅದಕ್ಕೆ ಸ್ವಲ್ಪ ಉಪ್ಪನ್ನು ಸೇರಿಸಿ, ಉಪ್ಪು ಆ ನೀರಿನಲ್ಲಿ ಕರಗುವಂತೆ ಮಾಡಿ.ಈ ನಿಮ್ಮ ಕಾಲುಗಳನ್ನು ಉಪ್ಪು ನೀರಿನ ಆ ದ್ರಾವಣದಲ್ಲಿ ಸುಮಾರು 10-15 ನಿಮಿಷ ಇಟ್ಟುಕೊಳ್ಳಿ. 15 ನಿಮಿಷದ ನಂತರ ಕಾಲುಗಳನ್ನು ಒಣಗಲು ಬಿಡಿ ಮತ್ತು ಟವೆಲ್ ನಿಂದ ಕ್ಲೀನ್ ಮಾಡಿ.ವಾರಕ್ಕೆ 3 ರಿಂದ 4 ಬಾರಿ ಇದನ್ನು ಪುನರಾವರ್ತಿಸಿದರೆ ವೇಗದ ಮತ್ತು ಉತ್ತಮವಾದ ಫಲಿತಾಂಶ ದೊರೆಯಲಿದೆ. ಆದರೆ ಈ ಔಷಧೋಪಚಾರವನ್ನು ನಿಮಗೆ ತೆರದ ಗಾಯಗಳು ಅಥವಾ ಕತ್ತರಿಸಿಕೊಂಡಂತ ಗಾಯಗಳಿದ್ದರೆ ಮಾಡಲು ಹೇಳಲಾಗುವುದಿಲ್ಲ.

*ಮೊಸರು ಮೊಸರಿನಲ್ಲಿ ಬ್ಯಾಕ್ಟೀರಿಯಾದ ವಿರುದ್ಧ ಮತ್ತು ಇತರೆ ಸೋಂಕುಗಳ ವಿರುದ್ಧ ಸೆಣಸಾಡುವಂತ ಅಂಶಗಳಿರುತ್ತದೆ. ಹಾಗಾಗಿ ಇದು ಕಾಲುಗಳಲ್ಲಿ ಉಂಟಾಗುವ ತುರಿಕೆಯಂತ ಸೋಂಕಿನ ವಿರುದ್ಧ ಸೆಣಸಾಡಲು ಸಹಕಾರಿಯಾಗಿದೆ.

*ಮಾಡುವ ವಿಧಾನ ಹೇಗೆ?
ತಾಜಾವಾಗಿರುವ ಮತ್ತು ಯಾವುದೇ ಫ್ಲೇವರ್ ಗಳನ್ನು ಸೇರಿಸಿರದ ಮೊಸರನ್ನು ನಿಮ್ಮ ಕಾಲುಗಳಲ್ಲಿ ತುರಿಕೆ ಇರುವ ಜಾಗಕ್ಕೆ ಹಚ್ಚಿಕೊಳ್ಳಿ ಮತ್ತು 20 ನಿಮಿಷ ಹಾಗೆಯೇ ಬಿಡಿ. 20 ನಿಮಿಷದ ನಂತರ ಸಹಜವಾಗಿರುವ ನೀರಿನಲ್ಲಿ ತೊಳೆಯಿರಿ ಮತ್ತು ಹಾಗೆಯೇ ಒಣಗಲು ಬಿಟ್ಟು ಸ್ವಚ್ಛವಾಗಿರುವ ಟವೆಲ್ ನಿಂದ ಕಾಲನ್ನು ಶುಚಿಗೊಳಿಸಿ.ನೀವು ನಿಮ್ಮ ಕಾಲುಗಳನ್ನು ಸಂಪೂರ್ಣವಾಗಿ ಶುಷ್ಕವಾಗಿಸಿದ್ದೀರಿ ಎಂಬ ಬಗ್ಗೆ ಖಾತ್ರಿ ಇರಲಿ. ಯಾಕೆಂದರೆ ಇದು ಮತ್ತಷ್ಟು ಸೋಂಕಿಗೆ ಕಾರಣವಾಗಬಾರದು. ನೀವು ಈ ರೆಮಿಡಿಯನ್ನು ದಿನಕ್ಕೆ ಎರಡು ಬಾರಿ ಮಾಡಿ ನೋಡಿ ಪ್ರಯತ್ನಿಸಬಹುದು.

*ವಿನೆಗರ್ ವಿನೆಗರ್ ನಲ್ಲಿ ಆಂಟಿಸೆಪ್ಟಿಕ್ ಗುಣಗಳಿದ್ದು, ಇದು ಶಿಲೀಂದ್ರಗಳಿಂದ ಉಂಟಾಗುವ ಸೋಂಕನ್ನು ಬಹಳ ಬೇಗನೆ ನಿವಾರಣೆ ಮಾಡುತ್ತದೆ. ವಿನೆಗರ್ ನಿಮ್ಮ ಕಾಲುಗಳಲ್ಲಿರುವ ತೇವಾಂಶವನ್ನು ಚರ್ಮದಿಂದ ಹೀರಿಕೊಳ್ಳುವ ಕೆಲಸ ಮಾಡುತ್ತದೆ ಮತ್ತು ಫಂಗಸ್ ಗಳು ಉಂಟು ಮಾಡಿರುವ ಸೋಂಕನ್ನು ನಿವಾರಸುತ್ತದೆ.

*ಮಾಡುವ ವಿಧಾನ ಹೇಗೆ?
ನಿಮ್ಮ ಕಾಲುಗಳನ್ನು ಇಟ್ಟುಕೊಳ್ಳಲು ಸಾಧ್ಯವಾಗುವಂತಹ ಒಂದು ಬಕೆಟ್ ಅಥವಾ ಟಬ್ ತೆಗೆದುಕೊಳ್ಳಿ . ಅದಕ್ಕೆ ಒಂದು ಭಾಗದಷ್ಟು ವಿನೆಗರ್ ಮತ್ತು 3 ಭಾಗ ಬಿಸಿ ನೀರನ್ನು ಸೇರಿಸಿ. ನಿಮ್ಮ ಕಾಲುಗಳನ್ನು ಸುಮಾರು 15 ನಿಮಿಷ ಅದರಲ್ಲಿ ಇಟ್ಟುಕೊಳ್ಳಿ. 15 ನಿಮಿಷದ ನಂತರ ಕಾಲುಗಳನ್ನು ಅಲ್ಲಿಂದ ತೆಗೆದು ಒಣಗಲು ಬಿಡಿ ಮತ್ತು ಟಬೆಲ್ ನಿಂದ ಒರೆಸಿಕೊಳ್ಳಿ. ಈ ಔಷಧವನ್ನು ದಿನಕ್ಕೆ ಎರಡು ಬಾರಿ ಮಾಡಿದರೆ ಒಂದೇ ವಾರದಲ್ಲಿ ನಿಮಗೆ ಫಲಿತಾಂಶವನ್ನು ಗಮನಿಸಿಕೊಳ್ಳಲು ಸಾಧ್ಯವಾಗುತ್ತದೆ.

*ಬೆಳ್ಳುಳ್ಳಿ ಬೆಳ್ಳುಳ್ಳಿಯು ಹಲವು ರೀತಿಯ ಚರ್ಮದ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು ಉರಿಯೂತ, ಸೋಂಕು ಇತ್ಯಾದಿ.. ಪ್ರತಿಯೊಬ್ಬರ ಮನೆಯಲ್ಲೂ ಬೆಳ್ಳುಳ್ಳಿ ಇದ್ದೇ ಇರುತ್ತದೆ, ಇದು ಬಹಳ ಸುಲಭವಾದ ಮತ್ತು ಪರಿಣಾಮಕಾರಿಯಾದ ಮನೆಮದ್ದಾಗಿದೆ.

*ಮಾಡುವ ವಿಧಾನ ಹೇಗೆ?
ನೀವು ಮಾಡಬೇಕಾಗಿರುವುದು ಇಷ್ಟೇ ಮೊದಲು ಒಂದು ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆದುಕೊಳ್ಳಿ. ನಂತರ ಅದನ್ನು ಜಜ್ಜಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟಿಗೆ 3 ರಿಂದ 4 ಸ್ಪೂನ್ ಆಲಿವ್ ಆಯಿಲ್ ನ್ನು ಸೇರಿಸಿ. ಎರಡೂ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ.ಈ ಬೆಳ್ಳುಳ್ಳಿಯ ಪೇಸ್ಟನ್ನು ನಿಮಗೆ ಸಮಸ್ಯೆ ಉಂಟಾಗಿರುವ ಕಾಲಿನ ಪಾದದ ಭಾಗಕ್ಕೆ ಅಪ್ಲೈ ಮಾಡಿ. ಸುಮಾರು 30 ನಿಮಿಷ ಹಾಗೆಯೇ ಬಿಡಿ. 30 ನಿಮಿಷದ ನಂತರ, ಆಂಟಿ ಫಂಗಲ್ ಸೋಪನ್ನು ಬಳಸಿ ತೊಳೆಯಿರಿ.ಹಾಗೆಯೇ ಒಣಗಲು ಬಿಡಿ ಮತ್ತು ಟವೆಲ್ ನಿಂದ ಕಾಲುಗಳನ್ನು ಸ್ವಚ್ಛಗೊಳಿಸಿ. ನೀವು ತುರಿಕೆಯಿಂದ ಮುಕ್ತಿ ಪಡೆಯುವವರೆಗೂ ಕೂಡ ಈ ಔಷಧವನ್ನು ಪ್ರತಿದಿನ ಬಳಕೆ ಮಾಡಬಹುದು.

*ಪೆಟ್ರೋಲಿಯಂ ಜೆಲ್ಲಿ ಪೆಟ್ರೋಲಿಯಂ ಜೆಲ್ಲಿ ಬಹಳ ಹಳೆಯ ಕಾಲದ ಒಂದು ಮದ್ದಾಗಿದ್ದು ಚರ್ಮದ ಹಲವು ಸಮಸ್ಯೆ ಮತ್ತು ಸೌಂದರ್ಯಕ್ಕಾಗಿ ಬಳಕೆ ಮಾಡಲಾಗುತ್ತದೆ.ಇದು ಪಾದಗಳ ತುರಿಕೆಯೂ ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಎಲ್ಲಿ ತೇವಾಂಶ ಇರುತ್ತದೆಯೋ ಅಲ್ಲಿ ಬ್ಯಾಕ್ಟೀರಿಯಾಗಳು ಬೇಗನೆ ಅಭಿವೃದ್ಧಿ ಹೊಂದುತ್ತವೆ. ಪೆಟ್ರೋಲಿಯಂ ಜೆಲ್ಲಿ ಈ ತೇವಾಂಶವನ್ನು ಚರ್ಮದಿಂದ ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ ಮತ್ತು ಬ್ಯಾಕ್ಟೀರಿಯಾಗಳ ವಾಸಕ್ಕೆ ಚರ್ಮವು ಅಯೋಗ್ಯವಾಗುವಂತೆ ಮಾಡುತ್ತದೆ.

*ಮಾಡುವ ವಿಧಾನ ಹೇಗೆ?
ನಿಮ್ಮ ಕೈಯಲ್ಲಿ ಸ್ವಲ್ಪ ಪೆಟ್ರೋಲಿಯಂ ಜೆಲ್ಲಿಯನ್ನು ತೆಗೆದುಕೊಳ್ಳಿ ಮತ್ತು ಅದನ್ನು ಎಫೆಕ್ಟ್ ಆಗಿರುವ ಜಾಗಕ್ಕೆ ಹಚ್ಚಿ. ವೃತ್ತಾಕಾರದಲ್ಲಿ ಸ್ವಲ್ಪ ಮಾಸಾಜ್ ಮಾಡಿ. ಸಾಕ್ಸ್ ಹಾಕಿಕೊಂಡು ಕಾಲುಗಳನ್ನು ಕವರ್ ಮಾಡಿಕೊಂಡು ನಿದ್ರಿಸಿ. ಒಂದು ರಾತ್ರಿ ಹಾಗೆಯೇ ಇರಲಿ, ಮಾರನೆಯ ದಿನ ಬೆಳಿಗ್ಗೆ ಸ್ನಾನ ಮಾಡುವಾಗ ಇದನ್ನು ತೊಳೆಯಿರಿ. ಪ್ರತಿ ದಿನ ರಾತ್ರಿ ಮಲಗುವ ಮುನ್ನ ನೀವಿದನ್ನು ಹಚ್ಚಿಕೊಳ್ಳಬಹುದು ಮತ್ತು ವ್ಯತ್ಯಾಸವನ್ನು ಗಮನಿಸಿಕೊಳ್ಳಬಹುದು.

Comments are closed.