ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಯಾವುದೇ ಸಂಘಟನೆ ಅಥವಾ ಯಾವನೇ ವ್ಯಕ್ತಿಗಾಗಲಿ ಪಟ್ಲ ಫೌಂಡೇಶನ್ ಟ್ರಸ್ಟ್ ನ ಪರವಾಗಿ ದೇಣಿಗೆ ಸಂಗ್ರಹಿಸಲು, ಹಣಕಾಸಿನ ವ್ಯವಹಾರ ನಡೆಸಲು ಯಾರಿಗೂ ಅಧಿಕಾರ ಕೊಟ್ಟಿರುವುದಿಲ್ಲ ಎಂದು ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದ್ದಾರೆ.
ಕುಂದಾಪುರ ಸಮೀಪದ ಮರವಂತೆ ಪರಿಸರದಲ್ಲಿ ಕೆಲವು ವ್ಯಕ್ತಿಗಳು ಪಟ್ಲ ಫೌಂಡೇಶನ್ ಟ್ರಸ್ಟಿನ ಹೆಸರಿನಲ್ಲಿ ಧನ ಸಂಗ್ರಹ ಮಾಡುತ್ತಿರುವ ಮಾಹಿತಿ ಟ್ರಸ್ಟ್ ಗೆ ಬಂದಿರುತ್ತದೆ.
ಪಟ್ಲ ಫೌಂಡೇಶನ್ ಹೆಸರಿನಲ್ಲಿ ಯಾರಾದರೂ ಧನ ಸಂಗ್ರಹಿಸಲು ಬಂದರೆ ಅಂತವರ ವಿರುದ್ದ ಸಮೀಪದ ಪೋಲೀಸ್ ಠಾಣೆಗೆ ದೂರು ನೀಡಿ. ಟ್ರಸ್ಟ್ ಹೆಸರನ್ನು ದುರುಪಯೋಗ ಪಡಿಸಿದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಲಾಭಿಮಾನಿಗಳು ಈ ಬಗ್ಗೆ ಜಾಗೂರಾಕರಾಗಿರಬೇಕೆಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದ್ದಾರೆ.

Comments are closed.