ಆರೋಗ್ಯ

ಕತ್ತು ನೋವಿನ ಸಮಸ್ಯೆ ಇದ್ದವರು ಈ ಎಲೆ ರಸವನ್ನು ಸೇವಿಸಿದರೆ ಒಳ್ಳೆಯದು.

Pinterest LinkedIn Tumblr

ಸ್ನೇಹಿತರೆ ವೀಳ್ಯದೆಲೆ ಇದು ನಮ್ಮ ಭಾರತದ ದೇಶದಲ್ಲಿ ತುಂಬಾ ಪ್ರಾಮುಖ್ಯತೆಯನ್ನು ಪಡೆದಿರುವ ತಾಂಬೂಲದ ಎಲೆ ಆದರೆ ಇದರ ಔಷಧ ಗುಣಗಳ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ. ಗೊತ್ತಾದರೆ ತಪ್ಪದೇ ಉಪಯೋಗಿಸದೇ ಇರುವುದಿಲ್ಲ. ವೀಳ್ಯದೆಲೆಯ ಗಿಡ ಪೈಪರೆಸೆ ಕುಟುಂಬಕ್ಕೆ ಸೇರಿದ್ದು ಇದರ ಶಾಸ್ತ್ರೀಯ ನಾಮ ಪೈಪರ್ ಪಿಟಿಲ್ ಇದು ಕೇವಲ ಎರಡು ತಿಂಗಳಲ್ಲಿ ಬೆಳೆಯುವ ಗಿಡ ಆಗಿದೆ ಇದರ ಎಲೆಗಳನ್ನು ಕೈಯಲ್ಲಿ ಕೊಯ್ಯದೆ ಕಟರ್‌ಗಳ ಸಹಾಯದಿಂದ ಕೊಯ್ಯಲಗುತ್ತೆ. ನಮ್ಮ ಕರ್ನಾಟಕದಲ್ಲಿ ಖಾರದ ವೀಳ್ಯದೆಲೆ ಗೆ ತುಂಬಾ ಪ್ರಾಮುಖ್ಯತೆ ಇದೆ. ಈಗಲೂ ಸಹ ತುಂಬಾ ಹಳ್ಳಿಯ ಜನ ಬಳಸುವುದು ಈ ಖಾರದ ವೀಳ್ಯದೆಲೆಗಳನ್ನ. ನಮ್ಮ ಸಂಪ್ರದಾಯದಲ್ಲಿ ಎಲ್ಲಾ ದೇವರ ಪೂಜೆ ಗಳಿಗೆ ವೀಳ್ಯದೆಲೆ ಇಡುತ್ತೇವೆ ಅದರಲ್ಲೂ ಹನುಮಂತನಿಗೆ ವೀಳ್ಯದೆಲೆ ಎಂದರೆ ತುಂಬಾ ಪ್ರಿಯವಾದದ್ದು ಶತ ಪಾತ್ರ ಪೂಜೆ ಮಾಡಿದರೆ ಎಲ್ಲಾ ದೋಷಗಳು ನಿವಾರಣೆ ಆಗುತ್ತೆ ಎನ್ನುವ ನಂಬಿಕೆ ಈಗಲೂ ಸಹ ಇದೆ.

ಹಾಗೂ ನಮ್ಮ ಮನೆಯಲ್ಲಿ ಊಟ ಮುಗಿದ ನಂತರ ತಾಂಬೂಲವನ್ನು ತೆಗೆದುಕೊಳ್ಳುವುದು ಒಂದು ವಾಡಿಕೆ ಆಗಿದೆ ಆದರೆ ಈಗಿನ ಕಾಲದಲ್ಲಿ ಊಟ ಮುಗಿದ ನಂತರ ಗುಟ್ಕಾ ಗಳನ್ನು ಅಗಿದು ಅವರ ಆರೋಗ್ಯವನ್ನು ಅವರ ಕೈಯಿಂದ ಹಾಳು ಮಾಡಿಕೊಳ್ಳುತ್ತಾ ಇದ್ದಾರೆ. ಅಷ್ಟೇ ಅಲ್ಲದೆ ವೀಳ್ಯದೆಲೆ ಗಿಡವನ್ನು ನಮ್ಮ ಮನೆಯ ಹತ್ತಿರ ಬೆಳೆಸಿ ಕೊಂಡರೆ ಹಣದ ಸಮಸ್ಯೆ ಇರುವುದಿಲ್ಲ ಆರ್ಥಿಕ ಸಮಸ್ಯೆ ಸರಿಯಾಗುತ್ತೆ ಎನ್ನುವ ನಂಬಿಕೆ ಈಗಲೂ ಸಹಾ ಇದೆ. ವೀಳ್ಯದೆಲೆ ರಸವನ್ನು ಕತ್ತು ನೋವಿಗೆ ಬಳಸಲಾಗುತ್ತದೆ. ವೀಳ್ಯದೆಲೆ ಯಲ್ಲಿ ಮೂಳೆಗಳಿಗೆ ಬೇಕಾಗುವ ಕ್ಯಾಲ್ಸಿಯಂ ಫಾಲಿಕ್ ಆಮ್ಲ ಕಣ್ಣಿನ ದೃಷ್ಟಿಯನ್ನು ಕಾಪಾಡುವ ವಿಟಮಿನ್ ಎ ರೋಗ ನಿರೋಧಕ ಶಕ್ತಿಯನ್ನು ಬೆಳೆಸುವ ವಿಟಮಿನ್ ಸಿ ವೀಳ್ಯದೆಲೆ ಯಲ್ಲಿ ಹೇರಳವಾಗಿ ಸಿಗುತ್ತೆ ಇದರಲ್ಲಿ ಫೈಬರ್ ಅಧಿಕವಾಗಿ ಇರುವುದರಿಂದ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಚಿಕ್ಕ ಮಕ್ಕಳಿಗೆ ಶೀತ ಜಾಸ್ತಿ ಆದರೆ ವೀಳ್ಯದೆಲೆ ಮೇಲೆ ಹರಳೆಣ್ಣೆ ಸಿಂಪಡಿಸಿ ಬಿಸಿ ಮಾಡಿ ಕೈಗೆ ಕಟ್ಟುವುದರಿಂದ ಶೀತ ಕಡಿಮೆ ಆಗುತ್ತೆ. ಹೃದಯದ ಸಮಸ್ಯೆ ಇದ್ದರೆ ವೀಳ್ಯದೆಲೆ ರಸವನ್ನು ಸೇವಿಸಿದರೆ ಒಳ್ಳೆಯದು.

ವೀಳ್ಯದೆಲೆಯಲ್ಲಿ ಇರುವ ವಿಟಮಿನ್ ಸಿ ಒಳ್ಳೆಯ ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡಿ ನಮ್ಮ ಶರೀರದ ಆರೋಗ್ಯವನ್ನು ಕಾಪಡುತ್ತೆ ಆದರೆ ಒಂದು ವಿಷಯ ನೆನಪಿನಲ್ಲಿ ಇಡಿ ವೀಳ್ಯದೆಲೆ ತಿನ್ನುವಾಗ ಅದರ ಕಡ್ಡಿ ಭಾಗವನ್ನು ತಿನ್ನಬಾರದು ಕೇವಲ ಕಡ್ಡಿಯನ್ನು ಮುರಿದು ವೀಳ್ಯದೆಲೆಯನ್ನು ಮಾತ್ರ ಸೇವಿಸಬೇಕು. ಏಕೆಂದರೆ ಹೆಂಗಸರಲ್ಲಿ ಸಂತಾನವನ್ನು ಕಳೆದುಕೊಳ್ಳುವ ಸಂಭವ ಜಾಸ್ತಿ ಇರುತ್ತದೆ. ಆದ್ದರಿಂದ ಸಂತಾನ ಪ್ರಾಪ್ತಿಗಾಗಿ ಪ್ರಯತ್ನ ಮಾಡುತ್ತಾ ಇರುವವರು ಯಾವುದೇ ಕಾರಣಕ್ಕೂ ವೀಳ್ಯದೆಲೆ ಕಡ್ಡಿಯ ಭಾಗವನ್ನು ಮಾತ್ರ ತಿನ್ನಬಾರದು.

ಅತಿಯಾದ ತೂಕ ಇರುವವರು ಒಂದು ವೀಳ್ಯದೆಲೆಯಲ್ಲಿ ಹತ್ತು ಕಾಳುಮೆಣಸಿನ ಬೀಜಗಳನ್ನು ಸೇವಿಸಿ ಕೂಡಲೇ ತಣ್ಣನೆಯ ನೀರನ್ನು ಕುಡಿದರೆ ತೂಕವನ್ನು ಕಡಿಮೆ ಮಾಡಿಕೊಳ್ಳುವ ಸಂಭವ ತುಂಬಾ ಕಡಿಮೆ ಇರುತ್ತದೆ. ಅಷ್ಟೇ ಅಲ್ಲದೆ ವೀಳ್ಯದೆಲೆ ನಮ್ಮ ಬಾಯಿಯಲ್ಲಿ ಬರುವ ದುರ್ವಾಸನೆಯನ್ನು ಹೋಗಲಾಡಿಸುತ್ತದೆ. ವೀಳ್ಯದೆಲೆ ಹಾಡು ಹೇಳುವವರಿಗೆ ಪಾಠವನ್ನು ಮಾಡುವವರಿಗೆ ಒಂದು ರಾಮಬಾಣ ಇದ್ದಂತೆ ಅವರ ಮಾತು ಮತ್ತು ಸ್ವರವನ್ನು ಇಂಪಾಗಿ ಬರುವಂತೆ ಮಾಡಿ ಅವರ ಕಂಠವನ್ನು ಕಾಪಾಡುತ್ತದೆ ಅಷ್ಟೆ ಅಲ್ಲದೆ ವೀಳ್ಯದೆಲೆ ಸೇವನೆ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪುರುಷರಿಗೆ ಹೇಳಿ ಮಾಡಿಸಿದಂತಿದೆ ಈ ವೀಳ್ಯದೆಲೆ.

Comments are closed.