ಕರಾವಳಿ

ಗಾದೆ ಮಾತುಗಳು ಮನುಷ್ಯನ ವ್ಯಕ್ತಿತ್ವದ ಕನ್ನಡಿಯಂತೆ, ಇದು ಎಷ್ಠರ ಮಟ್ಟಿಗೆ ನಿಜ ಬಲ್ಲಿರಾ.?

Pinterest LinkedIn Tumblr

ಮಾತುಗಳು ಹೇಗಿರಬೇಕು ಎಂಬ ಒಂದು ವಾಕ್ಯ ಇದೆ ಕೇಳಿದ್ದೀರಾ. ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವಃ ತಸ್ಮಾತ್ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ.ಅಂದರೆ ಪ್ರಿಯವಾದ ನಯವಾದ ಸ್ಪಷ್ಟವಾದ ಮಾತುಗಳನ್ನು ಆಡಬೇಕು ನಾವು ಮಾತನಾಡುವ ಪ್ರತಿಯೊಂದು ಮಾತುಗಳು ಮತ್ತೊಬ್ಬರಿಗೆ ಸಂತೋಷವನ್ನು ನೀಡುವಂತಿರಬೇಕು ನಮ್ಮ ಮಾತುಗಳನ್ನು ಮತ್ತೆ ಮತ್ತೆ ಅವರು ಕೇಳುವ ಹಾಗೆ ಇರಬೇಕು ನಮ್ಮ ಮಾತುಗಳು ಎಂದಿಗೂ ಕೂಡ ಬೇರೆಯವರಿಗೆ ಬೇಸರ ಉಂಟು ಮಾಡಬಾರದು ಮಾತುಗಳು ಮುದವಾಗಿ ಇರಬೇಕು. ಮಾತೆ ಮೃತ್ಯು ಮಾತೆ ಮುತ್ತು.

ಈ ಗಾದೆಯು ಮಾತಿನ ಮಹತ್ವವನ್ನು ತಿಳಿಸುತ್ತದೆ. ಮಾತು ಎಂಬುದು ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿದೆ ಮಾತುಗಳು ಒಬ್ಬರ ಅಭಿಪ್ರಾಯಗಳನ್ನು ಮತ್ತೊಬ್ಬರಿಗೆ ತಿಳಿಸುತ್ತದೆ ಹೀಗೆ ಮಾತುಗಳು ಬಗ್ಗೆ ಹಲವಾರು ರೀತಿಯ ಗಾದೆಗಳನ್ನು ನೋಡಬಹುದು. ಮಾತು ಬಲ್ಲವ ಮಾಣಿಕ್ಯ ತಂಡ. ಮಾತರಿಯಾದವ ಜಗಳ ತಂದ. ಮಾತು ಆಡಿದರೆ ಹೋಯಿತು. ಮುತ್ತು ಒಡೆದರೆ ಹೋಯಿತು. ಮಾತು ಬಲ್ಲವನಿಗೆ ಜಗಳವಿಲ್ಲ ಹಾಗೆಯೇ ಬಸವಣ್ಣನವರು ಹೇಳಿದ್ದಾರೆ ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಇವೆಲ್ಲ ಕೂಡ ಮಾತಿನ ಗುಣ ಮಹತ್ವವನ್ನು ತಿಳಿಸುತ್ತದೆ. ಕೆಲವರು ಮಾತನಾಡುತ್ತಾರೆ ಆ ಮಾತುಗಳು ಬೇರೆಯವರಿಗೆ ತುಂಬಾ ಬೇಸರ ಉಂಟು ಮಾಡುತ್ತದೆ ಯಾಕಪ್ಪಾ ಇವರು ಮಾತನಾಡುತ್ತಾರೆ ಇವರಿಗೆ ಯಾರು ಮಾತಾಡೋದು ಹೇಳಿ ಕೊಟ್ಟರು ಅಂತೆಲ್ಲ ಹೇಳುತ್ತಾರೆ ಜೊತೆಗೆ ಕೆಲವರು ಮಾತು ಜಗಳ ಕಿತ್ತಾಟಕ್ಕೆ ದಾರಿ ಆಗಿ ಬಿಡುತ್ತದೆ ಇದರಿಂದ ಮತ್ತೊಬ್ಬರ ಮನಸ್ಸು ಹಾಳಾಗುತ್ತದೆ.

ಆದರೆ ಕೆಲವರು ಮಾತಾಡುತ್ತಾರೆ ಅವರ ಮಾತುಗಳನ್ನು ಕೇಳುತ್ತಿದ್ದರೆ ಕೇಳುತ್ತಲೇ ಇರಬೇಕು ಅನ್ನಿಸುತ್ತದೆ ಏಕೆಂದರೆ ಅವರ ಮಾತಿನಲ್ಲಿ ಅಷ್ಟು ಅರ್ಥ. ಮದುರತೆ .ನಯ ವಿನಯ ಕೂಡಿರುತ್ತದೆ.ಈ ರೀತಿಯ ಮಾತುಗಳ ಬೇಗ ಸ್ನೇಹಕ್ಕೆ ಹೋಗುತ್ತದೆ. ಅದಕ್ಕಾಗಿಯೇ ಸರ್ವಜ್ಞ ಕವಿಯು ಹೇಳಿದ್ದಾರೆ “ಮಾತಿನಿಂ ನಗೆನುಡಿಯು ಮಾತಿನಿಂ ನಗೆನುಡಿಯು ಮಾತಿನಿಂ ಹಗೆ ಹತಿಯು ಮಾತಿನಿಂ ಸರ್ಪಸಂಪದವು ಲೋಕಕ್ಕೆ ಮಾತೆ ಮಾಣಿಕ್ಯವು” ಎಂದಿದ್ದಾನೆ. ಹಾಗಾಗಿ ಮಾತು ಯಾವಾಗಲೂ ಮೃದುವಾಗಿದ್ದರೆ ಮುತ್ತಿನಂತ ಮಾತು ಎಂದು ಮಾತು ಒರಟಾಗಿದ್ದರೆ ಮೃತ್ಯುವನ್ನು ತರಬಲ್ಲದು ಎಂದು ಎಚ್ಚರಿಕೆಯಿಂದ ಮಾತನಾಡಬೇಕು

ಮಾತು ಎಂಬುದು ಮನುಷ್ಯನಿಗೆ ಸಿಕ್ಕಿರುವ ಒಳ್ಳೆಯ ದೊಡ್ಡ ಉಡುಗೊರೆ ಕೆಲವರು ಮುಗರಾಗಿರುತ್ತದೆ ಅಂದರೆ ಅವರಿಗೆ ಮಾತು ಬರುವುದಿಲ್ಲ ಅವರನ್ನು ನೋಡಿದಾಗ ಅನ್ನಿಸುತ್ತದೆ ನಾವು ನಿಜವಾಗಲೂ ಅದೃಷ್ಟವಂತರು ಅದಕ್ಕಾಗಿ ನಮಗೆ ಸಿಕ್ಕಿರುವ ಈ ದೊಡ್ಡ ಉಡುಗೊರೆಯನ್ನು ಒಳ್ಳೆಯದಾಗಿ ಉಳಿಸಿಕೊಳ್ಳಬೇಕು. ಈ ವಾಕ್ ಶಕ್ತಿ ಎಂಬುದು ವಿದ್ಯುತ್ ಶಕ್ತಿ, ಇದ್ದಂತೆ. ಉಪಾಯವಾಗಿ ಕ್ರಮವರಿತು ಬಳಸಿದರೆ ದೊಡ್ಡ ಉಪಕಾರಿಯಾಗುತ್ತದೆ.ಅದನ್ನು ಬಿಟ್ಟು ಕ್ರಮತಪ್ಪಿದರೆ ಅದಕ್ಕಿಂತ ಅಪಾಯಕಾರಿ ಇನ್ನೊಂದಿಲ್ಲ.

ಮಾತು ಎಂಬುದು ತುಂಬಾ ಸೂಕ್ಮ ತೀಕ್ಷ್ಣವಾದರೆ ಕತ್ತಿಗಿಂತ ಇದು ಕ್ರೂರ ಒಂದು ಬಾರಿ ಕತ್ತಿಯಿಂದಾ ಆದ ಗಾಯ ಎಂದಿಗೂ ಕೂಡ ಮಾಸಿ ಹೋಗುತ್ತದೆ ಆದರೆ ಮಾತಿನಿಂದ ಆದ ಗಾಯ ಎಂದಿಗೂ ವಾಸಿಯಾಗುವುದಿಲ್ಲ ಜೊತೆಗೆ ಮಾತಿನಿಂದ ಎಂತಹ ಮಿತ್ರನು ಕೂಡ ಶತ್ರುವಾಗುತ್ತಾನೆ, ಶತ್ರು ಕೂಡ ಮಿತ್ರ ನಾಗುತ್ತಾನೆ. ಅದಕ್ಕಾಗಿ ಯಾವ ಸಮಯದಲ್ಲಿ ಮಾತನಾಡಬೇಕು ಎಂದರು ಕೂಡ ತುಂಬಾ ಜಾಗೃತೆಯಿಂದ ಯೋಚಿಸಿ ಮಾತನಾಡಿ ನಿಮ್ಮ ಮಾತುಗಳು ಯಾರಿಗೂ ತೊಂದರೆ ಕೊಡಬಾರದು ನೋವು ಕೊಡಬಾರದು ಅದಕ್ಕಾಗಿ ಮಾತನಾಡುವಾಗ ಎಚ್ಚರ ಇರಲಿ ನಿಮ್ಮ ಮಾತು ಮುತ್ತುಗಳ ಹಾಗೆ ಸುರಿಯಲಿ ಹಾಗೆ ಮಾತನಾಡುವುದು ನಿಮ್ಮ ವಾಕ್ ಚಾತುರ್ಯ ಇದನ್ನು ಸದಾ ನಿಮ್ಮ ಬಳಿ ಇಟ್ಟುಕೊಳ್ಳಿ.

Comments are closed.