ಆರೋಗ್ಯ

ಕುಂದಾಪುರದ ಮೂವರು KSRTC ಬಸ್ ಚಾಲಕರಿಗೆ ಕೊರೊನಾ ಪಾಸಿಟಿವ್ ದೃಢ

Pinterest LinkedIn Tumblr

ಕುಂದಾಪುರ: ಕೆಎಸ್‌ಆರ್‌ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕರ ಗಂಟಲು ದ್ರವದ ಪರೀಕ್ಷೆಗಳನ್ನು ಮಾಡಲಾಗಿದ್ದು, ಸೋಮವಾರ ಮೂವರು ಚಾಲಕರಿಗೆ ಕೊರೊನಾ ಸೋಂಕು ದೃಢವಾಗಿದೆ.

ಕುಂದಾಪುರದಿಂದ ಹೊರ ಜಿಲ್ಲೆಗಳಿಗೆ ಸಂಚರಿಸುವ ಬಸ್‌ಗಳ ಚಾಲಕರಾದ ಬಸ್ರೂರಿನ 58 ವರ್ಷದ, ಬಾಗಲಕೋಟೆ ಮೂಲದ 36 ವರ್ಷದ ಹಾಗೂ 44 ವರ್ಷದ ಮೂವರು ಬಸ್ ಚಾಲಕರಿಗೆ ಕೊರೊನಾ ಪಾಸಿಟಿವ್ ಇರುವುದು ತಿಳಿದುಬಂದಿದೆ.

ಗುರುವಾರ ಕುಂದಾಪುರದಲ್ಲಿರುವ ಕೆಎಸ್‌ಆರ್‌ಟಿಸಿ ಡಿಪೋದ ಸಿಬಂದಿ, ಬಸ್ ಚಾಲಕರು, ನಿರ್ವಾಹಕರ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಬಂದಿದ್ದು, ಅದರಲ್ಲಿ ಮೂವರಿಗೆ ಪಾಸಿಟಿವ್ ಬಂದಿದೆ.

ಕುಂದಾಪುರ – ಬೆಂಗಳೂರು ಬಸ್ ಚಾಲಕ 44 ವರ್ಷದವರಿಗೆ ಸೋಂಕು ದೃಢವಾಗಿದ್ದು, ಅವರನ್ನು ಕುಂದಾಪುರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತರ ಪೈಕಿ 58 ವರ್ಷದ ಬಸ್ರೂರು ಮೂಲದವರು ವಯೋಮಿತಿ ಆಧಾರದಲ್ಲಿ ರಜೆಯಲ್ಲಿದ್ದು, ಅವರು ಲಾಕ್‌ಡೌನ್ ಬಳಿಕ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಮತ್ತೊಬ್ಬ 36 ವರ್ಷದ ವ್ಯಕ್ತಿ ಕುಂದಾಪುರ – ಶಿವಮೊಗ್ಗ ಬಸ್ ಚಾಲಕರಾಗಿದ್ದು, ಅವರು ಕೂಡ ಸದ್ಯ ರಜೆಯಲ್ಲಿದ್ದು, ಬಾಗಲಕೋಟೆ ಊರಿಗೆ ತೆರಳಿದ್ದಾರೆ. ಸದ್ಯ ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಯಾಣಿಕರಿಗೆ ಭಯ ಬೇಡ…..
ಡ್ರೈವರ್ ಕ್ಯಾಬಿನ್ ಪ್ರತ್ಯೇಕವಾಗಿರುವುದರಿಂದ ಪ್ರಯಾಣಿಕರು ಆತಂಕಗೊಳ್ಳಬೇಕಿಲ್ಲ. ಪ್ರಯಾಣಿಕರು ಯಾರೂ ಕೂಡ ಇವರ ಪ್ರಾಥಮಿಕ ಸಂಪರ್ಕದಲ್ಲಿಲ್ಲ ಎಂದು ತಿಳಿದು ಬಂದಿದೆ. ಈ ಮೂವರ ಪ್ರಾಥಮಿಕ ಸಂಪರ್ಕ ಇದ್ದವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ.

Comments are closed.