ಆರೋಗ್ಯ

ಕೋಟದ 5 ಮಂದಿ ಹೋಟೆಲ್ ಸಿಬ್ಬಂದಿಗಳು, ಅಂಗಡಿ ಮಾಲಿಕನ ಮನೆಯವರು ಸೇರಿ 9 ಮಂದಿಯಲ್ಲಿ ಕೊರೋನಾ

Pinterest LinkedIn Tumblr

ಉಡುಪಿ: ಜಿಲ್ಲೆಯ ಕೋಟದ ಹೋಟೆಲ್‌ವೊಂದರ ಸಿಬ್ಬಂದಿಗಳು, ಹಾಗೂ ಸಮೀಪದ ಅಂಗಡಿಯ ಮಾಲೀಕನ ಕುಟುಂಬ ಸೇರಿದಂತೆ ಒಟ್ಟು 9 ಮಂದಿಯಲ್ಲಿ ಕೋವಿಡ್ ಸೋಂಕು ಭಾನುವಾರ ದೃಢಪಟ್ಟಿದೆ.

ಬುಧವಾರ ಇಲ್ಲಿನ ಪ್ರಸಿದ್ಧ ಹೋಟೆಲ್‌ವೊಂದರ ಮಾಲೀಕರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು ಅವರನ್ನು ಉಡುಪಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಮನೆ, ಹೋಟೆಲ್ ಸೀಲ್‌ಡೌನ್ ಮಾಡಲಾಗಿತ್ತು. ಹೋಟೆಲ್ ಸಿಬ್ಬಂದಿ ಹಾಗೂ ಪ್ರಾಥಮಿಕ ಸಂಪರ್ಕ ಹೊಂದಿರುವವರಿಗೆ ಕ್ವಾರಂಟೈನ್ ನಲ್ಲಿರಲು ತಿಳಿಸಲಾಗಿತ್ತು. ಇದೀಗ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಐವರು ಸಿಬಂದಿಗಳಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ ಮತ್ತು ಹೋಟೆಲ್ ಪಕ್ಕದ ದಿನಬಳಕೆಯ ಅಂಗಡಿಯೊಂದರ ಮಾಲೀಕನ ಕುಟುಂಬದ ನಾಲ್ಕು ಮಂದಿಗೆ ಸೋಂಕು ಕಂಡು ಬಂದಿದೆ. ಆದರೆ ಅಂಗಡಿ ಮಾಲೀಕನೂ ಕೂಡ ತಪಾಸಣೆಗೆ ಒಳಗಾಗಿದ್ದು ವರದಿ ನೆಗಿಟಿವ್ ಬಂದಿದೆ.

ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಅಂಗಡಿ ಮತ್ತು ಮನೆಯನ್ನು ಸೀಲ್‌ಡೌನ್ ಮಾಡಿದ್ದಾರೆ. ಹೋಟೆಲ್ ಕಾರ್ಮಿಕರ ಮನೆಗಳನ್ನು ಸೀಲ್ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

Comments are closed.