ರಾಷ್ಟ್ರೀಯ

“ಸ್ಥಳೀಯ ಭಾರತ”ವನ್ನು “ಗ್ಲೋಕಲ್ ಇಂಡಿಯಾ”ವಾಗಿ ಪರಿವರ್ತಿಸುವ ‘ಸ್ವಾವಲಂಬಿ ಭಾರತ’ ಅಭಿಯಾನ ಕೈಜೋಡಿಸಲು ವೆಂಕಯ್ಯ ನಾಯ್ಡು ಕರೆ

Pinterest LinkedIn Tumblr

ನವದೆಹಲಿ: ದೇಶದ ಪ್ರತಿ ನಾಗರಿಕ ಕೂಡ “ಸ್ಥಳೀಯ ಭಾರತ”ವನ್ನು “ಗ್ಲೋಕಲ್ ಇಂಡಿಯಾ” (ಗ್ಲೋಬಲ್ ಮತ್ತು ಲೋಕಲ್) ಆಗಿ ಪರಿವರ್ತಿಸುವ ‘ಸ್ವಾವಲಂಬಿ ಭಾರತ’ ಅಭಿಯಾನ ಕೈಗೊಳ್ಳಬೇಕು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಕರೆ ನೀಡಿದ್ದಾರೆ.

ಉಪರಾಷ್ಟ್ರಪತಿ ನಿವಾಸದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಎಲಿಮೆಂಟ್ ಮೊಬೈಲ್ ಅಪ್ಲಿಕೇಶನ್‌ನ ವರ್ಚುವಲ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆ ವೃದ್ಧಿಗೆ ಸೂಕ್ತ ಪರಿಸರ ವ್ಯವಸ್ಥೆ ರಚಿಸಬೇಕೆಂದು ಕರೆ ನೀಡಿದರು.

ಆಧುನಿಕ ತಂತ್ರಜ್ಞಾನ, ಮಾನವ ಸಂಪನ್ಮೂಲದ ಸದ್ಭಳಕೆ, ಪೂರೈಕೆ ಸರಣಿಯನ್ನು ರಚಿಸುವ ಮೂಲಕ ಮೂಲಸೌಕರ್ಯಗಳನ್ನು ಬಲಪಡಿಸುವ ಮೂಲಕ ದೇಶದ ಆರ್ಥಿಕ ಸಾಮರ್ಥ್ಯಕ್ಕೆ ಒತ್ತು ನೀಡುವುದು ಸ್ವಾವಲಂಬಿ ಭಾರತ ಅಭಿಯಾನದ ಉದ್ದೇಶ ಎಂದರು.

ಸ್ವಾವಲಂಬಿ ಭಾರತ’ ಅಭಿಯಾನ ಯಾವುದೇ ರಕ್ಷಣಾತ್ಮಕತೆ ಅಥವಾ ಪ್ರತ್ಯೇಕತೆಯ ಕರೆಯಲ್ಲ, ಆದರೆ ಉದ್ಯಮಶೀಲತೆಯನ್ನು ಬೆಳೆಸುವ, ನಾವೀನ್ಯತೆಯನ್ನು ಪೋಷಿಸುವ ಮತ್ತು ಗ್ರಾಮೀಣ ಮತ್ತು ನಗರದ ಸಹಜೀವನದ ಅಭಿವೃದ್ಧಿಗೆ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಯೋಜನೆಯಾಗಿದೆ ಎಂದರು.

Comments are closed.