ಆರೋಗ್ಯ

ಉಡುಪಿಯ ಹೋಟೆಲೋಂದರ ಬಾಣಸಿಗನಿಗೆ ಕೊರೋನಾ ಸೋಂಕು: ಗ್ರಾಹಕರಲ್ಲಿ ಆತಂಕ!

Pinterest LinkedIn Tumblr

ಉಡುಪಿ: ಕರಾವಳಿ ಬೈಪಾಸ್ ನಿಂದ ಉಡುಪಿ ನಗರವನ್ನು ಸಂಪರ್ಕಿಸುವ ಮುಖ್ಯ ರಸ್ತೆಗೆ ಹೊಂದಿಕೊಂಡ ಬನ್ನಂಜೆಯಯಲ್ಲಿರುವ ಹೊಟೇಲೊಂದರ ಅಡುಗೆ ತಯಾರಕನಿಗೆ ಇಂದು ಕೋವಿಡ್ 19 ಸೋಂಕು ದೃಢಪಟ್ಟಿದೆ.

ಈ ಹೊಟೇಲ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯಲ್ಲಿ ಕೋವಿಡ್ 19 ಸೋಂಕು ವರದಿ ಪಾಸಿಟಿವ್ ಬಂದ ಕಾರಣ ಇದೀಗ ಈ ಹೊಟೇಲ್ ಸೀಲ್ ಡೌನ್ ಮಾಡಲಾಗಿದೆ.

ಇಲ್ಲಿನ ಅಡುಗೆ ತಯಾರಿಸುವ ವ್ಯಕ್ತಿಗೆ ಕೋವಿಡ್ 19 ಸೋಂಕು ದೃಢವಾಗುತ್ತಿದ್ದಂತೆ ಕಳೆದ ಕೆಲವು ದಿನಗಳಿಂದ ಇಲ್ಲಿಗೆ ಭೇಟಿ ನೀಡಿದ್ದ ಗ್ರಾಹಕರಿಗೆ ಹಾಗೂ ಪಾರ್ಸೆಲ್ ಕೊಂಡು ಹೋದವರಿಗೆ ಇದೀಗ ಆತಂಕ ಶುರುವಾಗಿದೆ.

Comments are closed.