ಆರೋಗ್ಯ

ಗಜಕರ್ಣದಂತಹ ಸಮಸ್ಯೆ ನಿವಾರಣೆಗೆ ಈ ಮನೆ ಮದ್ದು

Pinterest LinkedIn Tumblr

ಕೆಲವರಿಗೆ ಅವರ ದೇಹ ಪ್ರಕೃತಿಯಂತೆ ಬಹುಬೇಗ ಗಜಕರ್ಣದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದು ಕುತ್ತಿಗೆ, ಕೈ, ಕಾಲು ಹೀಗೆ ದೇಹದ ಹಲವು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆ ಒಂದು ರೀತಿಯಲ್ಲಿ ವೇದನೆಯನ್ನುಂಟು ಮಾಡುತ್ತವೆ. ಇದು ಬಂದ ಆರಂಭದಲ್ಲಿಯೇ ಇದನ್ನು ಗುಣಪಡಿಸಿಕೊಳ್ಳುವುದು ಉತ್ತಮ. ಇಲ್ಲವಾದರೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಇದು ಶುರುವಾಗುತ್ತಿದ್ದಂತೆ ಡಾಕ್ಟರ್ ಬಳಿ ಹೋಗಿ ಹಣ ವ್ಯಯ ಮಾಡುವುದಕ್ಕಿಂತ ಮನೆಯಲ್ಲಿಯೇ ಸಿಗುವ ಕೆಲವೊಂದು ಮನೆಮದ್ದು ಉಪಯೋಗಿಸುವುದು ಒಳ್ಳೆಯದು. ಇದು ಬಹುಬೇಗ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹರಡುವುದರಿಂದ ಇದನ್ನು ಬಹು ಜಾಗರೂಕತೆಯಿಂದ ಗುಣ ಪಡಿಸಿಕೊಳ್ಳಬೇಕು. ಇದರ ನಿವಾರಣೆಗೆ ಬಳಸಬಹುದಾದ ಮನೆಮದ್ದುಗಳ ಬಗ್ಗೆ ಇಲ್ಲಿದೆ ಮಾಹಿತಿ.

ತೀವ್ರವಾಘಿ ಗಜಕರ್ಣದ ಸಮಸ್ಯೆ ನಿಮ್ಮನ್ನು ಭಾದಿಸುತ್ತಿದ್ದರೆ, ಬೇವಿನ ಸೊಪ್ಪಿನ ಪೇಸ್ಟ್ಗೆ ಒಂದು ಚಮಚ ಅರಿಶಿನ ಮತ್ತು ತುಳಸಿ ಪೇಸ್ಟ್ ಬೆರೆಸಿ ಹುಳುಕಡ್ಡಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಒಂದು ದಿನಕ್ಕೆ ೩ ರಿಂದ ೪ ಬಾರಿ ಹೀಗೆ ಮಾಡಿದರೆ ಗಜಕರ್ಣ ಸಮಸ್ಯೆ ಬಹು ಬೇಗನೆ ಕಡಿಮೆಯಾಗುತ್ತದೆ. ಇದರ ಕಲೆಯೂ ಉಳಿಯುವುದಿಲ್ಲ.

ಅಂತೆಯೇ, ಸಣ್ಣಪ್ರಮಾಣದ ಗಜಕರ್ಣದ ಸಮಸ್ಯೆ ಇದ್ದರೆ ಆ ಭಾಗಕ್ಕೆ ಬೆಳ್ಳುಳ್ಳಿ ರಸವನ್ನು ಹತ್ತಿಯಿಂದ ಹಚ್ಚಬೇಕು. ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಇದನ್ನು ದಿನಕ್ಕೆ ೪ ರಿಂದ ೫ ಬಾರಿ ಮಾಡಿದರೆ ಹುಳುಕಡ್ಡಿ ವಾಸಿಯಾಗುತ್ತದೆ. ಅದೇ ರೀತಿ ಅರಿಶಿನವನ್ನು ಹಚ್ಚಬಹುದು. ಉತ್ತಮ ಗುಣಮಟ್ಟದ ಶುದ್ದ ಅರಿಶಿನ ಬಳಕೆ ಕಡ್ಡಾಯ.

Comments are closed.