ಆರೋಗ್ಯ

ಮಾನಸಿಕ ಖಿನ್ನತೆ ಮತ್ತು ಆತಂಕಕ್ಕೆ ಒಳಪಟ್ಟಿರುವ ಮಕ್ಕಳ ಬಗ್ಗೆ ತಿಳಿಯುವ ಸೂಕ್ಷ್ಮ ಸೂಚನೆಗಳು

Pinterest LinkedIn Tumblr

ಮಕ್ಕಳು ಭಯ ಹುಟ್ಟಿಸುವ ತರಾವರಿ ಸ್ವಭಾವಗಳನ್ನ ವ್ಯಕ್ತಪಡಿಸುತ್ತಾರೆ. ಹೀಗಾಗಿ ನಾವು ಅವರು ತೋರುವ ನಡವಳಿಕೆಯಲ್ಲಿ ಯಾವುದ ರ  ಬಗ್ಗೆ ತಲೆ ಕೆಡಿಸಿಕೊಳ್ಳಬೇಕು ಮತ್ತು ಗಮನ ಹರಿಸಬೇಕು ಎಂಬುದನ್ನ ತಿಳಿದುಕೊಳ್ಳಲು ಆಗುವುದೇ ಇಲ್ಲ. ಆದರೆ ಕೆಲವೊಂದು ನಿರ್ಧಿಷ್ಟ ನಡವಳಿಕೆಗಳು ಮಕ್ಕಳಲ್ಲಿ ಮಾನಸಿಕ ಖಿನ್ನತೆ ಮತ್ತು ಆತಂಕ ಇರುವುದರ ಸೂಕ್ಷ್ಮ ಸೂಚನೆಗಳು ಆಗಿರುತ್ತವೆ. ಮಾನಸಿಕ ಖಿನ್ನತೆಯನ್ನು ಸೂಚಿಸುವ ನಡವಳಿಕೆಗಳ ಬಗ್ಗೆ ನಿಮಗೆ ತಿಳಿದಿದ್ದರೆ, ನಿಮ್ಮ ಮನಸಿಗೂ ನೆಮ್ಮದಿ ತಂದುಕೊಳ್ಳಬಹುದು ಮತ್ತು ನಿಮ್ಮ ಮಗುವಿಗೂ ಖಿನ್ನತೆಯ ವಿರುದ್ಧ ಹೋರಾಡಲು ಸಹಾಯ ಮಾಡಬಹುದು.

ಹಾಗಿದ್ದರೆ ಅಂತಹ ಸೂಚನೆಗಳು ಯಾವುದು ಎಂಬುದು ತಿಳಿಯೋಣ ಬನ್ನಿ :

೧. ಇದ್ದಕ್ಕಿದ್ದಂತೆ ಸಿಟ್ಟಾಗುವುದು
ಮಕ್ಕಳಲ್ಲಿನ ಖಿನ್ನತೆ ಅಥವಾ ಆತಂಕ ಇರುವುದರ ಮೊದಲ ಸಾಮಾನ್ಯ ಸೂಚನೆ ಎಂದರೆ ಅದು ತುಂಬಾ ಸಲೀಸಾಗಿ ಸಿಟ್ಟಾಗುವುದು ಮತ್ತು ಇರಿಸುಮುರಿಸಿಗೆ ಈಡಾಗುವುದು. ಯಾವಾಗಲೋ ಒಮ್ಮೆ ನಿಮ್ಮ ಮಗುವು ಕೋಪೋದ್ರಿಕ್ತವಾದರೆ ಅಥವಾ ಹತಾಶೆಗೊಂಡರೆ ಅದರಲ್ಲಿ ಭಯ ಪಡುವಂತದ್ದು ಏನಿಲ್ಲ, ಆದರೆ ಇದು ಪದೇ ಪದೇ ಮರುಕಳಿಸುತ್ತಿದ್ದರೆ ಮತ್ತು ಅಸಹಜವಾಗಿ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸುತ್ತಿದ್ದರೆ, ನೀವು ಅದರ ಬಗ್ಗೆ ಖಂಡಿತವಾಗಿಯೂ ಗಮನ ಹರಿಸಬೇಕು.

೨. ಅತಿಯಾಗಿ ಸುಸ್ತಾಗುವುದು
ತಜ್ಞರ ಪ್ರಕಾರ ಖಿನ್ನತೆಗೆ ಒಳಗಾಗಿರುವ ಮಕ್ಕಳು ಬಹುತೇಕ ಸಮಯ ಇರಿಸುಮುರಿಸುಗೊಂಡಿರುತ್ತಾರೆ, ಯಾವುದರಲ್ಲೂ ಆಸಕ್ತಿ ವಹಿಸುವುದಿಲ್ಲ ಮತ್ತು ಜಡತ್ವ ಪ್ರದರ್ಶಿಸುತ್ತಾರೆ. ಇದರ ಅರ್ಥ ಬಹುಕಾಲದ ಆಯಾಸ ಮತ್ತು ಯಾವಾಗಲೂ ಅಶಕ್ತರಂತೆ ಕೂರುವುದು ಖಿನ್ನತೆಯ ಒಂದು ಸೂಚನೆ ಆಗಿರುತ್ತದೆ.

೩. ಪದೇ ಪದೇ ಬೇಸರಗೊಂಡಿರುವುದು
ಒಂದು ವೇಳೆ ನಿಮ್ಮ ಮಗುವು ಅಸಹಜವಾಗಿ ದಿನಗಟ್ಟಲೆ, ವಾರಗಟ್ಟಲೆ ಅಳುತ್ತಾ ಕುಂತಿದ್ದರೆ, ಅದು ನಿಮ್ಮ ಮಗುವಿನ ಕಾರ್ಯ ಕ್ಷಮತೆಯ ಮೇಲೆ ಅಡ್ಡ ಪರಿಣಾಮ ಬೀರುತ್ತಿದ್ದರೆ, ನೀವು ವೈದ್ಯರ ಸಹಾಯ ಪಡೆದುಕೊಳ್ಳಬೇಕು. ಹಠ ಮಾಡುವುದು, ಗೋಳಿಡುವುದು ಅಸಹಜ ಅಲ್ಲದಿದ್ದರೂ, ಸ್ವಭಾವದಲ್ಲಿ ವಿಪರೀತ ವ್ಯತ್ಯಾಸ ಕಾಣಿಸಿದರೆ ಅದು ಯೋಚಿಸಬೇಕಾದ ವಿಷಯವೇ.

೪. ಆಸಕ್ತಿ ಕಳೆದುಕೊಳ್ಳುವುದು
ತಜ್ಞರು ಹೇಳುವ ಪ್ರಕಾರ ಕೆಲವು ಮಕ್ಕಳು ಒಳ್ಳೆಯ ವಾತಾವರಣದಲ್ಲಿ ಉತ್ತಮವಾಗಿ ಕಾರ್ಯವಹಿಸುತ್ತಾರೆ, ಆದರೆ ಮಾನಸಿಕ ಖಿನ್ನತೆ ಮತ್ತು ಅಪಾರ ಆತಂಕಕ್ಕೆ ಒಳಗಾಗಿರುವ ಮಕ್ಕಳು ಸಾಮಾಜಿಕ ಮತ್ತು ಇತರೆ ಕೆಲಸಗಳಲ್ಲಿ ಹಲವಾರು ಬದಲಾವಣೆಗಳನ್ನ ಕಾಣುತ್ತಾರೆ. ಮುಖ್ಯವಾಗಿ ಅವುಗಳ ಮೇಲೆ ಆಸಕ್ತಿ ಕಳೆದುಕೊಳ್ಳುವುದು ಮತ್ತು ಅವುಗಳಲ್ಲಿ ಭಾಗವಹಿಸಲು ಹಿಂದೇಟು ಹಾಕುವುದು.

೫. ಹಸಿವನ್ನ ಕಳೆದುಕೊಳ್ಳುವುದು
ಖಿನ್ನತೆ ಮತ್ತು ಆತನಕವು ಮಕ್ಕಳ ಹಸಿವು ಮತ್ತು ಆಹಾರಪದ್ಧತಿ ಮೇಲೆ ಪ್ರಭಾವ ಬೀರುತ್ತದೆ. ಮುಖ್ಯವಾಗಿ ಖಿನ್ನತೆಯು ಮಕ್ಕಳಿಗೆ ಊಟ ಮಾಡಲು ಆಸಕ್ತಿ ಇಲ್ಲದಂತೆ ಮಾಡಬಹುದು ಅಥವಾ ಸುಮ್ಮನೆ ಬಹುಕಾಲದವರೆಗೆ ಯಾವುದೇ ಕಾರಣವಿಲ್ಲದೆ ಹೊಟ್ಟೆಯೇ ಹಸಿದುಕೊಳ್ಳದೆ ಹಾಗೆಯೇ ಇದ್ದುಬಿಡಬಹುದು.

೬. ಅತಿಯಾಗಿ ಸೂಕ್ಷ್ಮವಾಗಿರುತ್ತಾರೆ
ತಿರಸ್ಕಾರಕ್ಕೆ ಅಥವಾ ಅಸಫಲತೆಗೆ ಅತಿಯಾಗಿ ಸೂಕ್ಷ್ಮವಾಗುವುದು ಮಕ್ಕಳಲ್ಲಿ ಖಿನ್ನತೆಯ ಒಂದು ಸೂಚನೆ ಆಗಿರುತ್ತದೆ. ನೀವು ಅವರ ಸೂಕ್ಷ್ಮತೆಯಲ್ಲಿ ಅತಿಯಾದ ಬದಲಾವಣೆ ಕಂಡರೆ ಅಥವಾ ಅವರು ಈಗಾಗಲೇ ಮಾಡುತ್ತಿರುವ ವಿಷಯಗಳಲ್ಲೇ ತಮ್ಮ ಸೂಕ್ಷ್ಮತೆ ಬದಲಿಸಿಕೊಂಡರೆ, ಅಂತಹ ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸುವುದು ಹೇಗೆ ಎಂಬುದು ನಿಮ್ಮ ವೈದ್ಯರೊಡನೆ ಚರ್ಚಿಸಿ.

೭. ಯಾವಾಗಲೂ ಅಸ್ವಸ್ಥರಾಗಿರುವುದು
ಮಕ್ಕಳಲ್ಲಿ ಖಿನ್ನತೆ ಇರುವುದರ ಒಂದು ಸಾಮಾನ್ಯ ಸೂಚನೆ ಎಂದರೆ ಅದು ಅವರು ಪ್ರತಿದಿನವೂ ಯಾವುದಾದರೂ ಒಂದು ತುಂಬಾನೇ ನೋವು ಉಂಟು ಮಾಡುತ್ತಿದೆ ಎಂದು ಗೋಳಿಡುವುದು. ಪ್ರತಿದಿನ ಯಾವುದೇ ತಾರ್ಕಿಕ ವಿವರಣೆ ಇಲ್ಲದೆ ತಲೆನೋವು, ಹೊಟ್ಟೆನೋವು, ಅಥವಾ ಜೀರ್ಣಿಸಿಕೊಳ್ಳುವುದರಲ್ಲಿ ಕಷ್ಟ ಪಡುತ್ತಿದ್ದರೆ, ಅದು ಅವರಲ್ಲಿ ಖಿನ್ನತೆ ಮತ್ತು ಆತಂಕ ಭುಗಿಲೇಳುತ್ತಿರುವ ಸೂಚನೆ.

Comments are closed.