ಕರಾವಳಿ

ಕುಂದಾಪುರದ ಗಂಗೊಳ್ಳಿಯಲ್ಲಿ ಗೋ ಕಳ್ಳರ ಅಟ್ಟಹಾಸ ಸಿಸಿ ಟಿವಿಯಲ್ಲಿ ಸೆರೆ (Video)

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ಮಂಗಳವಾರ ರಾತ್ರಿಯ ವೇಳೆ ದನವೊಂದನ್ನು ಕಳವುಗೈಯುತ್ತಿರುವ ಮತ್ತೊಂದೆಡೆ ಜಾನುವಾರುಗಳ ಕಳವಿಗೆ ಯತ್ನಿಸಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಜೂ.10 ಬುಧವಾರದಂದು ರಾತ್ರಿ ಸುಮಾರು 12.30 ಗಂಟೆಗೆ ಗಂಗೊಳ್ಳಿ ಮುಖ್ಯ ರಸ್ತೆಯ ಪೆರಾಜೆ ಬಾರ್ ಎದುರು ಇಬ್ಬರು ಗೋ ಕಳ್ಳರು ಕಾರಿನಲ್ಲಿ ಬಂದು ರಸ್ತೆ ಬದಿಯಲ್ಲಿರುವ ಬಿಡಾಡಿ ದನಗಳ ಗುಂಪಿನಿಂದ ಒಂದು ದನವನ್ನು ಎಳೆದು ವಾಹನದಲ್ಲಿ ತುಂಬಿಸಿಕೊಂಡು ಹೋಗಿರುವುದು ಪೇರಾಜೆ ಬಾರ್ ಸಿಸಿ ಕ್ಯಾಮರದಲ್ಲಿ ದಾಖಲಾಗಿರುತ್ತದೆ. ಅಲ್ಲದೇ ಮತ್ತೊಂದು ಗಂಟೆ ಅಂತರದಲ್ಲಿ ಅದೇ ಭಾಗದಲ್ಲಿ ಇನ್ನೊಂದೆಡೆ ಜಾನುವಾರು ಕದಿಯಲು ಆಗಂತುಕರು ವಿಫಲ ಯತ್ನ ನಡೆದಿಸಿದ್ದಾರೆ.

ಸದ್ಯ ಸಿಸಿ ಟಿವಿ ಫೂಟೇಜ್ ಪರಿಶೀಲನೆ ನಡೆಸಿರುವ ಗಂಗೊಳ್ಳಿ ಪಿಎಸ್ಐ ಭೀಮಾಶಂಕರ್ ಹಾಗೂ ಸಿಬ್ಬಂದಿಗಳ ತಂಡ ತನಿಖೆ ನಡೆಸುತ್ತಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.