ಆರೋಗ್ಯ

ದ.ಕ.ಜಿಲ್ಲೆಯಲ್ಲಿ 24 ಮಂದಿಯಲ್ಲಿ ಸೋಂಕು ಪತ್ತೆ : ರಾಜ್ಯದಲ್ಲಿ ಬರೋಬ್ಬರಿ 378 ಮಂದಿಗೆ ಪಾಸಿಟಿವ್

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು, ಜೂನ್. 06 : ರಾಜ್ಯದಲ್ಲಿ ಇಂದು ಮತ್ತೊಮ್ಮೆ ಕೊರೊನಾ ಮಹಾಸ್ಪೋಟ ಸಂಭವಿಸಿದ್ದು, ದ.ಕ.ಜಿಲ್ಲೆಯಲ್ಲಿ 24 ಮಂದಿ ಸೇರಿದಂತೆ ಕರ್ನಾಟಕದಲ್ಲಿ ಇಂದು ಒಂದೇ ದಿನ ಬರೋಬ್ಬರಿ 378 ಮಂದಿಯಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ರಾಜ್ಯದಲ್ಲಿ 378 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಿದೆ. ಇದರಲ್ಲಿ ದ.ಕ. ಜಿಲ್ಲೆಯಲ್ಲಿ 24 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದಾಗಿ ವರದಿಯಾಗಿದೆ.

ದ.ಕ. ಜಿಲ್ಲೆಯಲ್ಲಿ ಇಂದು 24 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಈ ನಡುವೆ ಜಿಲ್ಲೆಯಲ್ಲಿ 15 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ಜಿಲ್ಲೆಯಲ್ಲಿ 88 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಬರೋಬ್ಬರಿ 378 ಮಂದಿಗೆ ಪಾಸಿಟಿವ್ :

ಇನ್ನು ರಾಜ್ಯದಲ್ಲಿ ಶನಿವಾರ ಒಂದೇ ದಿನ 378 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 5213ಕ್ಕೆ ಏರಿದೆ.

ಉಡುಪಿ 121, ಕಲಬುರ್ಗಿ 69, ಯಾದಗಿರಿ 103, ದ.ಕ. ಜಿಲ್ಲೆ 24, ಬೆಂಗಳೂರು ನಗರ 18, ರಾಯಚೂರು 2, ಮಂಡ್ಯ 3, ಬೆಳಗಾವಿ 5, ಬೀದರ್‌ 1‌, ಹಾಸನ 3, ವಿಜಯಪುರ 6, ದಾವಣಗೆರೆ 6, ದ.ಕ 24, ಚಿಕ್ಕಬಳ್ಳಾಪುರ 2, ಉ.ಕ 2, ಧಾರವಾಡ 3, ಗದಗ 4, ತುಮಕೂರು 1, ಕೋಲಾರ 1, ಹಾವೇರಿ 3, ಕೊಪ್ಪಳ 1 ಪ್ರಕರಣ ದೃಢವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ – ಪ್ರಮುಖ ಅಂಶಗಳು :

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಟ್ಟು 24 ಕೊರೋನಾ ಪಾಸಿಟಿವ್

5 ಕೇಸ್ ಗೆ ಪತ್ತೆಯಾಗದ ಸೋಂಕಿನ‌ ಮೂಲ

ಮಹಾರಾಷ್ಟ್ರದಿಂದ ಬಂದ 11 ಜನರಿಗೆ ಸೋಂಕು

ದುಬೈನಿಂದ ಬಂದ 6 ಜನರಿಗೆ ಸೋಂಕು

ಟರ್ಕಿಯಿಂದ ಬಂದ ಒಬ್ಬರಿಗೆ, ಸೌದಿ ಅರೇಬಿಯಾದಿಂದ ಬಂದ ಒಬ್ಬರಿಗೆ ಸೋಂಕು

17 ಪುರುಷರು,6 ಮಹಿಳೆಯರಿಗೆ ಮತ್ತು ಓರ್ವ ಬಾಲಕಿಗೆ ಸೋಂಕು

Comments are closed.