ಆರೋಗ್ಯ

ಸಾಕುಪ್ರಾಣಿ ಮನೆಯಲ್ಲಿದ್ದರೆ ಅವುಗಳಿಂದ ಮನೆಯವರಿಗೆ ಏನು ಲಾಭ

Pinterest LinkedIn Tumblr

ಮನುಷ್ಯ ಸ್ನೇಹಜೀವಿ, ಅವನು ಅನಾದಿಕಾಲದಿಂದಲೂ ಅನ್ವೇಷಣೆಗಳಲ್ಲಿ ತೊಡಗಿದ್ದಾನೆ, ಇತರ ಜೀವಿಗಳ ಜೊತೆ ಬೆರೆತಿದ್ದಾನೆ, ಪ್ರಾಣಿ ಗಳನ್ನು ಮನೆಯಲ್ಲಿ ಸಾಕುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾನೆ ಅದರಲ್ಲೂ ನಾಯಿ ಮತ್ತು ಬೆಕ್ಕನ್ನು ಸಾಕುವುದು ಕೆಲವರಿಗೆ ಇಷ್ಟ, ಇನ್ನು ಕೆಲವರಿಗೆ ಇಷ್ಟವಾಗುವುದಿಲ್ಲ. ನಾಯಿ ಮತ್ತು ಬೆಕ್ಕುಗಳು ಮನೆಯಲ್ಲಿದ್ದರೆ ಅವುಗಳಿಂದ ಮನೆಯವರಿಗೆ ಏನು ಲಾಭ ಎಂದು ತಿಳಿಯಿರಿ.

ಮಕ್ಕಳು ಆರೋಗ್ಯವಾಗಿರುತ್ತಾರೆ.
ನಿಮಗೆ ಆಶ್ಚರ್ಯವಾಗಬಹುದು, ಮನೆಯಲ್ಲಿಸಾಕು ಪ್ರಾಣಿಗಳಿಂದ ಹೇಗೆ ಮಕ್ಕಳು ಆರೋಗ್ಯವಾಗಿರುತ್ತಾರೆಂದು.ಮಕ್ಕಳು ಸಾಕುಪ್ರಾಣಿಗಳೊಂದಿಗೆ ಬೆರೆತರೆ ಅವರಲ್ಲಿ ಸ್ವಾಭಾವಿಕವಾಗಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆಂದು ಸಂಶೋಧನೆ ಇಂದ ತಿಳಿದು ಬಂದಿದೆ. ಅಸ್ತಮಾದಂತಹ ಕಾಯಿಲೆ ಬರುವುದೇ ಇಲ್ಲ.

ನಿಮ್ಮ ಮಾನಸಿಕ ಖಿನ್ನತೆಯನ್ನು ದೂರಮಾಡುತ್ತದೆ .
ಮನೆಯಲ್ಲಿ ಸಾಕುಪ್ರಾಣಿ ಇದ್ದರೆ, ಉದಾಹರಣೆಗೆ ನಾಯಿ ಇದ್ದರೆ ನೀವು ಅದರ ಪೋಷಣೆಯಲ್ಲಿ ತೊಡಗುತ್ತೀರಿ, ಬೆಳಿಗ್ಗೆ ವಾಕಿಂಗ್ ಗೆ ಅದರ ಜೊತೆಯಲ್ಲಿ ಹೋಗುತ್ತೀರಿ, ಮನೆಯಲ್ಲಿ ಸುಮ್ಮನೆ ನೀವು ಕೂರುವುದಿಲ್ಲ, ಮನೆಯಲ್ಲಿ ಒಬ್ಬರೇ ಇದ್ದರೂ ಧೈರ್ಯವಾಗಿರುವಿರಿ. ನಿಮ್ಮನ್ನು ಏಕಾಂಗಿಯಾಗಿರಲು ಬಿಡುವುದಿಲ್ಲ.

ಹೃದಯ ಸಂಬಂದಿ ಕಾಯಿಲೆಗಳು ಕಡಿಮೆಯಾಗುವುದು.
ಮನೆಯಲ್ಲಿ ಬೆಕ್ಕು ಇದ್ದರೆ ಸ್ಟ್ರೋಕ್ ಮತ್ತು ಹೃದಯ ಕಾಯಿಲೆಗಳು ದೂರವಾಗುವುದು ಎಂದು ಸಂಶೋದನೆಇಂದ ತಿಳಿದು ಬಂದಿದೆ. ಮಾನಸಿಕವಾಗಿ ಲವಲವಿಕೆ ಇಂದಿರುವಿರಿ. ಮತ್ತು ಮನೆಯಲ್ಲಿ ಸಾಕುಪ್ರಾಣಿಯಿದ್ದರೆ ಅವರು ಬೇಗ ಕಾಯಿಲೆಯಿಂದ ಗುಣಮುಖರಾಗುವರೆಂದು ನಂಬಲಾಗುತ್ತದೆ.

ಮಕ್ಕಳಲ್ಲಿನ ನ್ಯೂನ್ಯತೆಗಳನ್ನು ಹೋಗಲಾಡಿಸುತ್ತದೆ.
ಮನೆಯಲ್ಲಿ ಸಾಕುಪ್ರಾಣಿಯಿದ್ದರೆ ನಿಮ್ಮ ಮಕ್ಕಳು ಅದರ ಜೊತೆ ಅಡಿ ಬೆಳೆಯುತ್ತಾರೆ, ಇದರಿಂದ ಮಕ್ಕಳಿಗೆ ಒಂಟಿತನ ಕಾಡುವುದಿಲ್ಲ ಮತ್ತು ಮಕ್ಕಳಲ್ಲಿ ಧೈರ್ಯ ಹೆಚ್ಚಾಗುತ್ತದೆ

Comments are closed.