ಕರ್ನಾಟಕ

ಕೆಲಸದಲ್ಲೇ ನಿರತನಾಗಿದ್ದ ಪತಿಯ ಲ್ಯಾಪ್ ಟಾಪ್ ಚಿಂದಿ ಮಾಡಿದ ಮಡದಿ!

Pinterest LinkedIn Tumblr


ಬೆಂಗಳೂರು(ಜೂ.02): ಲಾಕ್ ಡೌನ್‌ ಸಡಿಲಿಕೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಕೌಟುಂಬಿಕ ಕಲಹ ಪ್ರಕರಣಗಳು ಹೆಚ್ಚಾಗಿದೆ. ಸಾರಾಯಿ ಸಿಗದೆ ಸೈಲೆಂಟಾಗಿದ್ದ ಗಂಡಂದಿರು ಈಗ ಬಾರ್ ಓಪನ್ ಆಗ್ತಿದ್ದಂತೆ ಹೆಂಡತಿಯರ ಮೇಲೆ ಹಲ್ಲೆ ಮಾಡಲು ಶುರುಮಾಡಿದ್ದಾರೆ.

ಏಪ್ರಿಲ್ ತಿಂಗಳಿಗಿಂತ ಮೇ ಒಂದೇ ತಿಂಗಳಲ್ಲಿ ಎರಡು ಪಟ್ಟು ಕೇಸ್ ಗಳು ಹೆಚ್ಚಾಗಿವೆ. ಈ ನಡುವೆ ವನಿತಾ ಸಹಾಯವಾಣಿಗೆ ವಿಚಿತ್ರ ಪ್ರಕರಣದ ಕರೆಗಳು ಬರುತ್ತಿದ್ದು, ಕೌನ್ಸಲರ್ಸ್​​ಗೆ ತಲೆನೋವಾಗಿದೆ‌. ಹೀಗೆ ಪ್ರತಿ ನಿತ್ಯ ಸಹಾಯವಾಣಿಗೆ ಇಪ್ಪತ್ತಕ್ಕೂ ಹೆಚ್ಚು ಕರೆಗಳು ಬರುತ್ತಿದ್ದು, ಪೋನ್ ಮೂಲಕವೇ ವನಿತಾ ಸಹಾಯವಾಣಿ ಮುಖ್ಯಸ್ಥರು ಕೌನ್ಸಲಿಂಗ್ ಮಾಡುತ್ತಿದ್ದಾರೆ.

ಕೆಲಸದ ಒತ್ತಡ ಹೆಚ್ಚಾದ ಹಿನ್ನೆಲೆ ಕೌಟುಂಬಿಕ ಕಲಹಗಳು ಸಹ ಹೆಚ್ಚಾಗುತ್ತಿವೆ. ಮತ್ತೊಂದು ಕಡೆ ಕೆಲಸದಲ್ಲೇ ತಲ್ಲೀನರಾದ ಗಂಡಂದಿರಿಂದ ಹೆಂಡತಿಯರು ಬೇಸತ್ತು, ಸಹಾಯವಾಣಿ ಮೆಟ್ಟಿಲು ಹತ್ತುತ್ತಿದ್ದಾರೆ. ಮಾನಸಿಕ ಹಿಂಸೆ ಮತ್ತು ದೈಹಿಕ ಹಲ್ಲೆ ಪ್ರಕರಣಗಳು ಹೆಚ್ಚಾಗಿದ್ದು, ರಜೆ ದಿನದಲ್ಲೂ ಕೌನ್ಸರಲ್ಸ್ ಕೆಲಸ ಮಾಡುತ್ತಿದ್ದಾರೆ. ವನಿತಾ ಸಹಾಯವಾಣಿಯಲ್ಲಿ ಬಿಡುವಿಲ್ಲದೇ ಕೌನ್ಸಲರ್ಸ್ ಕೆಲಸ ಮಾಡುತ್ತಿದ್ದಾರೆ.

ಹೀಗೆ ಮೇ ತಿಂಗಳಲ್ಲಿ ಬರೋಬ್ಬರಿ 800 ಕ್ಕೂ ಹೆಚ್ಚು ಕೇಸ್​ಗಳು ದಾಖಲಾಗಿವೆ. ವಿಚಿತ್ರ ಎಂದರೆ ಹಗಲು-ರಾತ್ರಿ ಲ್ಯಾಪ್ ಟಾಪ್ ಮುಂದೆ ಕುಳಿತು ಕುಟುಂಬವನ್ನೇ ಮರೆತಿದ್ದ ಗಂಡ ನಿಂದ ಬೇಸತ್ತ ಹೆಂಡತಿ, ಲ್ಯಾಪ್​​ಟಾಪ್​​ನನ್ನೇ ಹೊಡೆದು ಹಾಕಿದ್ದಾಳೆ. ಈ ಕ್ಷುಲ್ಲಕ ಜಗಳ ಈಗ ವನಿತಾ ಸಹಾವಾಣಿಯವರೆಗೂ ತಲುಪಿದೆ.

ಮತ್ತೊಂದು ಕಡೆ ಕೆಲಸದಲ್ಲೇ ತಲ್ಲೀನನಾಗಿದ್ದ ಗಂಡ‌ನೊಬ್ಬ ಹೆಂಡತಿ ಊಟಕ್ಕೆ ಕರೆದರೂ ಹಲ್ಲೆ ಮಾಡುತ್ತಿದ್ದ. ಇದರಿಂದ ಬೇಸತ್ತು ಗಂಡನಿಂದ ಬಿಡುಗಡೆ ಬೇಕೆಂದು ಮಹಿಳೆ ದೂರು ನೀಡಿದ್ದಾಳೆ.

ಇನ್ನು ದಿನೇ ದಿನೇ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಯುವತಿ ಮತ್ತು ಮಹಿಳೆಯರ ಜೊತೆ ಅಸಭ್ಯ ವರ್ತನೆ ಮಾಡುತ್ತಿರುವ ಅಪರಿಚಿತರ ವಿರುದ್ದ ದೂರು ದಾಖಲಾಗಿದೆ.

Comments are closed.