ಕರ್ನಾಟಕ

ಜಿಲ್ಲಾ, ಕೌಟುಂಬಿಕ, ಕಾರ್ಮಿಕ ಕೋರ್ಟ್‌ಗಳಿಗೆ ಮತ್ತೊಂದು ತಿಂಗಳು ರಜೆ ವಿಸ್ತರಿಸಿದ ಹೈಕೋರ್ಟ್‌

Pinterest LinkedIn Tumblr


ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆ ರಾಜ್ಯದ ಎಲ್ಲ ಜಿಲ್ಲಾ ನ್ಯಾಯಾಲಗಳು, ಕೌಟುಂಬಿಕ ನ್ಯಾಯಾಲಯ, ಕಾರ್ಮಿಕ ನ್ಯಾಯಾಲಯ ಹಾಗೂ ಕೈಗಾರಿಕಾ ಪೀಠಗಳಿಗೆ ಮತ್ತೊಂದು ತಿಂಗಳು ರಜೆ ವಿಸ್ತರಿಸಿ ಹೈಕೋರ್ಟ್‌ ಆದೇಶ ಹೊರಡಿಸಿದೆ. ಜುಲೈ 6ರವರೆಗೂ ನ್ಯಾಯಾಲಯಗಳಿಗೆ ರಜೆ ಇರಲಿದೆ.

ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರ ಸೂಚನೆಯಂತೆ ರಿಜಿಸ್ಟ್ರಾರ್‌ ಜನರಲ್‌ ರಾಜೆಂದ್ರ ಬಾದಾಮಿಕರ್ ಆದೇಶ ಹೊರಡಿಸಿದೆ. ಈ ಮೊದಲು ನ್ಯಾಯಾಲಯಗಳಿಗೆ ಜೂನ್‌ 6ರವರೆಗೆ ರಜೆ ಘೋಷಿಸಲಾಗಿತ್ತು. ಆದರೆ, ಲಾಕ್‌ಡೌನ್‌ನ್ನು ಜೂನ್‌ 30ರವರೆಗೂ ಮುಂದುವರೆಸಿರುವುದರಿಂದ ಹೈಕೋರ್ಟ್‌ ಈ ನಿರ್ಧಾರಕ್ಕೆ ಬಂದಿದೆ.

ಆದರೆ, ಲಾಕ್‌ಡೌನ್‌ನಿಂದ ಕಳೆದ ಎರಡು ತಿಂಗಳಿನಿಂದ ಸ್ಥಗಿತವಾಗಿದ್ದ ಹೈಕೋರ್ಟ್‌ ಕಲಾಪಗಳು ಸೋಮವಾರದಿಂದ ಪುನರಾರಂಭವಾಗಿವೆ. ಸೋಮವಾರ ಹೆಚ್ಚಿನ ಸಂಖ್ಯೆಯ ವಕೀಲರು ಕೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದರಿಂದ ಕಲಾಪ ಸ್ಥಗಿತದ ಎಚ್ಚರಿಕೆಯನ್ನು ಹೈಕೋರ್ಟ್‌ ನೀಡಿತ್ತು. ಈಗ ಇತರ ನ್ಯಾಯಾಲಯಗಳಿಗೆ ರಜೆ ವಿಸ್ತರಿಸಲಾಗಿದೆ.

Comments are closed.