ಕುಂದಾಪುರ: ಕೊರೊನಾ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕೆಲವೊಂದು ಠಾಣೆಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಲ ಠಾಣೆಗಳ ಎದುರು ಪೆಂಡಾಲ್ ಹಾಕಿ ಅಲ್ಲಿಯೇ ದೂರು ಸ್ವೀಕರಿಸಿದರೆ,ಕೆಲವೊಂದು ಮರದಡಿಯೇ ಠಾಣೆಗಳಾಗಿ ಮಾರ್ಪಟ್ಟಿದೆ.
ಗಂಗೊಳ್ಳಿಯಲ್ಲಿ ಈಗ ಮರದಡಿಯೇ ಠಾಣೆಯಾಗಿ ಮಾರ್ಪಟ್ಟಿದೆ. ಇಲ್ಲಿ ಎಪ್ರಿಲ್‌ನಲ್ಲಿ ಪೆಂಡಾಲ್ ಹಾಕಿ ಸಾರ್ವಜನಿಕರು ದೂರು ನೀಡಲು ಬಂದರೆ ಅಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಅದು ಗಾಳಿಗೆ ಹೋಗಿದ್ದರಿಂದ ಈಗ ಠಾಣೆ ಪಕ್ಕದಲ್ಲಿರುವ ಮರದಡಿ ಕುರ್ಚಿಗಳನ್ನು ಹಾಕಲಾಗಿದ್ದು ಅಲ್ಲಿಯೇ ವಿಚಾರಣೆ, ದೂರುನೀಡುವ ಪ್ರಕ್ರಿಯೆ ನಡೆಯುತ್ತಿದೆ. ಶಂಕರನಾರಾಯಣ, ಕಂಡ್ಲೂರು, ಅಮಾಸೆಬೈಲು,ಕೊಲ್ಲೂರು, ಬೈಂದೂರು, ಕುಂದಾಪುರದ ಠಾಣೆಗಳಲ್ಲಿ ಕಚೇರಿಯ ಹೊರಗಡೆ ಪೆಂಡಾಲ್‌ಹಾಕಿ ಅಲ್ಲಿಂದಲೇ ದೂರುಗಳನ್ನು ಸ್ವೀಕರಿಸಲಾಗುತ್ತಿದೆ.
ಕುಂದಾಪುರದ ಎಲ್ಲ ಠಾಣೆಗಳಲ್ಲಿ ಕೈ ತೊಳೆದು ಒಳಗೆ ಬರುವಂತೆಠಾಣೆಗಳ ಹೊರಗಡೆ ಬಕೆಟ್‌ಗಳಲ್ಲಿ ನೀರನ್ನು ಇಡಲಾಗಿದೆ. ಕುಂದಾಪುರ ನಗರ ಠಾಣೆಯಲ್ಲಿಇದಕ್ಕಾಗಿಯೇ ಪ್ರತ್ಯೇಕ ವಾಶ್ ಬೆಸಿನ್ ವ್ಯವಸ್ಥೆ ಮಾಡಲಾಗಿದೆ.
ಪ್ರವೇಶ ದ್ವಾರದಲ್ಲಿಸ್ಯಾನಿಟೈಸರ್‍ಸ್ ಇಡಲಾಗಿದೆ. ಅಮಾಸೆಬೈಲು ಠಾಣೆಯನ್ನು ಎರಡು ದಿನದ ಹಿಂದೆಯೇ ಸ್ಯಾನಿಟೈಸ್ ಮಾಡಲಾಗಿದ್ದರೆ, ಗಂಗೊಳ್ಳಿ ಠಾಣೆಯನ್ನು ರವಿವಾರ ಸ್ಯಾನಿಟೈಸ್ ಮಾಡಲಾಗಿದೆ.ಉಳಿದಂತೆ ಆಯಾಯ ಠಾಣೆಗಳನ್ನು ಸ್ಯಾನಿಟೈಸ್ ಮಾಡುವ ಜವಾಬ್ದಾರಿಯನ್ನು ಅಲ್ಲಿನ ಎಸ್‌ಐಗಳಿಗೆ ನೀಡಲಾಗಿದೆ.
Comments are closed.