ಕರಾವಳಿ

ಮೋದಿ ಪ್ರಧಾನಿಯಾಗಿ 7ನೇ ವರ್ಷ: ಕುಂದಾಪುರದಲ್ಲಿ ನಮೋ ಅಭಿಮಾನಿಯಿಂದ ‘ಆಟೋ ರಿಕ್ಷಾ ಸೇವೆ’! (Video)

Pinterest LinkedIn Tumblr

ಕುಂದಾಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರ ಯಶಸ್ವಿಯಾಗಿ 7ನೇ ವರ್ಷ ಪೂರೈಸಿದ ಅಂಗವಾಗಿ ಮೋದಿಯವರ ಅಭಿಮಾನಿ ಕೋಟೇಶ್ವರ ಗ್ರಾಮದ ಅಂಕದಕಟ್ಟೆ ನಿವಾಸಿ ಸತೀಶ್‌ ಪ್ರಭು ಅವರು ತಮ್ಮ ಆಟೋರಿಕ್ಷಾದಲ್ಲಿ 1 ರೂ. ಬಾಡಿಗೆ ಮಾತ್ರ ಪಡೆದು ಪ್ರಯಾಣಿಕರನ್ನು ತಮ್ಮ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

 

ಮೇ 26 ರಿಂದ ಜೂನ್‌ 1ರ ತನಕ ಸತತ 7 ದಿನಗಳವರೆಗೆ ವಿನಾಯಕ ಕೋಡಿ ಆಟೋ ನಿಲ್ದಾಣದಿಂದ 5 ಕಿ.ಮೀ. ದೂರದ ತನಕ ಕೇವಲ 1 ರೂ. ಬಾಡಿಗೆ ಪಡೆದು ಕೇಂದ್ರ ಸರಕಾರಕ್ಕೆ ಶುಭ ಹಾರೈಸುತ್ತ ಸಾರ್ವಜನಿಕರಿಗೆ ತಮ್ಮ ಸೇವೆಯನ್ನು ಪ್ರಭು ನೀಡುತ್ತಿದ್ದಾರೆ.
ಮೋದಿ ನೇತೃತ್ವದ ಸರಕಾರ ವರ್ಷ ಕಳೆದಂತೆ 3ನೇ ವರ್ಷಕ್ಕೆ 3 ದಿನ, 5ನೇ ವರ್ಷಕ್ಕೆ 5 ದಿನ ಹಾಗೇ ಈ ಬಾರಿ 7ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂಭ್ರಮಕ್ಕೆ 7 ದಿನಗಳವರೆಗೆ 1 ರೂ.ಗೆ ಆಟೋ ಸೇವಾ ಕೈಂಕರ್ಯದಲ್ಲಿ ನಿರತರಾಗಿದ್ದಾರೆ ಸತೀಶ್‌ ಪ್ರಭು.

ಇವರು ಮೋದಿಯವರು ಪ್ರಧಾನಿಯಾದ ಮೊದಲ ವರ್ಷದಿಂದ ಈವರೆಗೆ ಪ್ರತಿ ವರ್ಷವೂ ಕೂಡ ಈ ರೀತಿಯಾದ 1 ರೂ. ದರದ ಬಾಡಿಗೆ ಸೇವೆಯನ್ನು ನೀಡುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.