ಆರೋಗ್ಯ

ಸಬ್ಜಾ ಸೇವನೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ

Pinterest LinkedIn Tumblr

ತಿಂದ ಅನ್ನ ಮೈಗೆ ಹತ್ತ ಬೇಕಿದ್ರೆ ಖುಷಿಯಿಂದ ಇಷ್ಟಪಟ್ಟು ತಿನ್ನಬೇಕಂತೆ.ಆದ್ರೆ ಇತ್ತೀಚಿನ ದಿನಗಳಲ್ಲಿ ಜನರಿಗೆ ಆರೋಗ್ಯ ಏನೋ ಬೇಕು. ಆದ್ರೆ ಹಸಿ ತರಕಾರಿ, ಸೊಪ್ಪುಗಳನ್ನು ತಿನ್ನೋಕೆ ಮಾತ್ರ ರೆಡಿಯಿಲ್ಲ. ಹಾಗಂತ ನೀವು ತರಕಾರಿ, ಕಾಳುಗಳ ಪೌಷ್ಠಿಕಾಂಶದಿಂದ ದೂರ ವಿರುವ ಅಗತ್ಯವಿಲ್ಲ.

ನಾಲಿಗೆಗೆ ರುಚಿ ಕೊಡುವ ಹಾಗೇನೇ ಆರೋಗ್ಯಕ್ಕೆ ತುಂಬಾನೇ ಹಿತ ನೀಡುವ ಬೀಜದ ಬಗ್ಗೆ ಮಾಹಿತಿ ಇಲ್ಲಿದೆ. ಹೌದು, ಕಾಮ ಕಸ್ತೂರಿ ಅಂದ್ರೆ ಮಕ್ಕಳಿಂದ ಹಿಡಿದು ಹಿರಿಯರಿಗೂ ಪ್ರಿಯ. ಆದ್ರೆ ಈಗೀನ ಫಾಸ್ಟ್​ ಫುಡ್​ ಜಮಾನದಲ್ಲಿ ಕಾಮ ಕಸ್ತೂರಿ ಅನ್ನೋ ಕಾಳುಗಳಿವೆ ಅನ್ನೋದೆ ಹಲವರಿಗೆ ತಿಳಿದಿಲ್ಲ. ಕಾಮ ಕಸ್ತೂರಿ ಅಥವಾ ಸಬ್ಜಾವನ್ನು ನೀರಿನಲ್ಲಿ ನೆನಸಿ ಖಾಲಿ ಹೊಟ್ಟೆಯಲ್ಲಿ ಸೇವನೆಯಿಂದ ಆರೋಗ್ಯ ಬಹಳ ಪ್ರಯೋಜನಕಾರಿಯಾಗಿದೆ.

ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು ಅನ್ನೋ ಹಾಗೇ ನೋಡೋದಕ್ಕೆ ಸಣ್ಣದಾಗಿದ್ರೂ ಇದ್ರರಲ್ಲಿರೋ ಪೌಷ್ಠಿಕಾಂಶಗಳು ಎಲ್ಲಾ ತರಕಾರಿಗಳನ್ನು ಮೀರಿಸುವಂತಿದೆ. ತಂಪಿನ ಕಾಳು ಎಂದೇ ಹೆಸರು ವಾಸಿಯಾಗಿರೋ ಕಾಮ ಕಸ್ತೂರಿ ದೇಹದ ಉಷ್ಣತೆಯನ್ನು ಕಡಿಮೆಗೊಳಿಸುವಲ್ಲಿ ಸಹಕರಿಸುತ್ತದೆ. ಕಾಮ ಕಸ್ತೂರಿಯನ್ನು ನೀರಿನಲ್ಲಿ ನೆನಸಿ, ಅದಕ್ಕೆ ಸ್ವಲ್ಪ ಸಕ್ಕರೆ ಬೇರಿಸಿ ಸೇವಿಸುವ ಮೂಲಕ ದೇಹದ ಉಷ್ಣತೆಯನ್ನು ನಿಯಂತ್ರಿಸಬಹುದು.

ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ ಅನ್ನೋ ಗಾದೆ ಮಾತು ಕೇಳಿರುತ್ತೇವೆ. ಅಂತಹ ಸಿಹಿ ನಿದ್ದೆ ಬೇಕಿದ್ರೆ ಕಾಮ ಕಸ್ತೂರಿ ಜ್ಯೂಸ್​ನ್ನು ಕುಡಿಯಲೇ ಬೇಕು. ಕಾಮ ಕಸ್ತೂರಿಯಲ್ಲಿರುವ ಪೌಷ್ಠಿಕಾಂಶಗಳಿಗೆ ಒತ್ತಡವನ್ನು ನಿಯಂತ್ರಿಸುವ ಶಕ್ತಿಯಿದೆ. ಈ ತಂಪು ಕಾಯಿ ಮೆದುಳಿನ ಒತ್ತಡವನ್ನು ತಣ್ಣಗಾಗಿಸುತ್ತೆ. ಅದಲ್ಲದೆ ಕಾಮ ಕಸ್ತೂರಿಯಲ್ಲಿರುವ ಪ್ಲೇವಾನಾಯಿಡ್​ ಅಂಶ ರೋಗ ನಿರೋಧಕ ಕಣಗಳನ್ನು ಹೆಚ್ಚಿಸುತ್ತದೆ.

ಕೇವಲ ಸಬ್ಜಾ ಕಾಳುಗಳು ಮಾತ್ರವಲ್ಲದೆ, ಅದರ ಎಳೆಗಳಲ್ಲಿಯೂ ವಿಶಿಷ್ಟ ಗುಣಗಳಿವೆ. ಎಳೆಗಳನ್ನು ಚೆನ್ನಾಗಿ ರುಬ್ಬಿ ಶರೀರಕ್ಕೆ ಹಚ್ಚು ವುದರಿಂದ ದೇಹದ ರ್ದುವಾಸನೆ ನಿವಾರಣೆಯಾಗುತ್ತೆ. ಅಷ್ಟೇ ಅಲ್ಲದೆ ಕಾಮ ಕಸ್ತೂರಿಯ ಕಷಾಯಕ್ಕೆ ಸ್ವಲ್ಪ ಜೇನು ತುಪ್ಪ ಸೇವಿಸಿ ಕುಡಿದ್ರೆ ಎಂಥಹ ಜ್ವರ, ಶೀತವೂ ನಿಮ್ಮನ್ನ ಬಿಟ್ಟು ಓಡಿ ಹೋಗುತ್ತೆ. ಕಾಮ ಕಸ್ತೂರಿಯ ಹೂವು ಸೇವಿಸುವುದ್ರಿಂದ ಅಜೀರ್ಣ ಮತ್ತು ಹೊಟ್ಟೆ ಭಾದೆಯಂತಹ ತೊಂದರೆಗಳು ನಿವಾರಣೆಯಾಗುತ್ತೆ.

Comments are closed.