ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸೋಮವಾರ ಮತ್ತೊಂದು ಕೊರೊನಾ ಪಾಸಿಟಿವ್ ಕೇಸ್ ದೃಢಪಟ್ಟಿದೆ.

ಮಹರಾಷ್ಟ್ರದಿಂದ ಉಡುಪಿಗೆ ಬಂದ 27 ವರ್ಷ ಪ್ರಾಯದ 7 ತಿಂಗಳ ಗರ್ಭಿಣಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಮುಂಬೈನಿಂದ ಬಂದು ಸರಕಾರಿ ಕ್ವಾರೆಂಟೈನ್’ನಲ್ಲಿದ್ದ ಗರ್ಭಿಣಿಯ ಕೋವಿಡ್ ಪರೀಕ್ಷೆ ವರದಿಯಲ್ಲಿ ಸೋಂಕು ದೃಢಪಟ್ಡಿದ್ದು ಸದ್ಯ ಅವರನ್ನು ಚಿಕಿತ್ಸಗೆ ಉಡುಪಿಯ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೇ.12. ರಂದು ಬಸ್ ಮೂಲಕವಾಗಿ ಉಡುಪಿಗೆ ಆಗಮಿಸಿದ್ದ ಅವರ ಜೊತೆಗೆ ಬಂದಿದ್ದ ಪತಿಯನ್ನು ಐಸೋಲೇಶನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲದೆ ಬಸ್ಸಿನಲ್ಲಿ ಬಂದ ಇತರ 25 ಮಂದಿಯನ್ನು ಗುರುತಿಸಿ ಅವರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು ಅದರ ವರದಿ ನಿರೀಕ್ಷಿಸಲಾಗುತ್ತಿದೆ ಎಂದು ಉಡುಪಿ ಡಿಸಿ ಜಿ. ಜಗದೀಶ್ ತಿಳಿಸಿದ್ದಾರೆ.
Comments are closed.