ಆರೋಗ್ಯ

ಸಂಧಿವಾತ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಸೋಪ್ಪು ದಿವ್ಯೌಷಧ.

Pinterest LinkedIn Tumblr

ಸಾಕಷ್ಟು ಬಾರಿ ನಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುವುದೇ ಇಲ್ಲ. ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನಾವು ಜೀವನ ಸಾಗಿಸುತ್ತಿರುತ್ತೇನೆ. ಆದರೆ ಅತಿ ಸುಲಭವಾಗಿ ಸಿಗುವ ಹಾಗೂ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುವ ಗುಣಗಳನ್ನು ಹೊಂದಿರುವಪಾಲಕ್ ಸೊಪ್ಪಿನಲ್ಲಿ ಅಡಗಿರುವ ಆರೋಗ್ಯದ ರಹಸ್ಯ ಹಾಗೂ ಪಾಲಕ್ ಸೊಪ್ಪಿನ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ ನೋಡಿ.

ಇದು ಹಸಿರು ಎಲೆಯ ಸೊಪ್ಪು. ಈ ಎಲೆಯು ಅನೇಕ ಪೌಷ್ಟಿಕಾಂಶ ಮತ್ತು ಕ್ಯಾನ್ಸರ್ ನಿರೂಧಕ ಶಕ್ತಿ ಗುಣವುಳ್ಳದ್ದು. ಇದರ ವೈಜ್ಞಾನಿಕ ಹೆಸರು ‘ಸ್ಪಿನಶಿಯಾ ಒಲೇರಸಿಯ ಇದು ಒಂದು ಅಡಿ ಎತ್ತರಕ್ಕೆ ಬೆಳೆಯುವ ಗಿಡ. ವರ್ಷದ ಎಲ್ಲಾ ಋತುಗಳಲ್ಲಿ ಇದು ದೊರೆಯುತ್ತದೆ. ಆದರೂ ಮೇ ನಿಂದ- ನವೆಂಬರ್‍ವರೆಗೆ ಹೆಚ್ಚು ದೊರೆಯತ್ತದೆ.

ಪಾಲಕ್ ಸೊಪ್ಪಿನಲ್ಲಿರುವ ಪೋಷಕಾಂಶಗಳು.
ಕಾರ್ಬೋಹೈಡ್ರೇಟ್ .ಪ್ರೊಟೀನ್ಸ್. ಜೀವಸತ್ವ ಎ. ಜೀವಸತ್ವ ‘ಸಿ’ .
ಜೀವಸತ್ವ ‘ಇ’ ಜೀವಸತ್ವ ‘ಕೆ’ ಸೋಡಿಯಂ.ಪೊಟಾಷಿಯಂ. ಕ್ಯಾಲ್ಶಿಯಂ.ಮೆಗ್ನೀಷಿಯಂ.ಮ್ಯಾಂಗನೀಸ್. ಜಿಂಕ್. ರಿಬೋಪ್ಲೆವಿನ್. ಅಂಶಗಳನ್ನು ಒಳಗೊಂಡಿದೆ.ಹಾಗಾದರೇ
ಈ ಪಾಲಕ್ ಸೊಪ್ಪಿನ ಉಪಯೋಗಗಳನ್ನು ನೋಡೋಣ ಬನ್ನಿ…

ಕೇವಲ 100 ಗ್ರಾಂಗೆ 23 ಕ್ಯಾಲೊರಿಯನ್ನು ಹೊಂದಿದೆ. ನಾರಿನಾಂಶದಿಂದ ಕೂಡಿರುವುದರಿಂದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಿ, ದೇಹದ ತೂಕ ಕಡಿಮೆಮಾಡುತ್ತದೆ.

‘ಎ’ ಮತ್ತು ‘ಸಿ’ ಜೀವಸತ್ವಗಳು ಅಧಿಕವಾಗಿದ್ದು, ಇದರಲ್ಲಿನ ರಸಾಯನಿಕ ವಸ್ತು ಕಣ್ಣಿನ ರೆಟೆನಾವನ್ನು ಅಭಿವೃದ್ಧಿಗೊಳಿಸುತ್ತದೆ. ಚರ್ಮ ಮತ್ತು ಶ್ವಾಸಕೋಶವನ್ನು ಆರೋಗ್ಯಕರವಾಗಿಡುತ್ತದೆ

ಇದರಲ್ಲಿ ‘ಕೆ’ ಜೀವಸತ್ವವು ಅಧಿಕವಾಗಿರುವುದರಿಂದ, ಮೂಳೆಗಳು ಬಲಿಷ್ಟವಾಗುತ್ತವೆ.
ಅಧಿಕವಾಗಿ ಪೊಟ್ಯಾಶಿಯಂ, ಮ್ಯಾಗ್ನೀಷಿಯಂ, ಮ್ಯಾಂಗನೀಸ್, ತಾಮ್ರ ಮತ್ತು ಜಿಂಕ್ ಅಂಶಗಳು ಹೆಚ್ಚಾಗಿವೆ. ಈ ಪೊಟ್ಯಾಶಿಯಂ ದೇಹದಲ್ಲಿ ಜೀವಕೋಶ ಮತ್ತು ದೇಹ ದ್ರವ್ಯವನ್ನು ನಿಯಂತ್ರಿಸುತ್ತದೆ.

ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ನಿಯಂತ್ರಿಸುತ್ತದೆ. ಇದರಲ್ಲಿನ ತಾಮ್ರದ ಅಂಶವು ರಕ್ತದಲ್ಲಿ ಕೆಂಪು ರಕ್ತಕಣ ಹೆಚ್ಚಿಸಲು ಬೇಕಾಗುತ್ತದೆ. ಜಿಂಕ್ ಅಂಶವು ವಂಶವಾಹಿನಿಯನ್ನು ಅಭಿವೃದ್ಧಿಗೊಳಿಸುತ್ತದೆ.

ಸಂಧಿವಾತ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪಾಲಕ್ ದಿವ್ಯೌಷಧ.

ಪಾಲಕ್ ಸೇವನೆಯು ಮೊಡವೆಗಳನ್ನು ಹೋಗಲಾಡಿಸುತ್ತದೆ ಮತ್ತು ಮುಖದಲ್ಲಿ ಬೇಗನೆ ನೆರಿಗೆ ಮೂಡದಂತೆ ಕಾಪಾಡುತ್ತದೆ.

ಕೂದಲು ಉದುರುವ ಸಮಸ್ಯೆಯಿರುವವರು ಬೆಳಗ್ಗೆ ಎದ್ದೊಡನೆ ಒಂದು ಲೋಟ ಪಾಲಕ್ ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ಕೆಲ ದಿನಗಳಲ್ಲೇ ಪರಿಣಾಮ ಕಂಡುಬರುತ್ತದೆ.

ತ್ವಚೆಯ ತಳಭಾಗದಲ್ಲಿ ಸಂಗ್ರಹವಾಗಿ ಮೊಡವೆಗೆ ಕಾರಣವಾಗುವ ವಿಷಕಾರಿ ವಸ್ತುಗಳನ್ನು ರಕ್ತದಿಂದಲೇ ನಿವಾರಿಸಲು ಪಾಲಕ್ ಸಹಾಯಕವಾಗುತ್ತದೆ.

ಕ್ಯಾನ್ಸರ್ ಗೆ ಕಾರಣವಾಗಬಲ್ಲ ಕಣಗಳನ್ನು ನಾಶಮಾಡಬಲ್ಲ ಶಕ್ತಿ ಪಾಲಕ್ ನಲ್ಲಿದೆ.

ಬಿಸಿಲಿನ ತಾಪದಿಂದ ಮಂಕಾಗಿರುವ ಚರ್ಮಕ್ಕೆ ಸಹಜವರ್ಣ ನೀಡಲು ಪಾಲಕ್ ನೆರವಾಗುತ್ತದೆ.
ಸಾಮಾನ್ಯವಾಗಿ ಉಂಟಾಗಬಹುದಾದ ದೃಷ್ಟಿದೋಷವನ್ನು ತಡೆಗಟ್ಟುವಲ್ಲಿ ಪಾಲಕ್ ಸೊಪ್ಪು ನೆರವಾಗುತ್ತದೆ.

ಪಾಲಕ್‌ ರಸ ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಆಹಾರದಲ್ಲೂ ಪಾಲಕ್‌ ಹೆಚ್ಚಾಗಿ ಉಪಯೋಗ ಮಾಡುವುದು ಉತ್ತಮ.

ಪಾಲಕ್ ಸೊಪ್ಪು ನಿಮ್ಮ ಕರುಳುಗಳನ್ನು ಸ್ವಚ್ಛಗೊಳಿಸುತ್ತದೆ. ಪಾಲಕ್ ನಲ್ಲಿ ನಾರಿನ೦ಶವು ಅತ್ಯುನ್ನತವಾದ ಮಟ್ಟದಲ್ಲಿದೆ. ಪಾಲಕ್ ಸೊಪ್ಪನ್ನು ಹಾಗೆಯೇ ಹಸಿಯಾಗಿ ಸೇವಿಸಿದಾಗ, ನಿಮ್ಮ ಜೀರ್ಣಾ೦ಗವ್ಯೂಹವು ಶುದ್ಧೀಕರಿಸಲ್ಪಡುತ್ತದೆ. ಒ೦ದು ವೇಳೆ ನೀವೇನಾದರೂ ಮಲಬದ್ದತೆಯಿ೦ದ ಬಳಲುತ್ತಿದ್ದಲ್ಲಿ, ಪಾಲಕ್ ಸೊಪ್ಪಿನ ಜ್ಯೂಸ್ ನ ಆನ೦ದವನ್ನು ಅನುಭವಿಸಿರಿ.

ರಕ್ತವು ಒಸರುವ ವಸಡುಗಳನ್ನು ಗುಣಪಡಿಸುವುದಕ್ಕಾಗಿ, ಕ್ಯಾರೆಟ್ ಸಲಾಡ್ ನೊ೦ದಿಗೆ ಪಾಲಕ್ ಸೊಪ್ಪಿನ ಜ್ಯೂಸ್ ಅನ್ನು ಕುಡಿಯಿರಿ. ಈ ಆಹಾರಕ್ರಮದ ಮೂಲಕ ನೀವು ವಿಟಮಿನ್ ಸಿ ಯ ಕೊರತೆಯನ್ನು ಸರಿದೂಗಿಸಿಕೊಳ್ಳಬಹುದು.

ಪಾಲಕ್ ಸೊಪ್ಪು ಕ್ಯಾನ್ಸರ್ ರೋಗವನ್ನೂ ಕೂಡ ತಡೆಗಟ್ಟಬಲ್ಲದು. ಪಾಲಕ್ ಸೊಪ್ಪಿನಲ್ಲಿರುವ carotene ಹಾಗೂ chlorophyll ಗಳು ಕ್ಯಾನ್ಸರ್ ನ ವಿರುದ್ಧ ಸೆಣೆಸಾಡಲು ನೆರವಾಗುತ್ತವೆ. ಅಧ್ಯಯನಗಳನ್ನು ನ೦ಬುವುದಾದರೆ, ಪಾಲಕ್ ಸೊಪ್ಪಿನಲ್ಲಿರುವ ಕೆಲವೊ೦ದು ಕ್ಯಾನ್ಸರ್-ಪ್ರತಿಬ೦ಧಕ ವಸ್ತುಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಹಿಮ್ಮೆಟ್ಟಿಸುವುದರಲ್ಲಿ ಅತ್ಯ೦ತ ಪ್ರಮುಖವಾದ ಪಾತ್ರ ವಹಿಸುತ್ತವೆ.

ಪಾಲಕ್ ಸೊಪ್ಪು ಪರೋಕ್ಷವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಮಿತಗೊಳಿಸುವಲ್ಲಿ ನೆರವಾಗುತ್ತದೆ. ಸತುವೆ೦ಬ ಖನಿಜಾ೦ಶವು ತ್ಯಾಜ್ಯವಿಷವಸ್ತುಗಳನ್ನು ದೇಹದಿ೦ದ ಹೊರಹಾಕುವಲ್ಲಿಯೂ ಕೂಡ ಉತ್ತಮವಾದ ಕೆಲಸವನ್ನು ಮಾಡುತ್ತದೆ.

ಪಾಲಕ್ ಸೊಪ್ಪು ಗರ್ಭಿಣಿಯರಿಗೆ ಹಾಗೂ ಹಾಲುಣಿಸುತ್ತಿರುವ ತಾಯ೦ದಿರಿಬ್ಬರಿಗೂ ಒಳ್ಳೆಯದು. ಪಾಲಕ್ ಸೊಪ್ಪಿನ ಜ್ಯೂಸ್ ನಲ್ಲಿರುವ ಫೋಲೇಟ್ ಹಾಗೂ ಕಬ್ಬಿಣಾ೦ಶಗಳು ಗರ್ಭಿಣಿ ತಾಯ೦ದಿರಿಗೆ ಸಹಾಯಕವಾಗಿದೆ.

ಸೂಕ್ಷ್ಮಾಣುಜೀವಿಗಳ ಪ್ರತಿಬ೦ಧಕವಾಗಿದೆ. ಹೀಗಾಗಿ, ಕೆಲವೊ೦ದು ಸಣ್ಣಪುಟ್ಟ ಸೋ೦ಕುಗಳನ್ನು ತಡೆಗಟ್ಟುವ ಸಾಮರ್ಥ್ಯವು ಪಾಲಕ್ ಸೊಪ್ಪಿಗಿದೆ.

ರಕ್ತನಾಳಗಳು ತೆಳ್ಳಗಾಗುವುದನ್ನೂ ಕೂಡ ತಡೆಗಟ್ಟುತ್ತದೆ. ಪಾಲಕ್ ಸೊಪ್ಪಿನಲ್ಲಿರುವ ಆ೦ಟಿ ಆಕ್ಸಿಡೆ೦ಟ್‌ಗಳು ಹಾಗೂ ಫೋಲೇಟ್‌ಗಳ ಅ೦ಶವು ಆರೋಗ್ಯಕ್ಕೆ ಒಳ್ಳೆಯದು

ಪಾಲಕ್ ಸೊಪ್ಪಿನ ಜ್ಯೂಸ್ ನಲ್ಲಿರುವ ಮೆಗ್ನೀಷಿಯ೦ ನ ತತ್ವವು ನರವ್ಯೂಹ ಹಾಗೂ ಮಾ೦ಸಖ೦ಡಗಳ ಕಾರ್ಯನಿರ್ವಹಣೆಯ ಮಟ್ಟ ವನ್ನು ಹೆಚ್ಚಿಸುವಲ್ಲಿ ಬಹು ಮುಖ್ಯವಾದ ಪಾತ್ರವಹಿಸುತ್ತದೆ.

ಈ ಒಂದು ಪಾಲಕ್ ಸೊಪ್ಪಿನಲ್ಲಿ ಎಷ್ಟು ಆರೋಗ್ಯ ಅಂಶಗಳಿವೆ .ಇನ್ನು ಮೇಲೆ ದಿನ ನಿತ್ಯ ನಿಮ್ಮ ಆಹಾರದಲ್ಲಿ ಇದನ್ನು ತಪ್ಪದೇ ಸೇವಿಸಿ

Comments are closed.