ಆರೋಗ್ಯ

ನಾಲಗೆಗೆ ರುಚಿ ಕೊಡುವ ಉಪ್ಪುನಲ್ಲಿ ಕೂಡ ಒಂದು ಸೌಂದರ್ಯವರ್ಧಕ ರಹಸ್ಯ ಅಡಗಿದೆ ಗೋತ್ತೆ.

Pinterest LinkedIn Tumblr

ಉಪ್ಪಿಗಿಂತ ರುಚಿ ಬೇರೆ ಇಲ್ಲ. ಉಪ್ಪು ಇಲ್ಲದೆ ಇದ್ದರೆ ಯಾವುದೇ ಆಹಾರ ಕೂಡ ನಾಲಗೆಗೆ ರುಚಿಸದು ಪ್ರತಿಯೊಂದು ಆಹಾರಕ್ಕೂ ಉಪ್ಪನ್ನು ಬಳಸುತ್ತಾರೆ. ಅದೇ ರೀತಿ ಉಪ್ಪುನಲ್ಲಿರುವಂತಹ ಕೆಲವೊಂದು ಅಂಶಗಳು ದೇಹಕ್ಕೂ ಒಳ್ಳೆಯದು. ಉಪ್ಪಿನಲ್ಲಿ ಕೂದಲು ಮತ್ತು ತ್ವಚೆಯನ್ನು ಆರೈಕೆ ಮಾಡುವಂತಹ ಗುಣಗಳು ಕೂಡ ಇವೆ.

ಉಪ್ಪು ಸೌಂದರ್ಯವರ್ಧಕ. ಸುಲಭವಾಗಿ, ಕಡಿಮೆ ದರದಲ್ಲಿ ಸಿಗುವಂತ ಉಪ್ಪಿನಿಂದ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಕೂದಲಿನ ಆರೈಕೆಯನ್ನು ಸಹ ಮಾಡಬಹುದು.

ಬೆಚ್ಚಗಿನ ನೀರಿಗೆ ಉಪ್ಪನ್ನು ಹಾಕಿ, ಅದರಲ್ಲಿ ಪಾದಗಳನ್ನಿಟ್ಟು ಕುಳಿತುಕೊಂಡರೆ ವಿಶ್ರಾಂತಿ ಸಿಗುವುದಲ್ಲದೇ, ಪಾದಗಳ ಉರಿಯನ್ನು ತಪ್ಪಿಸಬಹುದು.
ಎಣ್ಣೆಯುಕ್ತ ಚರ್ಮಕ್ಕೆ ಉಪ್ಪು ಬಹಳ ಉತ್ತಮ. ಉಗುರು ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಉಪ್ಪನ್ನು ಹಾಕಿ, ಮುಖದ ಮೇಲೆ ಚುಮುಕಿಸಿ. ನಂತರ ಹತ್ತಿಯಿಂದ ಒರೆಸಿಕೊಂಡು, ಮುಖವನ್ನು ತೊಳೆದುಕೊಳ್ಳಿ.
ಬೆಚ್ಚಗಿನ ನೀರಿಗೆ ಉಪ್ಪು ಹಾಕಿ, ಅದರ ಆವಿಯನ್ನು ತೆಗೆದುಕೊಳ್ಳುವುದು ಒಳ್ಳೆಯದು. ಇದರಿಂದಲೂ ಎಣ್ಣೆಯುಕ್ತ ಚರ್ಮದವರು ಕಾಂತಿಯುತ ತ್ವಜೆ ಪಡೆಯಬಹುದು.

ಕಣ್ಣಿನ ಉರಿಯೂತ ತಡೆಯಲು ಇದು ಸಹಕಾರಿ. ಆಯಾಸದ ಕಾರಣ ಹಾಗೂ ಸರಿಯಾಗಿ ನಿದ್ದೆ ಬರದಿದ್ದಲ್ಲಿ ಕಣ್ಣು ಊದಿಕೊಳ್ಳುತ್ತದೆ. ಉಪ್ಪನ್ನು ಬೆರೆಸಿರುವ ಬೆಚ್ಚಗಿನ ನೀರಿನಿಂದ ಉಬ್ಬಿದ ಜಾಗಕ್ಕೆ ಮಸಾಜ್ ಮಾಡಿದರೆ, ಊತ ಕಡಿಮೆಯಾಗುತ್ತದೆ.ಹಲ್ಲಿಗೆ ಕೂಡ ಇದು ಉಪಯೋಗಕಾರಿ. ಸ್ವಲ್ಪ ಉಪ್ಪು ಹಾಗೂ ಅಡುಗೆ ಸೋಡಾವನ್ನು ಬಳಸಿ ಹಲ್ಲುಜ್ಜಿದರೆ, ಹಲ್ಲುಗಳು ಹೊಳೆಯುತ್ತವೆ.

ಒಂದು ಟೀ ಚಮಚ ಉಪ್ಪನ್ನು ತೆಗೆದುಕೊಂಡು ಅದನ್ನು ತಲೆಗೆ ಹತ್ತು ನಿಮಿಷ ಕಾಲ ಮಸಾಜ್ ಮಾಡಿ. ಕೂದಲನ್ನು ಮತ್ತೆ ತೊಳೆಯಿರಿ. ಈ ಕ್ರಮವನ್ನು ವಾರದಲ್ಲಿ ಎರಡು ಸಲ ಮುಂದುವರಿಸಿ. ಒಂದು ತಿಂಗಳ ಒಳಗಡೆ ನಿಮಗೆ ಫಲಿತಾಂಶ ಕಂಡುಬರುವುದು.

ಕೂದಲನ್ನು ಎರಡು ಭಾಗಗಳನ್ನಾಗಿ ಮಾಡಿಕೊಂಡು ಅದಕ್ಕೆ ಉಪ್ಪು ಸಿಂಪಡಣೆ ಮಾಡಿ. 10-15 ನಿಮಿಷ ಕಾಲ ಬೆರಳನ್ನು ಬಳಸಿಕೊಂಡು ಕೂದಲಿಗೆ ಸರಿಯಾಗಿ ಮಸಾಜ್ ಮಾಡಿ. ಸ್ವಲ್ಪ ಸಮಯ ಬಿಟ್ಟು ಕೂದಲು ತೊಳೆಯಿರಿ. ಇದರಿಂದ ತಲೆಬುರುಡೆಯು ರಕ್ಷಣೆಯಾಗುವುದು ಮತ್ತು ಶಿಲೀಂಧ್ರಿಯಗಳು ಬೆಳೆಯುವುದು ತಪ್ಪುತ್ತದೆ.

ಸ್ವಲ್ಪ ಪ್ರಮಾಣದಲ್ಲಿ ಉಪ್ಪನ್ನು ತೆಗೆದುಕೊಂಡು ನೀವು ಬಳಸುವ ಶಾಂಪ್’ನಲ್ಲಿ ಕಲಸಬೇಕು. ಈಗ ತಲೆಸ್ನಾನ ಮಾಡಿದರೆ ನಿಮ್ಮ ಕೂದಲಿನ ಜಿಡ್ಡು ಕೊಗುವುದಷ್ಟೆ ಅಲ್ಲ, ಶಾಂಪು ಹಾಕಿದಾಗ ಕಂಡಿಷನರ್ ಬಳಸುವ ಅವಶ್ಯಕತೆ ಇಲ್ಲ. ಇದು ಒಳ್ಳೆ ಕಂಡಿಷನರ್ ಆಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ ನಿಮ್ಮ ಕೂದಲು ಉದರುವುದು ಕಡಿಮೆಯಾಗಿ ಬೆಳೆಯುವುದನ್ನು ಗಮನಿಸಬಹುದು.

ಉಗುರು ಹಳದಿಯಾಗುವವರು ಒಂದು ಚಮಚ ಉಪ್ಪು, ಅಡುಗೆ ಸೋಡಾ ಹಾಗು ನಿಂಬೆ ರಸವನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣ ಮಾಡಿ ಉಗುರುಗಳ ಮೇಲೆ ಹಚ್ಚಿ ಅದು ಒಣಗಿದ ಬಳಿಕ ನೀರಿನಿಂದ ತೊಳೆಯಬೇಕು. ಹೀಗೆ ಮಾಡುವುದರಿಂದ ಉಗುರು ಸಾಮಾನ್ಯ ಬಣ್ಣಕ್ಕೆ ಮರಳುತ್ತದೆ.

ಮೊಡವೆ ಹೆಣ್ಣು ಮಕ್ಕಳ ಸಾಮಾನ್ಯ ಸಮಸ್ಯೆ. ಇಂಥವರು ಚಿಟಿಕೆ ಉಪ್ಪನ್ನು ಆಲಿವ್ ಎಣ್ಣೆಗೆ ಬೆರೆಸಿ ಮುಖಕ್ಕೆ ಹಚ್ಚಿಕೊಂಡು ಬೆರಳುಗಳ ತುದಿಯಿಂದ ಮಸಾಜ್ ಮಾಡಿಕೊಳ್ಳಬೇಕು. ಆಲಿವ್ ಆಯಿಲ್ ಬದಲಿಗೆ ಕೊಬ್ಬರಿ ಎಣ್ಣೆ ಕೂಡ ಬಳಸಬಹುದು. ಮುಖದ ಮೇಲೆ ಗಾಯ ಅಥವಾ ಕೀವು ಗುಳ್ಳೆ ಇದ್ದರೆ ಈ ವಿಧಾನ ಅನುಸರಿಸಬೇಡಿ. ಸಾಮಾನ್ಯ ಉಪ್ಪನ್ನು ಬಳಸುವ ಬದಲು ಸಮುದ್ರದ ಉಪ್ಪನ್ನು ಬಳಸುವುದು ಒಳ್ಳೆಯದು. ಇದರಿಂದ ಅಡ್ಡ ಪರಿಣಾಮಗಳನ್ನು ತಪ್ಪಿಸಬಹುದು.

Comments are closed.