ರಾಷ್ಟ್ರೀಯ

ದೇಶದಲ್ಲಿ ಕೊರೋನಾ ಮಹಾಮಾರಿಗೆ ಒಟ್ಟು 1,074 ಮಂದಿ ಬಲಿ; 33,000 ಸಾವಿರಕ್ಕೆ ಸೋಂಕಿತರ ಸಂಖ್ಯೆ ಏರಿಕೆ

Pinterest LinkedIn Tumblr

ನವದೆಹಲಿ; ದೇಶದಲ್ಲಿ ಕೊರೋನಾ ಅಬ್ಬರ ಏರುತ್ತಲೇ ಇದ್ದು, ಇವರೆಗೂ ಮಹಾಮಾರಿ ವೈರಸ್ 1,074 ಮಂದಿಯನ್ನು ಬಲಿಪಡೆದುಕೊಂಡಿದೆ, ಅಲ್ಲದೆ, 33,000 ಸಾವಿರಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 67 ಮಂದಿ ಸಾವನ್ನಪ್ಪಿದ್ದು, 1,718 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 33,050ಕ್ಕೆ ಏರಿಕೆಯಾಗಿದ್ದು, 1,074 ಮಂದಿ ಬಲಿಯಾಗಿದ್ದಾರೆ.

ಈ ನಡುವೆ ಸೋಂಕಿತರ ಜೊತೆ ಜೊತೆಗೆ ಗುಣಮುಖರಾಗುತ್ತಿರುವ ಸಂಖ್ಯೆ ಕೂಡ ಏರಿಕೆಯಾಗಿದ್ದು, 30 ಸಾವಿರ ಸೋಂಕಿತರ ಪೈಕಿ ವಿವಿಧ ರಾಜ್ಯಗಳಲ್ಲಿ 8,325 ಮಂದಿ ಸೋಂಕಿನಿಂದ ಗುಣಮುಖರಾಗಿ, ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಈ ಹಿಂದೆ ಹೇಳಿಕೆ ಬಿಡುಗಡೆ ಮಾಡಿದ್ದ ಕೇಂದ್ರ ಗೃಹ ಸಚಿವಾಲಯ, 2ನೇ ಹಂತದ ಲಾಕ್’ಡೌನ್ ಮೇ.3ರಂದು ಮುಕ್ತಾಯಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಮೇ.4ರಿಂದ ಹೊಸ ಮಾರ್ಗಸೂಚಿಗಳು ಬಿಡುಗಡೆಯಾಗಲಿವೆ. ಅದರಲ್ಲಿ ಹಲವು ಜಿಲ್ಲೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಲಾಕ್’ಡೌನ್ ಸಡಿಲಗೊಳಿಸಲಾಗುತ್ತದೆ. ಈ ಕುರಿತು ಶೀಘ್ರದಲ್ಲಿಯೇ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುತ್ತದೆ ಎಂದು ಹೇಳಿತ್ತು.

Comments are closed.