ಅಂತರಾಷ್ಟ್ರೀಯ

ತಮ್ಮನ್ನೂ ರಕ್ಷಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಮನವಿ ಮಾಡಿರುವ ಮಲೇಷ್ಯಾದಲ್ಲಿ ಸಿಲುಕಿಕೊಂಡಿರುವ ಕನ್ನಡಿಗ ವಿದ್ಯಾರ್ಥಿ

Pinterest LinkedIn Tumblr

ಮಲೇಷ್ಯಾ: ಕೊರೊನಾ ವೈರಸ್‌ ವಿಶ್ವಾದ್ಯಂತ ಮರಣ ಮೃದಂಗ ಬಾರಿಸುತ್ತಿದೆ. ಈಗಾಗಲೇ ಹಲವಾರು ದೇಶಗಳಲ್ಲಿ ಸಿಲುಕಿಕೊಂಡಿದ್ದ ಭಾರತೀಯ ಪ್ರಜೆಗಳನ್ನು ಕೇಂದ್ರ ಸರಕಾರ ವಿಶೇಷ ವಿಮಾನಗಳ ಮೂಲಕ ಸ್ವದೇಶಕ್ಕೆ ಕರೆಸಿಕೊಂಡಿದೆ.

ಇದೀಗ ಮಲೇಷ್ಯಾದಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ಪ್ರಜೆಗಳು, ತಮ್ಮನ್ನೂ ರಕ್ಷಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಬೇಡಿಕೊಂಡಿದ್ದಾರೆ.

ಇಂಟರ್ನ್‌ಶಿಪ್‌ಗಾಗಿ ಮಲೇಷ್ಯಾಕ್ಕೆ ತೆರಳಿ ಅಲ್ಲೇ ಸಿಲುಕಿಕೊಂಡಿರುವ ಕೋಲಾರದ ಭಾರ್ಗವ್ ಎಂಬ ವಿದ್ಯಾರ್ಥಿ ವಿಡಿಯೋ ಮೂಲಕ ತಮ್ಮನ್ನು ವಾಮಲೇಷ್ಯಾದಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ಪ್ರಜೆಗಳು, ತಮ್ಮನ್ನೂ ರಕ್ಷಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಬೇಡಿಕೊಂಡಿದ್ದಾರೆಪಸ್‌ ಕರೆಸಿಕೊಳ್ಳುವಂತೆ ಅಂಗಲಾಚಿ ಬೇಡಿಕೊಂಡಿದ್ದಾನೆ.

ಈ ಯುವಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ವೈರಲ್‌ ಆಗುತ್ತಿದೆ. ಮಲೇಷಿಯಾದಲ್ಲಿ ಕನ್ನಡಿಗರು ಅನ್ನ ,ನೀರು ಸಿಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಲೇಷಿಯಾ ಸರಕಾರ ಕೂಡ ಕನ್ನಡಿಗರ ನೆರವಿಗೆ ಬರುತ್ತಿಲ್ಲ ಎಂಬ ವಾಸ್ತವವನ್ನು ವಿಡಿಯೋ ಮೂಲಕ ತಿಳಿಸಿದ್ದಾನೆ.

ಮಲೇಷ್ಯಾದಲ್ಲಿ ಸಿಲುಕಿರುವ ನಮಗೆ ದಿನನಿತ್ಯದ ಅಗತ್ಯ ಸಾಮಗ್ರಿಗಳನ್ನು ಕೂಡ ಖರೀದಿಸಲು ಸಾಧ್ಯವಾಗುತ್ತಿಲ್ಲ. ಅಲ್ಲಿನ ಹೈಕಮಿಷನ್‌ ಕಡೆಯಿಂದಲೂ ಕೂಡ ಇವರಿಗೆ ಯಾವುದೇ ಸಹಕಾರ ದೊರಕುತ್ತಿಲ್ಲ. ಇರುವ ಹಣ ಕೂಡ ಖಾಲಿಯಾಗುತ್ತ ಬಂದಿದೆ. ದಿನದಲ್ಲಿ ಒಂದೇ ಹೊತ್ತಿನ ಊಟ ಮಾಡಿಕೊಂಡು ಕಾಲ ಕಳೆಯುತ್ತಿದ್ದೇವೆ.

ಹಲವಾರು ಜನ ಕನ್ನಡಿಗರು ಇಲ್ಲಿದ್ದಾರೆ. ಅವರಿಗೂ ಕೂಡ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ನಮ್ಮ ಕುಟುಂಬದವರೂ ತೀವ್ರ ಆತಂಕದಲ್ಲಿದ್ದಾರೆ. ಯಾವಾಗ ವಾಯು ಸಂಚಾರ ಆರಂಭವಾಗುತ್ತದೆಯೋ, ಮಗ ಯಾವಾಗ ಮನೆಗೆ ಮರಳುತ್ತಾನೋ ಎಂಬ ಆತಂಕದಲ್ಲೇ ದಿನ ದೂಡುತ್ತಿದ್ದಾರೆ.

ನಮ್ಮ ಕುಟುಂಬದವರನ್ನು ದೂರವಾಗಿ ಈಗಾಗಲೇ 45 ದಿನಗಳಾಗಿವೆ. ನನ್ನ ಹಾಗೆಯೇ ಹಲವಾರು ಜನ ಪ್ರವಾಸಿಗರಿದ್ದಾರೆ. ವಿದ್ಯಾರ್ಥಿಗಳಿದ್ದಾರೆ, ಗರ್ಭಿಣಿಯರು, ವಯೋವೃದ್ಧರು, ಮಕ್ಕಳು ಕೂಡ ಇದ್ದಾರೆ. ನಮ್ಮನ್ನೆಲ್ಲ ಆದಷ್ಟು ಬೇಗ ಕರ್ನಾಟಕಕ್ಕೆ ವಾಪಸ್‌ ಕರೆಸಿಕೊಳ್ಳಿ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಅಂಗಲಾಚಿ ಬೇಡಿಕೊಂಡಿದ್ದಾರೆ.

ಎಷ್ಟು ದಿನ ಬೇಕಾದರೂ ನಾವು ಕ್ವಾರಂಟೈನ್‌ನಲ್ಲಿ ಇರಲು ತಯಾರಿದ್ದೇವೆ ದಯವಿಟ್ಟು ನಮ್ಮನ್ನು ಇಲ್ಲಿಂದ ಕರೆಸಿಕೊಳ್ಳಿ ಎಂದು ಕೇಳಿಕೊಂಡಿದ್ದಾರೆ.

Comments are closed.