ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಈ ಸೈನಸ್ ಸಮಸ್ಯೆಯಿಂದ ದೂರವಿರಬೇಕಾದರೆ ಈ 5 ಮನೆಮದ್ದನ್ನು ತಪ್ಪದೆ ಪಾಲಿಸಿ.
ಅರಿಶಿನ:
ಇದು ನೈಸರ್ಗಿಕ ಉರಿಯೂತ ನಿವಾರಣೆ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. ಇದನ್ನು ನೀವು ಶುಂಠಿ ಚಹಾದಲ್ಲಿ ಸೇರಿಸಿ ಅಥವಾ ಶುಂಠಿ ಜ್ಯೂಸ್-ನಲ್ಲಿ ಜೇನು ತುಪ್ಪ ಮತ್ತು ಅರಿಶಿನ ಸೇರಿಸಿ ಕುಡಿದರೆ ಸೈನಸ್ ಸಮಸ್ಯೆ ಇರುವುದಿಲ್ಲ.
ಚಿಕನ್ ಸೂಪ್:
ಇದು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ, ಮಲಗುವ ಮುನ್ನ ಒಂದು ದೊಡ್ಡ ಬಟ್ಟಲಿನಷ್ಟು ಚಿಕನ್ ಸೂಪ್ ಕುಡಿದು ಮಲಗಿದರೆ ನಿಮ್ಮ ಸೈನಸ್ ಸಮಸ್ಯೆ ದೂರವಾಗುತ್ತದೆ.
ಬಿಸಿನೀರಿನ ಹಬೆ:
ಬಿಸಿನೀರಿನ ಬಟ್ಟಲು ತೆಗೆದುಕೊಂಡು ಅದರಲ್ಲಿ ಪುದೀನಾ ತೈಲ, ಮೂರು ಹನಿ ರೋಸ್ಮರಿ ಮತ್ತು ಒಂದು ಹನಿ ಪುದಿನ ಎಣ್ಣೆ ಸೇರಿಸಿ ಹಬೆ ತೆಗೆದುಕೊಳ್ಳಲು ಪ್ರಾರಂಭಿಸಿ. ಇದರಿಂದ ಸೈನಸ್-ನಿಂದ ಮುಕ್ತಿಸಿಗುತ್ತದೆ.
ಹೈಡ್ರೇಟ್ ಆಗಿರಿ:
ಸೈನಸ್ ಸಮಸ್ಯೆಯಿರುವವರು ಹೆಚ್ಚಾಗಿ ನೀರು, ಚಹ, ಜ್ಯೂಸ್-ಗಳನ್ನು ಕುಡಿಯ ಬೇಕು ಇದರಿಂದ ಲೋಳೆ ತೆಳ್ಳಗಾಗಿ ಉಸಿರಾಟ ಸರಾಗವಾಗುತ್ತದೆ. ಕಾಫಿ ಮತ್ತು ಧೂಮಪಾನವನ್ನು ಆದಷ್ಟು ಕಡಿಮೆ ಮಾಡಬೇಕು ಇದರಿಂದ ದೇಹ ಡಿಹೈಡ್ರೇಟ್ ಆಗುತ್ತದೆ.
ನೋಸ್ ಡ್ರಾಪ್ಸ್ ಹಾಕಿ:
ಅರ್ಧ ಬಟ್ಟಲು ಉಗುರು ಬೆಚ್ಚನೆಯ ನೀರಿಗೆ, ಅರ್ಧ ಟೀ ಚಮಚ ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಿಸಿ ನಂತರ ಈ ನೈಸರ್ಗಿಕ ನೋಸ್ ಡ್ರಾಪ್ಸ್ ಅನ್ನು ಒಂದು ಬಾಟಲಿಯಲ್ಲಿ ಹಾಕಿ ನಿತ್ಯ 5 ಡ್ರಾಪ್ಸ್ ಮೂಗಿನಲ್ಲಿ ಹಾಕಿಕೊಳ್ಳಿ ಇದರಿಂದ ಮೂಗಿನಲ್ಲಿರುವ ಸೂಕ್ಷ್ಮ ಜೀವಿಗಳು ಸ್ವಚ್ಛವಾಗಿ ಉಸಿರಾಟ ಸರಾಗವಾಗುತ್ತದೆ.

Comments are closed.