ಆರೋಗ್ಯ

ಕುಡಿಯುವ ನೀರಿಗೆ ಈ ಬಾಟಲಿಗಳನ್ನು ಬಳಸುತ್ತಿದ್ದಾರೆ..ಹಾಗಾದರೆ ಇದನ್ನೊಮೆ ಓದಿ…?

Pinterest LinkedIn Tumblr

ಈಗ ಬೆಳೆಯುತ್ತಿರುವ ನಗರಗಳ ಜೊತೆ ಜನರ ಜೀವನಶೈಲಿಯಲ್ಲಿ ಕೂಡ ತುಂಬಾ ಬದಲಾವಣೆಯಾಗಿದೆ. ಅದರ ಒಂದು ಒಳ್ಳೆಯ ಉದಾಹರಣೆಯೇ ಹೆಚ್ಚಿನ ಪ್ಲಾಸ್ಟಿಕ್ ಬಳಕೆ. ಜನ ಪ್ರತಿಯೊಂದಕ್ಕೂ ಪ್ಲಾಸ್ಟಿಕ್ ಕಂಟೈನರ್ಗಳನ್ನೇ ಬಳಸುತ್ತಾರೆ. ಆದರೆ ನೀವು ನೀರು ಕುಡಿಯಲು ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುತ್ತಿದ್ದಾರೆ ನಿಮಗೆ ಬಹು ಬೇಗ ಕ್ಯಾನ್ಸರ್ ಬರುತ್ತದೆ ಎಂದಿದೆ ಸಂಶೋಧನೆ.

ಹೌದು, ನೀವು ಸಾಮಾನ್ಯವಾಗಿ ನೀರು ಕುಡಿಯಲು ಬಳಸುವ ಪ್ಲಾಸ್ಟಿಕ್ ಬಾಟಲಿಗಳು ಅಸಲಿಗೆ “ಸ್ಲೋ ಪಾಯಿಜನ್” ಅಥವಾ ವಿಷವಂತೆ. ದೀರ್ಘ ಕಾಲದವರೆಗೆ ಇದನ್ನು ಬಳಸಿದರೆ ನೀವು ಭಾರಿ ದಂಡ ತೆರಬೇಕಾಗುತ್ತದೆಯಂತೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿರುವ ಕೆಮಿಕಲ್ ‌ಗಳಿಂದ ಕ್ಯಾನ್ಸರ್ ನಂತಹ ಮಾರಕ ಕಾಯಿಲೆ ಬರುತ್ತದೆಯಂತೆ.

ನೀವು ನಿತ್ಯ ಬಳಸುವ ಕೋಕೋ-ಕೋಲಾ, ಪೆಪ್ಸಿ ಮತ್ತು ಇನ್ನಿತರೇ ತಂಪುಪಾನೀಯಗಳ ಬಾಟಲಿಗಳನ್ನು ರಾಸಾಯನಿಕಗಳನ್ನು ಬಳಸಿ ತಯಾರು ಮಾಡಲಾಗುತ್ತದೆ. ನೀವು ಇದರಲ್ಲಿ ಹೆಚ್ಚು ತಂಪು ಅಥವಾ ಬಿಸಿ ಪದಾರ್ಥ ಗಳನ್ನು ಹಾಕಿದರೆ ಅಥವಾ ನೇರವಾಗಿ ಬಿಸಿಲಿಗೆ ಇಟ್ಟರೆ ಇದರಲ್ಲಿರುವ ಕೆಮಿಕಲ್ ನಿಮ್ಮ ನೀರಿಗೆ ಸೇರಿಕೊಳ್ಳುತ್ತದೆ.

ಬಾಟಲಿಗಳನ್ನು ರಾಸಾಯನಿಕಗಳನ್ನು ಬಳಸಿ ತಯಾರು ಮಾಡಲಾಗುತ್ತದೆ ಅದರಲ್ಲಿ BPA ಎಂಬ ಒಂದು ಅಂಶವಿರುತ್ತದೆ ಅದು ನಮ್ಮ ದೇಹವನ್ನು ಸೇರಿದರೆ ಸಕ್ಕರೆ ಕಾಯಿಲೆ ಮತ್ತು ಕ್ಯಾನ್ಸರ್ ಕಾಯಿಲೆ ಬರುತ್ತದೆ. ಇನ್ನು ಮೌಂಟನ್ ಡಿವ್, ಸ್ಪ್ರೈಟ್, 7 ಅಪ್ ನಂತಹ ಬಣ್ಣ ದಿಂದ ಕೂಡಿದ ಬಾಟಲಿಗಳಂತೂ ಇನ್ನು ಹಾನಿಕಾರಕ ಏಕೆಂದರೆ ಬಣ್ಣ ಬರಲೆಂದೇ ಇವಕ್ಕೆ ಹೆಚ್ಚಿನ ಕೆಮಿಕಲ್ ಗಳನ್ನು ಸೇರಿಸಲಾಗುತ್ತದೆ.

ಇಂತಹ ಬಾಟಲಿಗಳನ್ನು ಬಳಸುವುದರಿಂದ e.coli ಎಂಬ ಅಪಾಯಕಾರಿ ಸೂಕ್ಶ್ಮಾಣು ಜೀವಿಗಳು ದೇಹವನ್ನು ಸೇರಿ ವಾಸಮಾಡುತ್ತವೆ. ಇನ್ನು ಮಹಿಳೆಯರು ಇದನ್ನು ಬಳಸಿದರೆ ಅಂಡಾನೋತ್ಪತ್ತಿ, ಸ್ಥಾನ ಕ್ಯಾನ್ಸರ್ ನಂತಹ ಜೀವ ಹಿಂಡುವ ಕಾಯಿಲೆಗೆ ಗುರಿಯಾಗುತ್ತಾ ರಂತೆ.

ಲೋಹದಿಂದ ಮಾಡಿದ ಅಲ್ಯೂಮಿನಿಯಮ್ ಅಥವಾ ಸ್ಟೀಲ್ ಬಾಟಲಿಯೇನು ಉತ್ತಮವೇ ಆದರೆ ದೀರ್ಘ ಕಾಲದ ಬಳಕೆಯಿಂದ ಅವು ತುಕ್ಕು ಹಿಡಿಯುತ್ತವೆ. ಅದಕ್ಕೆ, ಒಡೆಯುವ ಭಯವಿದ್ದರೂ ಸಹ ಸ್ವಲ್ಪ ಹಿಂದೆ ನಮ್ಮ ಹಿರಿಯರು ಬಳಸುತ್ತಿದ್ದ ಗಾಜಿನ ಬಾಟಲಿಗಳನ್ನು ಬಳಸುವುದು ಸರ್ವ ಶ್ರೇಷ್ಟ.

Comments are closed.