ಆರೋಗ್ಯ

ಬಿಸಿ ಹಾಲಿಗೆ ತುಂಡು ಬೆಲ್ಲವನ್ನು ಸೇರಿಸಿ ಕುಡಿದರೆ ಆಗುವ ಪ್ರಯೋಜನ ಬಲ್ಲಿರಾ..?

Pinterest LinkedIn Tumblr

ಹೌದು ಸಂಪ್ರದಾಯ ಅಂತ ಈಗಲೂ ಕೆಲವು ಮನೆಗಳಲ್ಲಿ ಬಾಯಾರಿಕೆ ನಿವಾರಿಸೋಕೆ ಅಂತ ಬೆಲ್ಲದ ತುಂಡು ಮತ್ತು ನೀರು ಕೊಡ್ತಾರೆ. ಬೆಲ್ಲಾನೇ ಯಾಕೆ ಅಂದ್ರೆ, ಇದರಲ್ಲಿ ಗ್ಲುಕೋಸ್ ಹೆಚ್ಚಿನ ಪ್ರಮಾಣದಲ್ಲಿ ಇದೆ ಮತ್ತು ಸುಲಭವಾಗಿ ರಕ್ತದೊಂದಿಗೆ ಬೆರೆಯುವ ಹಾಗೆ ಸರಳ ರೂಪದಲ್ಲಿ ಇದೆ. ಜೊತೆಗೆ ವಿಟಮಿನ್ ಎ, ಸಿ, ಕಬ್ಬಿಣದ ಸತ್ವ ಮತ್ತು ಕ್ಯಾಲ್ಷಿಯಂ ಕೂಡ ಇದೆ. ಅಡಿಗೆಯಲ್ಲಿಯೂ ಬೆಲ್ಲದ ಉಪಯೋಗ ಮಾಡುವುದು ರುಚಿಯ ಜೊತೆ ಆರೋಗ್ಯಕ್ಕೂ ಒಳ್ಳೆಯದು.

ದಿನಾ ರಾತ್ರಿ ಹಾಲಿಗೆ ತುಂಡು ಬೆಲ್ಲವನ್ನು ಸೇರಿಸಿ ಕುಡಿದರೆ ಎಲ್ಲಾ ವಯೋಮಾನದವರಿಗೂ ಜೀರ್ಣಕ್ರಿಯೆಗೆ ಒಳ್ಳೆಯದು. ಮಹಿಳೆಯರ ಮುಟ್ಟಿನ ನೋವು ಕಡಿಮೆ ಮಾಡೋದಿಕ್ಕೂ ಬೆಲ್ಲ ರಾಮ ಬಾಣ. ಚೂರು ಬೆಲ್ಲ ಮತ್ತು ಈರುಳ್ಳಿ ತುಂಡನ್ನು ಜಗಿದು ನುಂಗಿದರೆ ಕೆಮ್ಮು ಕಡಿಮೆಯಾಗುತ್ತದೆ. ಪಿತ್ತದಿಂದ ವಾಂತಿಯ ಸಮಸ್ಯೆ ಉಂಟಾದರೆ ಬೆಲ್ಲ ಮತ್ತು ಯಾಲಕ್ಕಿ ಕಾಳನ್ನು ಜಗಿದು ನುಂಗಬೇಕು.

ಬೆಲ್ಲದ ಕಾಫಿಯ ರುಚಿ ಹಿಡಿದರೆ ಮತ್ತೆಂದೂ ಸಕ್ಕರೆ ಕಾಫಿಯ ಸಹವಾಸ ಮಾಡೋಲ್ಲ ನೀವು. ಹಿಂದೆಲ್ಲಾ ಹೆರಿಗೆ ಆದ ನಂತರ ತಾಯಿಗೆ ಬೆಲ್ಲದ ಕಾಫಿ ಕೊಡ್ತಾ ಇದ್ರು. ಇದೂ ಅದೇ ಕಾರಣಕ್ಕೆ. ಹಳ್ಳಿಯಲ್ಲಿ ಈಗಲೂ ದನಗಳು ಕರು ಹಾಕಿದ ಬಳಿಕ ಸುಮಾರು ಒಂದೆರಡು ಕೆ.ಜಿ. ಯಷ್ಟು ಬೆಲ್ಲವನ್ನು ನೀರಲ್ಲಿ ಕರಡಿಸಿ ಕುಡಿಯೋಕೆ ಕೊಡ್ತಾರೆ. ದನಗಳಿಗೆ ನಿತ್ರಾಣ ಆಗದಹಾಗೆ ಇದು ಸಹಾಯ ಮಾಡುತ್ತದೆ.

Comments are closed.