ಆರೋಗ್ಯ

ಮಣ್ಣಿನ ಪಾತ್ರೆಯಲ್ಲಿಟ್ಟ ತಂಗಳ ಅನ್ನ ಸೇವನೆಯ ಪ್ರಯೋಜನ ಬಲ್ಲಿರಾ…?

Pinterest LinkedIn Tumblr

ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಅನ್ನ ಮಾಡುತ್ತಾರೆ. ಆದರೆ ಮನೆಯಲ್ಲಿ ಯಾವತ್ತಾದರೂ ಅನ್ನ ಉಳಿಯೋದು ಸಾಮಾನ್ಯವೇ ಆಗಿದೆ. ಹೀಗೆ ಉಳಿದ ಅನ್ನವನ್ನು ನಾವು ಬಿಸಾಕುತ್ತೇವೆ. ಅನ್ನ ಉಳಿದರೆ ಮುಟ್ಟೋರೆ ಇರಲ್ಲ. ಕೆಲವರು ಹೇಳುತ್ತಾರೆ ನಿನ್ನೆಯ ಅನ್ನವನ್ನು ಅಂದರೆ ತಂಗಳ ಅನ್ನವನ್ನು ತಿನ್ನಬಾರದು ಎಂದು. ಹಾಗಂತ ತಂಗಳ ಅನ್ನವನ್ನು ಬಿಸಾಡ ಬೇಡಿ ಅದರಲ್ಲೂ ತುಂಬಾನೆ ಲಾಭ ಇದೆ.

ನಿನ್ನೆಯ ಅನ್ನವನ್ನು ತಿನ್ನೋದರಿಂದ ಆರೋಗ್ಯಕ್ಕೆ ಹಲವಾರು ಲಾಭಗಳಿವೆ ಅದರಲ್ಲೂ ಮಣ್ಣಿನ ಪಾತ್ರೆಯಲ್ಲಿ ತಂಗಳನ್ನವನ್ನು ರಾತ್ರಿ ಪೂರ್ತಿಯಾಗಿ ಇಟ್ಟು, ಮರುದಿನ ಬೆಳಗ್ಗೆ ಇದನ್ನು ಸೇವಿಸಬೇಕು. ಇದರಿಂದ ಹಲವಾರು ಆರೋಗ್ಯಕರ ಲಾಭಗಳಿವೆ ಎಂದು ಅಧ್ಯಯನ ವೊಂದರ ಮೂಲಕ ವರದಿಯಾಗಿದೆ. ಇದರಿಂದ ಮಲಬದ್ಧತೆ ಮತ್ತು ಆಸಿಡಿಟಿ ಮೊದಲಾದ ಸಮಸ್ಯೆಗಳು ದೂರವಾಗುತ್ತವೆ. ತಂಗಳ ಅನ್ನದಲ್ಲಿ ಸೂಕ್ಷ್ಮವಾದ ಪೋಷಕ ತತ್ವ ಹಾಗೂ ಖನಿಜ ಅತ್ಯಧಿಕ ಪ್ರಮಾಣದಲ್ಲಿರುತ್ತವೆ. ಐರನ್‌, ಪೊಟ್ಯಾಶಿಯಂ, ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿದೆ. ಅಧ್ಯಯನದ ಅನುಸಾರ ಪ್ರತಿದಿನ ಅನ್ನ ಸೇವನೆ ಮಾಡಿದರೆ ನೀವು ಆರೋಗ್ಯದಿಂದಿರಲು ಸಹಾಯವಾಗುತ್ತದೆ.

ತೂಕವನ್ನು ಹೆಚ್ಚಿಸಲು ಸಹಾಯಕಾರಿ:
ನೀವು ತೂಕವನ್ನು ಹೆಚ್ಚಿಸಲು ಬಯಸಿದ್ದರೆ ತಂಗಳ ಅನ್ನವನು ತಿನ್ನಿ. ಇದಕ್ಕಾಗಿ ನೀವು ಪ್ರತಿದಿನ ಬೇಯಿಸಿದ ಅನ್ನವನ್ನು ನೀರಿನಲ್ಲಿ ಹಾಕಿ, ರಾತ್ರಿ ಪೂರ್ತಿ ಹಾಗೆ ಇಡಿ. ನಂತರ ಬೆಳಗ್ಗೆ ಎದ್ದು ಆ ಅನ್ನವನ್ನು ಸೇವಿಸಿ.

ಆಸಿಡಿಟಿ ಸಮಸ್ಯೆ :
ನೀವು ಬೆಳಗ್ಗೆ ಏನು ತಿನ್ನದೆ ಇದ್ದರೆ ನಂತರ ಆ್ಯಸಿಡಿಟಿ ಸಮಸ್ಯೆ ಕಾಡುತ್ತದೆ. ಒಂದು ವೇಳೆ ನೀವು ಬೆಳೆಗ್ಗೆ ಎದ್ದಮೇಲೆ ತಂಗಳ ಅನ್ನವನ್ನು ಸೇವಿಸುತ್ತ ಹೋದರೆ ನಿಮಗೆ ಗ್ಯಾಸ್‌ ಸಮಸ್ಯೆ ಉಂಟಾಗುವುದಿಲ್ಲ.

ಅಲ್ಸರ್‌ ಸಮಸ್ಯೆ :
ವಾರದಲ್ಲಿ ಮೂರು ಬಾರಿ ಅಥವಾ ಮೂರು ದಿನ ತಂಗಳನ್ನ ಸೇವನೆ ಮಾಡಿ. ಇದರಿಂದ ಅಲ್ಸರ್‌ ಸಮಸ್ಯೆ ದೂರವಾಗುತ್ತದೆ.

ಬೇಸಿಗೆಯಲ್ಲಿ ತಾಪಮಾನವನ್ನು ಕಾಯ್ದುಕೊಳ್ಳುತ್ತದೆ:
ಯಾರಿಗೆ ಹೈ ಬ್ಲಡ್‌ ಪ್ರೆಶರ್‌ ಇರುತ್ತದೆ ಅವರು ದಿನ ಬೆಳಗ್ಗೆ ನಿನ್ನೆಯ ಉಳಿದ ಅನ್ನವನ್ನು ತಿನ್ನಬೇಕು. ಇದರಿಂದ ರಕ್ತ ಪರಿಚಲನೆ ಸಮತೋಲನವಾಗುತ್ತದೆ. ಇದಲ್ಲದೆ ಬೇಸಿಗೆಯಲ್ಲೂ ದೇಹ ತಂಪಾಗಿರಲು ಇದು ಸಹಾಯ ಮಾಡುತ್ತದೆ.

ಮಲಬದ್ಧತೆ ನಿಯಂತ್ರಿಸುತ್ತದೆ:
ಇಂದಿನ ಜೀವನ ಶೈಲಿ, ಆಹಾರ ಶೈಲಿಯ ಪ್ರಭಾವದಿಂದಾಗಿ ಹೆಚ್ಚಿನವರು ಎದುರಿಸುತ್ತಿರುವ ಸಮಸ್ಯೆಯೆಂದರೆ ಮಲಬದ್ಧತೆ. ಮಲಬದ್ಧತೆ ಎದುರಿಸುವ ವ್ಯಕ್ತಿ ಉಳಿದ ಅನ್ನವನ್ನು ಸೇವಿಸಬೇಕು. ಏಕೆಂದರೆ ತಂಗಳು ಅನ್ನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೈಬರ್ಸ್‌ ಇರುತ್ತದೆ. ಅದು ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

Comments are closed.