ಕರಾವಳಿ

ದಕ್ಷಿಣ ಕನ್ನಡಕ್ಕೆ ಹೊರ ರಾಜ್ಯದ ಮೀನು ವಾಹನ ಪ್ರವೇಶ ತಕ್ಷಣ ನಿರ್ಬಂಧ : ಸಚಿವ ಪೂಜಾರಿ 

Pinterest LinkedIn Tumblr

 

ಮಂಗಳೂರು ; ಮಂಗಳೂರಿನ ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರದ ಸಮಸ್ಯೆ ಇರುವುದರಿಂದ ಮತ್ತು ಕರೋ‌‌ನದ ಗಂಭೀರ ಸಮಸ್ಯೆ ಇರುವುದರಿಂದ ಹೊರ ರಾಜ್ಯದಿಂದ ಜಿಲ್ಲೆಗೆ ಬರುವ ‌ಮೀನು ವಾಹನಗಳಿಗೆ ತಕ್ಷಣವೇ ನಿರ್ಬಂಧಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದ್ದಾರೆ.

ಈಗಾಗಲೇ ಜಿಲ್ಲೆಯ ಹಲವೆಡೆಗಳಲ್ಲಿ ಕರೋನಾ ಪಾಸಿಟಿವ್ ಪ್ರಕರಣ ಹೆಚ್ಚುತ್ತಿದ್ದು, ಈ ಸಂದರ್ಭದಲ್ಲಿ ಹೊರ ರಾಜ್ಯದ ಮೀನು ವಾಹನಗಳು ಜಿಲ್ಲೆ ಪ್ರವೇಶಿಸಿದರೆ ಸಾಮಾಜಿಕ ಅಂತರ ಕಾಪಾಡುವಲ್ಲಿ ಮತ್ತಷ್ಟು ಸಮಸ್ಯೆ ಆಗಬಹುದು. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡಕ್ಕೆ ಹೊರ ರಾಜ್ಯದ ಮೀನು ವಾಹನ ಪ್ರವೇಶ ತಕ್ಷಣ ನಿರ್ಬಂಧ ಹೇರಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Comments are closed.