ಆರೋಗ್ಯ

ದೇಹಕ್ಕೆ ಅತಿಯಾದ ಇನ್ಸುಲಿನ್’ ಬಳಕೆ ಅರೋಗ್ಯ ದೃಷ್ಠಿಯಿಂದ ನಿಜವಾಗಲೂ ಸುರಕ್ಷಿತವೇ…?

Pinterest LinkedIn Tumblr

ಮಾನವ ಇನ್ಸುಲಿನ್’ ಬಳಸಲಾರಂಭಿಸಿದ ಕೆಲವೇ ದಿನಗಳಲ್ಲಿ, ಅದನ್ನು ಚುಚ್ಚಿಸಿಕೊಂಡ ಕೆಲವರಲ್ಲಿ ರಕ್ತದ ಗ್ಲೂಕೋಸ್ ಪ್ರಮಾಣವು ತೀರಾ ಕಡಿಮೆಯಾಗುವುದನ್ನು ಗಮನಿಸಲಾಯಿತು. ಅಂತಹವರಲ್ಲಿ ಹೆಚ್ಚಿನವರಿಗೆ ಅದರ ಅರಿವುಂಟಾಗದೆ ಕೆಲವರು ಪ್ರಜ್ಞಾ ಶೂನ್ಯ ರಾದರು. ಕೆಲವರು ರಾತ್ರಿಯ ವೇಳೆ ಮಲಗಿದಲ್ಲಿಯೇ ಸಾವನ್ನಪಿದ ಪ್ರಕರಣಗಳೂ ವರದಿಯಾದವು. ಇದನ್ನು ಪರಿಗಣಿಸಿ ಪ್ರತಿಷ್ಠಿತ ಲಿವರ್ ಪೂಲ್ ವಿಶ್ವವಿದ್ಯಾಲಯದಲ್ಲೊಂದು ಅಧ್ಯಯನವನ್ನು ನಡೆಸಲಾಯಿತು.

ಒಟ್ಟು ಏಳು ಜನರನ್ನಷ್ಟೇ ಒಳಗೊಂಡಿದ್ದ ಈ ಅಧ್ಯಯನವು ‘ಮಾನವ ಇನ್ಸುಲಿನ್’ ಪ್ರಾಣಿಜನ್ಯ ಇನ್ಸುಲಿನ್ ನಷ್ಟೇ ಸುರಕ್ಷಿತವೆಂಬ ತೀರ್ಮಾನಕ್ಕೆ ಬಂದೇ ಬಿಟ್ಟಿತು ಹಾಗೂ ಇದನ್ನು ಸಹ ದಿ ಲಾನ್ಸೆಟ್ ಪ್ರಕಟಿಸಿತು.

ನಂತರದ ದಿನಗಳಲ್ಲೂ ‘ಮಾನವ ಇನ್ಸುಲಿನ್’ ನ ಉತ್ಕೃಷ್ಟತೆಯ ಬಗ್ಗೆ, ಲಾಭಗಳ ಬಗ್ಗೆ ಹಲವಾರು ಲೇಖನಗಳು ಪ್ರಕಟಗೊಂಡವು, ಹಲವಾರು ಗೋಷ್ಠಿಗಳು ನಡೆದವು. ಪ್ರಾಣಿಜನ್ಯ ಇನ್ಸುಲಿನ್ ಅನ್ನು ಬಳಸುವುದು ಹಾಸ್ಯಾಸ್ಪದವೆಂಬಂತೆ ಬಿಂಬಿಸಲಾಯಿತು. ಮಂಗಲ್ ಪಾಂಡೆಯಂತವರು ಪ್ರಾಣಿಜನ್ಯ ಉತ್ಪನ್ನಗಳ ವಿರುದ್ಧ ಹೋರಾಡಿದಂತಹ ದೇಶದಲ್ಲಿ ಇಂದಿಗೂ ಕೆಲ ವೈದ್ಯರು ಪ್ರಾಣಿಜನ್ಯ ಇನ್ಸುಲಿನ್ ಅನ್ನು ಬಳಸುತ್ತಿದ್ದಾರೆ ಎಂದು ಮೂದಲಿಸುವ ಲೇಖನವೊಂದು ನಾಡಿನ ಪ್ರಮುಖ ದೈನಿಕವೊಂದರಲ್ಲಿ ಇತ್ತೀಚೆಗೆ ಪ್ರಕಟವಾಗಿತ್ತು.

ಇವೆಲ್ಲದರ ನಡುವೆ ಪ್ರಾಣಿಜನ್ಯ ಇನ್ಸುಲಿನ್ ಅನ್ನು ನಿಧಾನವಾಗಿ ಮಾರುಕಟ್ಟೆಯಿಂದ ಹಿಂದೆಗೆಯುವ ಪ್ರಯತ್ನಗಳು ಮುಂದುವರಿದಿದ್ದು, ಈಗ ಮಧುಮೇಹಿಗಳೆಲ್ಲರೂ ‘ಮಾನವ ಇನ್ಸುಲಿನ್’ ಅನ್ನು ಕಡ್ಡಾಯವಾಗಿ ಬಳಸಬೇಕಾದ ಬಲಾತ್ಕಾರಕ್ಕೆ ಒಳಗಾಗುವಂತಾಗಿದೆ.

ಆದರೆ ‘ಮಾನವ ಇನ್ಸುಲಿನ್’ ಬಳಕೆಯಿಂದ ಹೇಳಿಕೊಳ್ಳುವಂತಹಾ ಯಾವುದೇ ಪ್ರಯೋಜನಗಳಿಲ್ಲವೆನ್ನುವುದು ಕಳೆದ ಇಪ್ಪತ್ತೈದು ವರ್ಷಗಳ ಅನುಭವದಿಂದಲೂ, ಹಲವು ಅಧ್ಯಯನಗಳಿಂದಲೂ ಸಾಬೀತಾಗಿದೆ. ಇನ್ಸುಲಿನ್ ಚುಚ್ಚುಮದ್ದಿನ ಪ್ರಮಾಣದಲ್ಲಿ ಇಳಿಕೆಯಾಗಬಹುದು, ಬಳಕೆ ಹೆಚ್ಚಿದಂತೆ ಬೆಲೆಯಲ್ಲಿ ಇಳಿಕೆಯಾಗಬಹುದು ಎಂಬಿತ್ಯಾದಿ ಭರವಸೆಗಳೆಲ್ಲ ಬರೇ ಪೊಳ್ಳೆಂದು ಸಾಬೀತಾಗಿಬಿಟ್ಟಿವೆ.

‘ಮಾನವ ಇನ್ಸುಲಿನ್’ ಪ್ರಾಣಿಜನ್ಯ ಇನ್ಸುಲಿನ್ ಗಿಂತ ಯಾವುದೇ ರೀತಿಯಲ್ಲಿ ಉತ್ತಮವೆನ್ನುವುದಕ್ಕೆ ಸಾಕಷ್ಟು ಅಧಾರಗಳಿಲ್ಲವೆಂದು ಸ್ಪಷ್ಟವಾದ ಶಬ್ದಗಳಲ್ಲಿ ಹೇಳಿದೆ. ”ಮಾನವ ಇನ್ಸುಲಿನ್’ ಹಾಗೂ ಪ್ರಾಣಿಜನ್ಯ ಇನ್ಸುಲಿನ್ ಗಳ ಪರಿಣಾಮಗಳನ್ನೂ, ಅಡ್ಡ ಪರಿಣಾಮಗಳನ್ನೂ ಹೋಲಿಸಿದಾಗ ಹೇಳಿಕೊಳ್ಳುವಂತಹಾ ಯಾವುದೇ ವ್ಯತ್ಯಾಸವೂ ಗೋಚರಿಸುವುದಿಲ್ಲ. ರೋಗಿಗಾದ ಪ್ರಯೋಜನಗಳಿಗೆ ಸಂಬಂಧಿಸಿದ ಹಲವಾರು ವಿಷಯಗಳನ್ನು, ಆರೋಗ್ಯದ ಗುಣಮಟ್ಟ ಅಥವಾ ಮಧುಮೇಹದ ತೊಂದರೆಗಳು ಹಾಗೂ ಅದರಿಂದಾದ ಸಾವುಗಳು ಇತ್ಯಾದಿಗಳನ್ನು, ಉನ್ನತ ದರ್ಜೆಯ ಅಧ್ಯಯನಗಳಲ್ಲಿ ಇದುವರೆಗೂ ಪರೀಕ್ಷಿಸಿಯೇ ಇಲ್ಲ.
ಲಭ್ಯವಿರುವ 45 ಅಧ್ಯಯನಗಳನ್ನು ಪರಿಗಣಿಸಿದಾಗ ವಿಭಿನ್ನ ಇನ್ಸುಲಿನ್ ಗಳ ಮಧ್ಯೆ ಯಾವದೇ ವ್ಯತ್ಯಾಸವಿರುವುದು ಕಂಡುಬರುವುದಿಲ್ಲ.’ ಈ ವರದಿಯು ಒಂದು ತೀಕ್ಷ್ಣವಾದ ಎಚ್ಚರಿಕೆಯನ್ನೂ ನೀಡುತ್ತದೆ: ‘ಮಾನವ ಇನ್ಸುಲಿನ್’ ಆನ್ನು ಮಾರುಕಟ್ತೆಗೆ ಪರಿಚಯಿಸುವಾಗ ಆದ ಕಥೆಯು ಪುನಾರಾವರ್ತೆನೆಯಾಗಬಹುದು: ಪ್ರಯೋಜನಗಳು ಮತ್ತು ಸುರಕ್ಷತೆಯ ಬಗ್ಗೆ ಸಾಕಷ್ಟು ಆಧಾರಗಳಿಲ್ಲದೆಯೇ ಇನ್ನಷ್ಟು ಹೊಸ ಔಷಧಗಳು ಹಾಗೂ ತಂತ್ರ ಜ್ಞಾನಗಳನ್ನು ಕೂಡಾ ಮಾರುಕಟ್ಟೆಗೆ ಪರಿಚಯಿಸಿಬಿಡುವ ಸಾಧ್ಯತೆಗಳಿವೆ.’

ಮಾನವ ಇನ್ಸುಲಿನ್ ಬಳಕೆಯಿಂದ ಅಡ್ಡ ಪರಿಣಾಮಗಳು ಕಡಿಮೆಯಾಗುವ ಬದಲಾಗಿ ಹೆಚ್ಚೇ ಆಗಿರುವ ಬಗ್ಗೆ ಹಲವಾರು ವರದಿಗಳಿವೆ. ಪ್ರಾಣಿಜನ್ಯ ಇನ್ಸುಲಿನ್ ಬಳಕೆಯ ಎಂಭತ್ತು ವರ್ಷಗಳಲ್ಲಿ ಎಂದೂ ವರದಿಯಾಗದಿದ್ದ ಸಂಧಿನೋವು ಮುಂತಾದ ತೊಂದರೆಗಳು ಮಾನವ ಇನ್ಸುಲಿನ್ ಬಳಸುವವರಲ್ಲಿ ಕಂಡುಬಂದಿವೆ. ಅಮೆರಿಕದಲ್ಲಿ ವರದಿಯಾಗುವ ಔಷಧಗಳ ಅಡ್ದ ಪರಿಣಾಮಗಳಲ್ಲಿ ಶೇ. 2ರಷ್ಟು ಮಾನವ ಇನ್ಸುಲಿನ್ ಬಳಕೆದಾರರದ್ದೇ ಆಗಿರುತ್ತವೆ. ಮಾನವ ಇನ್ಸುಲಿನ್ ಪ್ರಾಣಿಜನ್ಯ ಇನ್ಸುಲಿನಿನಷ್ಟೇ ಅಸಹಿಷ್ಣುತೆಗೆ ಕಾರಣವಾಗುತ್ತದೆ ಮತ್ತು ಶೇ. 55 ಸಂದರ್ಭಗಳಲ್ಲಿ ಪ್ರತಿಕಾಯಗಳನ್ನೂ ಉಂಟುಮಾಡುತ್ತದೆ.

ರಕ್ತದ ಗ್ಲೂಕೋಸ್ ಪ್ರಮಾಣದಲ್ಲಿ ರೋಗಿಯ ಅರಿವಿಗೆ ಬಾರದೆಯೇ ವಿಪರೀತವಾದ ಇಳಿಕೆಯಾಗುವುದು, ವರ್ತನೆಯಲ್ಲಿ ಬದಲಾವಣೆಗಳಾಗುವುದು, ಮಧುಮೇಹದ ನಿಯಂತ್ರಣವು ಸಮರ್ಪಕವಾಗಿಲ್ಲದಿರುವುದು ಇವೇ ಮುಂತಾದ ಹಲವು ಸಮಸ್ಯೆಗಳು ಮಾನವ ಇನ್ಸುಲಿನ್ ಬಳಸುವವರಲ್ಲಿ ಉಂಟಾಗುತ್ತವೆ.

ಇನ್ಸುಲಿನ್ ಬಳಕೆಯ ಬಗ್ಗೆ ಈ ಕೆಳಗಿನ ವಿಚಾರಗಳು ಸುಸ್ಪಷ್ಟ:
*ಮಾನವ ಇನ್ಸುಲಿನ್ ನೈಸರ್ಗಿಕವಾದುದಲ್ಲ, ಬದಲಾಗಿ, ಮಾನವ ಇನ್ಸುಲಿನ್ ನ ವಂಶವಾಹಿಯನ್ನು ಬ್ಯಾಕ್ಟೀರಿಯಾದ ಕೋಶದೊಳಕ್ಕೆ ಕಸಿಮಾಡಿ ತಯಾರಿಸಿದ ಕೃತಕ ಉತ್ಪನ್ನವಾಗಿದೆ.
*ಮಾನವ ಇನ್ಸುಲಿನ್ ನಲ್ಲಿ ಪ್ರಾಣಿಜನ್ಯ ಇನ್ಸುಲಿನಿಗಿಂತ ಮಿಗಿಲಾದ ಯಾವುದೇ ರೀತಿಯ ಲಾಭವಿಲ್ಲ; ಅದರ ಬೆಲೆಯು ಪ್ರಾಣಿಜನ್ಯ ಇನ್ಸುಲಿನ್ ಗಿಂತ ದುಪ್ಪಟ್ಟು.
*ಮಾನವ ಇನ್ಸುಲಿನ್ ಬಳಕೆಯಲ್ಲಿ ಅಡ್ಡ ಪರಿಣಾಮಗಳು (ವಿಶೇಷವಾಗಿ ಅಸಹಿಷ್ಣುತೆ ಹಾಗೂ ಪ್ರತಿಕಾಯಗಳು) ಕಡಿಮೆಯಿರುತ್ತವೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ.
*ಆದ್ದರಿಂದ ಹಲವು ದಶಕಗಳ ಅನುಭವವಿರುವ, ಕಡಿಮೆ ಬೆಲೆಯ, ಸುರಕ್ಷಿತವಾದ, ನೈಸರ್ಗಿಕವಾದ ಪ್ರಾಣಿಜನ್ಯ ಇನ್ಸುಲಿನ್ ಗೆ ಪ್ರಥಮ ಆದ್ಯತೆಯನ್ನು ನೀಡುವುದೊಳಿತು.
*ಈಗಾಗಲೇ ಪ್ರಾಣಿಜನ್ಯ ಇನ್ಸುಲಿನ್ ಬಳಸುತ್ತಿರುವವರು ‘ಮಾನವ ಇನ್ಸುಲಿನ್’ ಗೆ ಬದಲಾಯಿಸಿಕೊಳ್ಳುವ ಅಗತ್ಯವಿಲ್ಲ.
*ಮಾನವ ಇನ್ಸುಲಿನ್ ಬಳಸುತ್ತಿರುವವರಲ್ಲಿ ತೊಂದರೆಗಳಿದ್ದರೆ, ಪ್ರಾಣಿಜನ್ಯ ಇನ್ಸುಲಿನ್ ಬಳಸಬಹುದು.
*ನಿಸರ್ಗದ ರಚನೆಗಳೆಲ್ಲ ಅತಿ ವಿಶಿಷ್ಟವಾಗಿರುವುದರಿಂದ, ಪ್ರಯೋಗಾಲಯಗಳಲ್ಲಿ ಮನಬಂದಂತೆ ಸಿದ್ದಪಡಿಸಿದ ಪ್ರೊಟೀನುಗಳನ್ನು, ಸದೃಶ ಇನ್ಸುಲಿನ್ ಗಳೆಂದು ನಾಮಕರಣ ಮಾಡಿದರೂ ಕೂಡಾ, ಇನ್ಸುಲಿನ್ ಎಂದು ಪರಿಗಣಿಸಲು ಸಾಧ್ಯವಿಲ್ಲ; ಇವುಗಳ ಅಗತ್ಯವೂ ನಮಗಿಲ್ಲ.

Comments are closed.