ತೂಕ ಇಳಿಸಿಕೊಳ್ಳಬೇಕು ಎಂದು ಯತ್ನಿಸುವಾಗ ಬೊಜ್ಜು ಹೊಟ್ಟೆಯು ಅಡ್ಡಿಯಾಗಿರುತ್ತದೆ. ನೋಡಲು ಅಸಹ್ಯವಾಗಿರುವುದಲ್ಲದೆ….ಬೊಜ್ಜು ಇರುವವರನ್ನು ನೋಡಿ ನಗುತ್ತಾರೆ, ವಿವಿಧ ರೀತಿಯಲ್ಲಿ ಮಾತಾಡಿಕೊಳ್ಳುವರೂ ಇರುತ್ತಾರೆ. ಬೊಜ್ಜಿನ ಬಗ್ಗೆ ಚಿಂತಿಸುವುದನ್ನು ಬಿಟ್ಟು, ಕೆಲವು ಸಲಹೆಗಳನ್ನು ಅನುಸರಿಸುವುದರಿಂದ ಅಂದರೆ ಅಡುಗೆ ಮನೆಯಲ್ಲೇ ಲಭ್ಯವಿರುವ ಶುಂಠಿ-ಜೀರಿಗೆಯಿಂದ ಬೊಜ್ಜನ್ನು ಕರಗಿಸಬಹುದು.
ಶುಂಠಿಯಿಂದಾಗುವ ಪ್ರಯೋಜನೆಗಳು :
ಪ್ರಾಚೀನ ಕಾಲದಿಂದಲೂ ಎಲ್ಲರಿಗೂ ತಿಳಿದಿರುವ ಶುಂಠಿಯನ್ನು ಪ್ರತಿಯೊಂದು ಭಾರತೀಯರ ಅಡುಗೆ ಮನೆಯಲ್ಲೂ ಕಾಣಬಹುದು. ವಿಶೇಷವಾದ ಔಷಧ ಗುಣವುಳ್ಳ ಶುಂಠಿಯನ್ನು ಆಹಾರ ಹಾಗೂ ಜೇನುತುಪ್ಪಕ್ಕೆ ಬೆರೆಸಿ ಬಳಸಿದರೆ ಸುವಾಸನೆಯೊಂದಿಗೆ ರುಚಿಯಾಗಿರುತ್ತದೆ. ಹೊಟ್ಟೆನೋವಿಗೆ ಇದು ದಿವ್ಯೌಷಧ. ಉಷ್ಣತೆಯನ್ನು ಕಡಿಮೆಮಾಡುತ್ತದೆ. ಹೀಗೆ ಮಣ್ಣಿನಲ್ಲಿ ಬೆಳೆಯುವ ಶುಂಠಿಯು ಅನೇಕ ಪ್ರಯೋಜನಗನ್ನು ಹೊಂದಿರುತ್ತದೆ.
ಜೀರಿಗೆಯಿಂದಾಗುವ ಪ್ರಯೋಜನಗಳು :
ಜೀರಿಗೆಯು ಮಧ್ಯಧರಾ ಪ್ರಾಂತ್ಯದಲ್ಲಿ ಹುಟ್ಟಿಕೊಂಡಿದ್ದು, ಇದರಲ್ಲಿ ಪೊಟಾಶಿಯಂ, ಐರನ್ ಹೇರಳವಾಗಿರುತ್ತದೆ. ಇದರೊಂದಿಗೆ ವಿಟಮಿನ್ ಸಿ, ಇ, ಕೆ ಗಳು ಕಡಿಮೆ ಪ್ರಮಾಣದಲ್ಲಿರುತ್ತವೆ. ಅಧಿಕ ಕೊಬ್ಬನ್ನು ಇಳಿಸುವುದರಲ್ಲಿ, ಕೊಬ್ಬಿನ ಮಟ್ಟವನ್ನು ಹತೋಟಿಯಲ್ಲಿಡಲು ಜೀರಿಗೆ ಉಪಯೋಗವಾಗುತ್ತದೆ.
ಹಾಗಾದರೆ ಶುಂಠಿ-ಜೀರಿಗೆ ಇವೆರಡರ ಮಿಶ್ರಣವನ್ನು ತಯಾರಿಸುವ ಹಾಗೂ ಸೇವಿಸುವ ವಿಧಾನವನ್ನು ನೋಡೋಣ…
ಒಂದು ಟೇಬಲ್ ಚಮಚ ಜೀರಿಗೆಯನ್ನು ಪುಡಿ ಮಾಡಿ 1/2 ಲೀ. ನೀರಿನಲ್ಲಿ ಹಾಕಿ ಆ ನೀರು ಅರ್ಧದಷ್ಟು ಅಂದರೆ 1/4 ಲೀ. ನಷ್ಟು ಇಳಿಯುವವರೆಗೂ ಕುದಿಸಬೇಕು. ರುಚಿಗಾಗಿ ಏಲಕ್ಕಿ, ಲವಂಗ, ನಿಂಬೆರಸ, ಸಣ್ಣದಾಗಿ ಹೆಚ್ಚಿಕೊಂಡ ಶುಂಠಿಯನ್ನು ಬೆರೆಸಿದ ಮಿಶ್ರಣವನ್ನು ಮುಂಜಾನೆ ಶೋಧಿಸಿಕೊಂಡು ಕುಡಿಯಬೇಕು. ನಂತರ 45 ನಿಮಿಷಗಳ ಕಾಲ ವ್ಯಾಯಾಮ ಮಾಡುವುದರ ಜೊತೆಗೆ ಡಯಟ್ ಮಾಡಬೇಕು. 10 ದಿನ ಹೀಗೆ ಮಾಡಿದರೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ.
ಈ ಮಿಶ್ರಣದ ಉಪಯೋಗಗಳು :
ಶುಂಠಿ-ಜೀರಿಗೆಯ ಮಿಶ್ರಣವು ಮೆಟಬಾಲಿಜಂ ಅನ್ನು ಹೆಚ್ಚಿಸುತ್ತದೆ. ಮೆಟಬಾಲಿಜಂ ಹೆಚ್ಚುವುದರಿಂದ ಕ್ಯಾಲರಿಗಳು ವ್ಯರ್ಥವಾಗಿ ದಿನವಿಡೀ ಉತ್ಸಾಹದಿಂದ ಇರಬಹುದು. ತೂಕ ಇಳಿಸುತ್ತದೆ. ಅಲ್ಲದೆ ಏನಾದರೊಂದು ತಿನ್ನುತ್ತಿರಬೇಕು ಎಂಬ ಆಕಾಂಕ್ಷೆಯನ್ನು ತಡೆಯುವುದರಿಂದ ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ
Comments are closed.