ರಾಷ್ಟ್ರೀಯ

4 ವಾರಗಳ ಕಾಲ ಯಾವುದೇ ಕೇಸ್​ ವಿಚಾರಣೆ ಇಲ್ಲ ಎಂದ ಸುಪ್ರೀಂ

Pinterest LinkedIn Tumblr


ನವದೆಹಲಿ(ಏ.13): ಸುಪ್ರೀಂಕೋರ್ಟ್​ಗೂ ಕೊರೋನಾ ವೈರಸ್​​ ಬಿಸಿ ತಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಆದೇಶದ ಮೇರೆಗೆ ಏಪ್ರಿಲ್​​​ 14ನೇ ತಾರೀಕಿನಿಂದ ಲಾಕ್​​ಡೌನ್​​ ಏ.30ರವರೆಗೂ ವಿಸ್ತರಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕೇಸಿನ ವಿಚಾರಣೆ ಸಾಧ್ಯವಿಲ್ಲ ಎಂದು ನ್ಯಾಯಲಯ ಆದೇಶಿಸಿದೆ. ಭಾರತವೂ ಸಹಜ ಸ್ಥಿತಿಗೆ ಮರಳಿದ ಮೇಲೆ ಅಂದರೆ ಮುಂದಿನ 4 ವಾರಗಳವರೆಗೂ ಯಾವುದೇ ಪ್ರಕರಣ ವಿಚಾರಣೆ ನಡೆಸಲಾಗುವುದಿಲ್ಲ ಎಂದು ಆದೇಶಿಸಿ ಮುಂದೂಡಿದೆ.

ಈ ಹಿಂದೆ ಮಾ.13ರಂದು ಕೊರೋನಾ ವೈರಸ್ ಅಪಾಯವನ್ನು ತಪ್ಪಿಸುವ ಕ್ರಮವಾಗಿ ತುರ್ತು ಪ್ರಕರಣಗಳನ್ನು ಮಾತ್ರ ಆಲಿಸಲು ಸುಪ್ರೀಂಕೋರ್ಟ್ ನಿರ್ಧರಿಸಿತ್ತು. ಉನ್ನತ ನ್ಯಾಯಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ವಕೀಲರು ನ್ಯಾಯಾಲಯದ ಕೋಣೆಗೆ ಪ್ರವೇಶಿಸುವುದನ್ನು ತೀವ್ರವಾಗಿ ನಿರ್ಬಂಧಿಸಿತ್ತು.

ಮುಖ್ಯ ನ್ಯಾಯಾಧೀಶ ಬಾಬ್ಡೆ ಇತರ ಹಿರಿಯ ನ್ಯಾಯಾಧೀಶರು ನಡೆಸಿದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಸುಪ್ರೀಂ ಕೋರ್ಟ್ ಕ್ಯಾಂಪಸ್ ಮತ್ತು ನ್ಯಾಯಾಲಯದ ಕೊಠಡಿಗಳು ಕಿಕ್ಕಿರಿದು ತುಂಬಿರುತ್ತವೆ. ವಿಶೇಷವಾಗಿ ಸೋಮವಾರ ಮತ್ತು ಶುಕ್ರವಾರ ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ಪ್ರವೇಶಕ್ಕಾಗಿ ಪಟ್ಟಿಮಾಡಿದಾಗ ಕರೋನಾ ವೈರಸ್ ಹರಡುವ ಆತಂಕವಿದೆ. ತುರ್ತು ವಿಷಯಗಳನ್ನು ಎದುರಿಸಲು ಕೇವಲ ರಜಾ ಬೆಂಚ್ ಕುಳಿತುಕೊಳ್ಳುವ ಮೂಲಕ ಹೋಳಿ ವಿರಾಮಕ್ಕಾಗಿ ನ್ಯಾಯಾಲಯವನ್ನು ಪ್ರಸ್ತುತ ಮುಚ್ಚಲಾಗಿದೆ ಎಂದಿದ್ದರು.

ಆದರೀಗ, ಕೊರೋನಾ ವೈರಸ್​​ ದೇಶದಲ್ಲಿ ತೀವ್ರಗತಿಯಲ್ಲಿ ಹರಡುತ್ತಿದೆ. ಇದರಿಂದ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯೂ ಏರುತ್ತಿದೆ. ಹಾಗಾಗಿ ಸುಪ್ರೀಂಕೋರ್ಟ್​ ಈ ತೀರ್ಮಾನ ತೆಗೆದುಕೊಂಡಿದೆ.

Comments are closed.