ಕುಂದಾಪುರ: ಮಹಾಮಾರಿ ಕೋವಿಡ್-19 ಕೊರೋನಾ ಎಲ್ಲೆಡೆ ಕಾಡುತ್ತಿದ್ದು ಕೊರೋನಾ ತಡೆಗಟ್ಟುವಿಕೆ ಮತ್ತು ಹರಡದಂತೆ ಎಚ್ಚರಿಕೆ ನಿಟ್ಟಿನಲ್ಲಿ ಕಳೆದ ಒಂದೆರಡು ದಿನಗಳ ಹಿಂದೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ವಿದ್ಯುತ್ ದೀಪ ಆರಿಸಿ ಇತರೆ ದೀಪ ಪ್ರಜ್ವಲನ ಮಾಡುವಂತೆ ಕರೆಕೊಟ್ಟಿದ್ದು ಭಾನುವಾರ ರಾತ್ರಿ ಇದಕ್ಕೆ ಕುಂದಾಪುರ ಭಾಗದಲ್ಲಿ ಉತ್ತಮ ರೆಸ್ಫಾನ್ಸ್ ಸಿಕ್ಕಿದೆ.

ಗೋಪಾಡಿಯಲ್ಲಿ ಸುಟ್ಟುಹೋದ ಕೊರೋನಾ!
ಪ್ರಧಾನಿ ಮೋದಿ ಕೊಟ್ಟ ಕರೆಗೆ ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಮದ ಜೀವಿ ಆರ್ಟ್ಸ್ ಸಂಸ್ಥೆ ಮಾಲಿಕ ಜೀವಿ ವೆಂಕಟೇಶ್ ಆಚಾರ್ಯ ಅವರ ನಿವಾಸದಲ್ಲಿ ವಿಭಿನ್ನ ರೀತಿಯಲ್ಲಿ ಕೊರೋನಾ ವಿರುದ್ಧ ಜಾಗ್ರತಿ ಹೋರಾಟ ಮಾಡಲಾಯಿತು. ಜೀವಿ ಆರ್ಟ್ಸ್ ಸಂಸ್ಥೆ ಮ್ಯಾನೇಜರ್ ವಿನೇಂದ್ರ ಆಚಾರ್ಯ ಅವರು ಕೊರೋನಾ ಪ್ರತಿಕೃತಿಯನ್ನು ರಚಿಸಿದ್ದು ಅದನ್ನು ಮಾಲಿಕರ ನಿವಾಸದಲ್ಲಿ ಭಾನುವಾರ ರಾತ್ರಿ ಸರಿಯಾಗಿ 9 ಗಂಟೆ.. 9 ನಿಮಿಷಕ್ಕೆ 9 ದೀಪಗಳ ಸಹಕಾರದಲ್ಲಿ ದಹಿಸುವ ಮೂಲಕ ಹೆಮ್ಮಾರಿ ಕೊರೋನಾ ತೊಲಗಲಿ ಎಂದು ಪ್ರಾರ್ಥಿಸಲಾಯಿತು.
ಇನ್ನು ಕುಂದಾಪುರ ತಾಲೂಕಿನ ಬಹುತೇಕ ಕಡೆಗಳಲ್ಲಿ ೯ ಗಂಟೆಗೆ ವಿದ್ಯುತ್ ದೀಪ ಆರಿಸಿ ಬಳಿಕ ಮನೆ ಮುಂಭಾಗ ದೀಪ ಹಚ್ಚಿ, ಸ್ಲ್ಯಾಬ್ ಮೇಲೆ, ಬಾಲ್ಕನಿಯಲ್ಲಿ ದೀಪ ಹಚ್ಚುವ ಮೂಲಕ ಕೊರೋನಾ ಹಿಮ್ಮೆಟ್ಟಿಸುವ ಸಂಕಲ್ಪ ತೊಡಲಾಯಿತು.
(ವಿಡಿಯೋ, ವರದಿ- ಯೋಗೀಶ್ ಕುಂಭಾಸಿ)
Comments are closed.