ರಾಷ್ಟ್ರೀಯ

ಕೊರೋನಾ ವಿರುದ್ಧ ಪ್ರಧಾನಿ ಮೋದಿ ಕರೆ ನೀಡಿದ್ದ ದೀಪ ಬೆಳಗಿಸಿ ಅಭಿಯಾನಕ್ಕೆ ದೇಶದ ಜನರಿಂದ ಸಕತ್ ರೆಸ್ಪಾನ್ಸ್ ; ಸಾಥ್ ನೀಡಿದ ಗಣ್ಯಾತಿಗಣ್ಯರು!

Pinterest LinkedIn Tumblr

ಬೆಂಗಳೂರು: ಏ.05 ರಂದು ರಾತ್ರಿ 9 ಗಂಟೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್ ಮುಂತಾದ ಗಣ್ಯರಾದಿಯಾಗಿ ಸಾಮಾನ್ಯ ಜನರೂ ದೀಪ ಬೆಳಗಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಗೆ ದೇಶವಾಸಿಗಳು ಮತ್ತೊಮ್ಮೆ ಸಂಪೂರ್ಣ ಓಗೊಟ್ಟಿದ್ದಾರೆ.

ರಾತ್ರಿ ಸರಿಯಾಗಿ 9 ಗಂಟೆಗೆ ವಿದ್ಯುತ್ ದೀಪಗಳನ್ನು ಆರಿಸಿ, 9 ನಿಮಿಷಗಳ ದೀಪಗಳನ್ನು ಬೆಳಗುವ ಮೂಲಕ ಕೊರೋನಾ ಭೀತಿಯನ್ನು ತೊಲಗಿಸುವುದಕ್ಕೆ, ಲಾಕ್ ಡೌನ್ ನಿಂದ ಉಂಟಾಗಿರುವ ಏಕಾಂಗಿತನವನ್ನು ತೊಲಗಿಸಿ ಯಾರೂ ಏಕಾಂಗಿಯಲ್ಲ ಎಂಬ ಸಂದೇಶ ಪರಸ್ಪರ ವಿನಿಮಯ ಮಾಡಿಕೊಂಡಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮತ ಭೇದಗಳನ್ನು ಮರೆತು, ಪ್ರಧಾನಿ ನರೇಂದ್ರ ಮೋದಿ ಅವರ ದೀಪಬೆಳಗುವ ಕರೆಗೆ ಭರ್ಜರಿ ಪ್ರತಿಕ್ರಿಯೆ ದೊರೆತಿದ್ದು, ಪೊಲೀಸ್ ಅಧಿಕಾರಿಗಳು, ಸಾಮಾನ್ಯ ಜನತೆ ದೀಪ ಬೆಳಗುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇತ್ತ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಸಹ ದೀಪ ಹಚ್ಚಿದ್ದು ವಿಶೇಷವಾಗಿತ್ತು. ಬಹುತೇಕ ಜನರು ಕ್ಯಾಂಡಲ್ ನ್ನು ಬಳಸದೇ ಹಣತೆಗಳ ಮೂಲಕ ದೀಪ ಬೆಳಗಿದ್ದು ವಿಶೇಷವಾಗಿತ್ತು.

Comments are closed.